ಮಂಗಳವಾರ, ಅಕ್ಟೋಬರ್ 26, 2021
23 °C

‘ವಾಕರೊ’ದಿಂದ ಹೊಸ ಪ್ರಚಾರ ಅಭಿಯಾನ, ವಿಭಿನ್ನ ಪಾತ್ರಗಳಲ್ಲಿ ಅಮೀರ್‌ ಖಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಾದರಕ್ಷೆಗಳ ಪ್ರಮುಖ ಬ್ರ್ಯಾಂಡ್‌ ಆಗಿರುವ ವಾಕರೂ, ಈ ಬಾರಿಯ ಹಬ್ಬದ ಋತುವಿನಲ್ಲಿ ‘ವಾಕ್‌ ಮೋರ್‌, ರೆಸ್ಟ್‌ಲೆಸ್‌’ ಎನ್ನುವ ಹೊಸ ಮಾರುಕಟ್ಟೆ ಪ್ರಚಾರ ಅಭಿಯಾನ ಆರಂಭಿಸಿದೆ. ಇದರ ಭಾಗವಾಗಿ ನಟ ಅಮೀರ್‌ ಖಾನ್‌ ಅವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಆರು ಟಿವಿ ಜಾಹೀರಾತುಗಳನ್ನು ಮಂಗಳವಾರದಿಂದ ಬಿಡುಗಡೆ ಮಾಡಲಿದೆ.

ಬ್ರ್ಯಾಂಡ್‌ ರಾಯಭಾರಿ ಅಮೀರ್‌ ಖಾನ್‌ ಅವರು ಪ್ರಚಾರ ಸರಣಿಯ ಪ್ರತಿ ಆವೃತ್ತಿಯಲ್ಲಿ ಖಾಸಗಿ ಪತ್ತೇದಾರ, ವೃತ್ತಿ ಸಲಹೆಗಾರ, ಪ್ರಾಂಶುಪಾಲ, ಸಿಬಿಐ ಅಧಿಕಾರಿ, ವೈದ್ಯ ಮತ್ತು ಅಜ್ಜನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ಗ್ರಾಹಕರಲ್ಲಿ ಬ್ರ್ಯಾಂಡ್‌ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಹವಾಸ್ ಕ್ರಿಯೇಟಿವ್‌ ಗ್ರೂಪ್‌ ಇಂಡಿಯಾ ಸಂಸ್ಥೆಯು ಈ ಸರಣಿಯ ಪರಿಕಲ್ಪನೆಯನ್ನು ರೂಪಿಸಿ ಕಾರ್ಯಗತಗೊಳಿಸಿದೆ ಎಂದು ಹೇಳಿದೆ.

ಅಮೀರ್ ಖಾನ್ ಅವರೊಂದಿಗೆ ಈ ಹೊಸ ಪ್ರಚಾರ ಅಭಿಯಾನವನ್ನು ಆರಂಭಿಸಲು ನಾವು ಉತ್ಸುಕರಾಗಿದ್ದೇವೆ ಎಂದು ವಾಕರೂ ಇಂಟರ್‌ನ್ಯಾಷನಲ್‌ ಪ್ರವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿಕೆಸಿ ನೌಶದ್‌ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು