ಗುರುವಾರ , ಜೂನ್ 4, 2020
27 °C

ವೊಗೊ, ಬೌನ್ಸ್‌ ಸೇವೆ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗ್ರಾಹಕರಿಗೆ  ಬಾಡಿಗೆ ಸ್ಕೂಟರ್‌ ಒದಗಿಸುವ ಬೌನ್ಸ್‌ ಮತ್ತು ವೊಗೊ, ನಗರದಲ್ಲಿ ತಮ್ಮ ಸೇವೆ ಪುನರಾರಂಭಗೊಳಿಸಿವೆ.

ಗ್ರಾಹಕರ ಬೇಡಿಕೆ ಆಧರಿಸಿ  ಸ್ಕೂಟರ್ ಮತ್ತು ಬೈಕ್ ಬಾಡಿಗೆ ಸೇವೆ ಒದಗಿಸುವ ವೊಗೊ ಬಳಕೆದಾರರಿಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸಿದೆ.

ವೊಗೊ ಡಾಕಿಂಗ್ ಸ್ಟೇಷನ್‍ಗಳಿಂದ ವಾಹನಗಳನ್ನು ಪಡೆದುಕೊಳ್ಳಲು ಹಿಂದೇಟು ಹಾಕುವ ಗ್ರಾಹಕರಿಗೆ ಸ್ಯಾನಿಟೈಸ್ ಮಾಡಲಾದ ಬೈಕ್‍ಗಳನ್ನು ಮನೆಗೆ ತಲುಪಿಸಲಿದೆ. ಕಂಪನಿಯು ನಗರದಲ್ಲಿ 50 ಹೆಚ್ಚುವರಿ ಡಾಕಿಂಗ್ ಸ್ಟೇಷನ್‍ಗಳನ್ನು ತೆರೆಯಲಿದೆ. ಬೈಕ್‌ ಬಾಡಿಗೆ ಅವಧಿಯನ್ನೂ ಹೆಚ್ಚಿಸಿದೆ. ವಾಹನಗಳನ್ನು ಬಳಕೆದಾರರಿಗೆ ಹಸ್ತಾಂತರಿಸುವ ಮುನ್ನ ಸೂಕ್ಷ್ಮಾಣು ನಿರೋಧಕಗಳಿಂದ ಸ್ವಚ್ಛಗೊಳಿಸಿದೆ. ಕಂಪನಿಯು ಗ್ರಾಹಕರಿಗೆ ಸ್ವಚ್ಛತಾ ಕಿಟ್‌ಗಳನ್ನು ವಿತರಿಸಲಿದೆ ಎಂದು ಕಂಪನಿಯ ಸಿಇಒ ಆನಂದ್ ಅಯ್ಯಾದುರೈ ತಿಳಿಸಿದ್ದಾರೆ.

 ಬೌನ್ಸ್‌ ಸೇವೆ:  ಕೀ ರಹಿತ ಬಾಡಿಗೆ ಸ್ಕೂಟರ್‌ (dock-less) ಸೇವೆ ಬಳಸಿ ನಗರದ ವ್ಯಾಪ್ತಿಯಲ್ಲಿ ತಮ್ಮಿಷ್ಟದ ಸ್ಥಳಕ್ಕೆ ತೆರಳಿ ರಸ್ತೆ ಬದಿಯಲ್ಲಿಯೇ ಸ್ಕೂಟರ್‌ ಬಿಟ್ಟು ಹೋಗುವ (Pay Per Ride) ಸೌಲಭ್ಯದ ಬೌನ್ಸ್‌ ಕೂಡ ತನ್ನ ಸೇವೆಗೆ ಚಾಲನೆ ನೀಡಿದೆ.

ನಗರ ವ್ಯಾಪ್ತಿಯಲ್ಲಿ ದೀರ್ಘ ಸಮಯದವರೆಗೆ ಬಾಡಿಗೆ ನೀಡುವ ‘ಬೌನ್ಸ್‌–ಎ’ ಸೌಲಭ್ಯವನ್ನು ಹೊಸದಾಗಿ ಪರಿಚಯಿಸಿದೆ. ಗ್ರಾಹಕರು ಸ್ವಯಂ ಚಾಲನೆ ಮಾಡುವ ಸ್ಕೂಟರ್‌ ಬಳಸುವುದು ಅಂತರ ಕಾಪಾಡಿಕೊಳ್ಳುವ ಸುರಕ್ಷಿತ ವಿಧಾನವಾಗಿದೆ. ಲಾಕ್‌ಡೌನ್‌ ಸಡಿಲುಗೊಳ್ಳುತ್ತಿದ್ದಂತೆ ಸ್ಕೂಟರ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಕಂಪನಿ ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು