ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1,850 ಕೋಟಿಗೆ ವೊಕಾರ್ಡ್‌ನ ಬ್ರ್ಯಾಂಡೆಡ್ ಜೆನೆರಿಕ್‌ಗಳು ಡಾ.ರೆಡ್ಡೀಸ್‌ ಪಾಲು

Last Updated 12 ಫೆಬ್ರುವರಿ 2020, 12:37 IST
ಅಕ್ಷರ ಗಾತ್ರ

ನವದೆಹಲಿ: ಫಾರ್ಮಾ ವಲಯದ ಪ್ರಮುಖ ಕಂಪನಿಗಳಲ್ಲಿ ಒಂದಾದ ವೊಕಾರ್ಡ್‌ ಲಿಮಿಟೆಡ್‌, ಕೆಲವು ಬ್ರ್ಯಾಂಡೆಡ್‌ ಜೆನೆರಿಕ್‌ ವಿಭಾಗಗಳ ವ್ಯವಹಾರವನ್ನು ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ಗೆ ಮಾರಾಟ ಮಾಡುತ್ತಿರುವುದಾಗಿಬುಧವಾರ ಪ್ರಕಟಿಸಿದೆ.

ಭಾರತ, ನೇಪಾಳ, ಶ್ರೀಲಂಕಾ, ಭೂತಾನ್‌ ಹಾಗೂ ಮಾಲ್ಡೀವ್ಸ್‌ಗಳಲ್ಲಿ ವೊಕಾರ್ಡ್‌ನ ಬ್ಯಾಂಡೆಡ್‌ ಜೆನಿರಿಕ್‌ ವ್ಯವಹಾರಗಳನ್ನುಡಾ.ರೆಡ್ಡೀಸ್‌ ಲ್ಯಾಬೊರೇಟರಿ ₹1,850 ಕೋಟಿಗೆ ಸ್ವಾಧೀನ ಪಡಿಸಿಕೊಳ್ಳಲಿದೆ. ‌

ಉಸಿರಾಟ, ಚರ್ಮ, ನರಗಳು ಹಾಗೂ ಜೀರ್ಣವ್ಯೂಹಕ್ಕೆ ಸಂಬಂಧಿಸಿದ ಚಿಕಿತ್ಸೆ ಸೇರಿದಂತೆ ವಿವಿಧ ಚಿಕಿತ್ಸೆಗಳಿಗೆ ಬಳಕೆಯಾಗುವ 62 ಬ್ರ್ಯಾಂಡ್‌ಗಳ ಔಷಧಿ ಮಾರಾಟ ಹಕ್ಕು ಒಪ್ಪಂದವನ್ನು ಡಾ.ರೆಡ್ಡೀಸ್‌ ಪಡೆದುಕೊಂಡಿದೆ. ಮಾರಾಟ ಮತ್ತು ಮಾರ್ಕೆಟಿಂಗ್‌ ತಂಡಗಳು ಸಹ ವರ್ಗಾವಣೆಗೊಳ್ಳಲಿವೆ.

ಹಿಮಾಚಲ ಪ್ರದೇಶದ ಬದ್ದಿಯಲ್ಲಿರುವ ವೊಕಾರ್ಡ್‌ನ ತಯಾರಿಕಾ ಘಟಕ ಮತ್ತು ಅಲ್ಲಿನ ನೌಕರರು ಸಹ ಡಾ.ರೆಡ್ಡೀಸ್‌ ಮಾಲೀಕತ್ವದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ವೊಕಾರ್ಡ್‌ನ ಪ್ರ್ಯಾಕ್ಟಿನ್‌, ಝೆಡೆಕ್ಸ್‌, ಬ್ರೊ–ಝೆಡೆಕ್ಸ್‌, ಟ್ರಿಪ್ಟೊಮರ್‌ ಹಾಗೂ ಬಯೋವ್ಯಾಕ್‌ ಬ್ರ್ಯಾಂಡ್‌ಗಳು ಈಗಾಗಲೇ ದೊಡ್ಡ ಮಾರುಕಟ್ಟೆ ಹೊಂದಿದ್ದು, ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ ಸ್ವಾಧೀನದಿಂದ ಮತ್ತಷ್ಟು ವಿಸ್ತಾರಗೊಳ್ಳಲಿದೆ ಎನ್ನಲಾಗಿದೆ.

2020–21 ಹಣಕಾಸು ವರ್ಷದ ಮೊದಲಾರ್ಧದಲ್ಲಿ ವಹಿವಾಟು ಪ್ರಕ್ರಿಯೆ ಪೂರ್ಣಗೊಳ್ಳಿದೆ. ಇಂಗ್ಲೆಂಡ್, ಅಮೆರಿಕ, ಐರ್ಲೆಂಡ್‌ ಸೇರಿದಂತೆ ಇತರೆ ಭಾಗಗಳಲ್ಲಿ ವೊಕಾರ್ಡ್‌ ವಹಿವಾಟು ಮುಂದುವರಿಯಲಿದೆ. ಭಾರತ ಹಾಗೂ ಇತರೆ ರಾಷ್ಟ್ರಗಳಲ್ಲಿರುವ ತಯಾರಿಕಾ ಘಟಕಗಳಲ್ಲಿ ವೊಕಾರ್ಡ್‌ ಒಡೆತನ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT