ಗುರುವಾರ , ಜೂನ್ 4, 2020
27 °C

ಇನ್ನೂ 6 ತಿಂಗಳು ಮನೆಯಿಂದ ಕೆಲಸ; ಶೇ 70 ರಷ್ಟು ಕಾರ್ಪೊರೇಟ್‌ಗಳ ಒಲವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಟ್ಟಾರೆ ಸಿಬ್ಬಂದಿಯಲ್ಲಿನ ಕೆಲವರನ್ನು ಮುಂದಿನ 6 ತಿಂಗಳ ಕಾಲ ಮನೆಯಿಂದಲೇ ಕೆಲಸ ನಿರ್ವಹಿಸುವುದಕ್ಕೆ ಅವಕಾಶ ನೀಡಲು ಸಮೀಕ್ಷೆಯೊಂದರಲ್ಲಿ ಭಾಗವಹಿಸಿದ್ದ ಬಹುತೇಕ ಕಂಪನಿಗಳು (ಶೇ 70ರಷ್ಟು) ಒಲವು ತೋರಿವೆ.

ಕಚೇರಿ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳಲು ಮತ್ತು ವಹಿವಾಟು ಮುಂದುವರೆಸಲು ಕಾರ್ಪೊರೇಟ್‌ಗಳು ಈ ನಿರ್ಧಾರಕ್ಕೆ ಬಂದಿರುವುದು ರಿಯಲ್‌ ಎಸ್ಟೇಟ್‌  ಸಲಹಾ ಸಂಸ್ಥೆ  ನೈಟ್‌ ಫ್ರ್ಯಾಂಕ್‌ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ವಿವಿಧ ವಲಯಗಳಿಗೆ ಸೇರಿದ ದೊಡ್ಡ ಕಂಪನಿಗಳಲ್ಲಿ ಕಾರ್ಪೊರೇಟ್‌ ರಿಯಲ್‌ ಎಸ್ಟೇಟ್‌ ವಹಿವಾಟು ನಿರ್ವಹಿಸುವ 230 ಹಿರಿಯ ಅಧಿಕಾರಿಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

ಲಾಕ್‌ಡೌನ್‌ ಕಾರಣಕ್ಕೆ ಒತ್ತಾಯಪೂರ್ವಕವಾಗಿ ಜಾರಿಗೆ ತರಲಾಗಿರುವ ಸಿಬ್ಬಂದಿಯು ಮನೆಯಿಂದ ಕೆಲಸ ನಿರ್ವಹಿಸುವ ಪದ್ಧತಿಯಿಂದ ಕಂಪನಿಯ ಉತ್ಪಾದನೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ ಎಂದು ಬಹುತೇಕರು ಹೇಳಿಕೊಂಡಿದ್ದಾರೆ.

ತಮ್ಮ ಸಿಬ್ಬಂದಿಯಲ್ಲಿನ ಶೇ 30ಕ್ಕೂ ಹೆಚ್ಚು ಜನರು ಮುಂದಿನ 6 ತಿಂಗಳವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲಿದ್ದಾರೆ. ಸದ್ಯದ ಕಚೇರಿ ಸ್ಥಳಾವಕಾಶವನ್ನೇ ಉಳಿಸಿಕೊಳ್ಳುವ ಅಥವಾ ಹೆಚ್ಚಿಸುವ ಬಗ್ಗೆ ಶೇ 62ರಷ್ಟು ಅಧಿಕಾರಿಗಳು ಒಲವು ತೋರಿದ್ದಾರೆ.

‘ಮನೆಯಿಂದಲೇ ಕೆಲಸ ನಿರ್ವಹಿಸುವ ವ್ಯವಸ್ಥೆ ಮುಂದುವರೆಯಲಿದೆ. ಕಾರ್ಪೊರೇಟ್‌ ಸಂಸ್ಕೃತಿ ಮತ್ತು ಸ್ಪರ್ಧಾತ್ಮಕ ಅನುಕೂಲತೆಗಾಗಿ ಕಚೇರಿ ಕೆಲಸದ ಮಹತ್ವ ಕಡಿಮೆಯಾಗುವುದಿಲ್ಲ’ ಎಂದು ನೈಟ್‌ ಫ್ರ್ಯಾಂಕ್‌ನ ಅಧ್ಯಕ್ಷ ಶಿಶಿರ್‌ ಬೈಜಲ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು