ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಕೋಡಾ ಬ್ರ್ಯಾಂಡ್‌ ಅಡಿ ಭಾರತಕ್ಕೆ ಇವಿ: ಫೋಕ್ಸ್‌ವ್ಯಾಗನ್‌

Last Updated 15 ಆಗಸ್ಟ್ 2022, 14:06 IST
ಅಕ್ಷರ ಗಾತ್ರ

ನವದೆಹಲಿ: ಫೋಕ್ಸ್‌ವ್ಯಾಗನ್‌ ಸಮೂಹವು ಭಾರತಕ್ಕೆ ಎಲೆಕ್ಟ್ರಿಕ್‌ ವಾಹನಗಳನ್ನು ತರಲು ಉದ್ದೇಶಿಸಿದ್ದು,ಸ್ಕೋಡಾ ಬ್ರ್ಯಾಂಡ್‌ ಅಡಿಯಲ್ಲಿ ಕೆಲವು ವಾಹನಗಳ ಪರೀಕ್ಷೆಯನ್ನೂ ಆರಂಭಿಸಿರುವುದಾಗಿ ಹೇಳಿದೆ.

ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಇದೆ ಎನ್ನುವುದನ್ನು ನಾವು ಗುರುತಿಸಿದ್ದೇವೆ. ಹೀಗಾಗಿ ಈಗಾಗಲೇ ಪೋರ್ಷೆ ಟೈಕಾನ್‌ ಮತ್ತು ಔಡಿ ಇ–ಟ್ರಾನ್‌ ಬಿಡುಗಡೆ ಮಾಡಲಾಗಿದೆ. ಇವರೆಡಕ್ಕೂ ಮಾರುಕಟ್ಟೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ ಎಂದು ಸ್ಕೋಡಾ ಆಟೊ–ಫೋಕ್ಸ್‌ವ್ಯಾಗನ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಪೀಯೂಷ್‌ ಅರೋರಾ ಹೇಳಿದ್ದಾರೆ.

ವಿದ್ಯುತ್‌ ಚಾಲಿತ ವಾಹನ ವಿಭಾಗದಲ್ಲಿಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್‌ ಯಾವ ಉತ್ಪನ್ನಗಳನ್ನು ಭಾರತದ ತರಬಹುದು ಎನ್ನುವ ಆಲೋಚನೆ ಮಾಡಲಾಗುತ್ತಿದೆ. ಸ್ಕೋಡಾ ಬ್ರ್ಯಾಂಡ್‌ನಲ್ಲಿ ಈಗಾಗಲೇ ಕೆಲವು ವಾಹನಗಳ ಪರೀಕ್ಷೆ ನಡೆಸಲಾಗಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಸೂಕ್ತ ಸಮಯವನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT