ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌ ಆತಂಕ: ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ಮುಂದೂಡಿಕೆ

Last Updated 20 ಡಿಸೆಂಬರ್ 2021, 13:28 IST
ಅಕ್ಷರ ಗಾತ್ರ

ಜೂರಿಕ್‌: ಕೊರೊನಾ ವೈರಸ್‌ನ ಹೊಸ ತಳಿ ಓಮೈಕ್ರಾನ್‌ ವ್ಯಾಪಿಸುತ್ತಿರುವ ಕಾರಣಗಳಿಂದಾಗಿ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್‌) ವಾರ್ಷಿಕ ಸಭೆಯನ್ನು 2022ರ ಮಧ್ಯದ ವರೆಗೂ ಮುಂದೂಡಲಾಗಿದೆ. ಸ್ವಿಡ್ಜರ್ಲೆಂಡ್‌ನ ದಾವೋಸ್‌ನಲ್ಲಿ 2022ರ ಜನವರಿಯಲ್ಲಿ ಡಬ್ಲ್ಯುಇಎಫ್‌ ವಾರ್ಷಿಕ ಸಭೆ ನಿಗದಿಯಾಗಿತ್ತು.

ಜಗತ್ತಿನ ಉದ್ಯಮಿಗಳು ಮತ್ತು ರಾಜಕೀಯ ಮುಖಂಡರು ಒಂದೆಡೆ ಸೇರಲು ಡಬ್ಲ್ಯುಇಎಫ್‌ ವಾರ್ಷಿಕ ಸಭೆಯು ವೇದಿಕೆಯಾಗಿದೆ. ಕೋವಿಡ್‌ ಕಾರಣಗಳಿಂದಾಗಿ ಸಭೆಯನ್ನು ಬೇಸಿಯ ಕಾಲದ ಆರಂಭದಲ್ಲಿ ನಡೆಸಲು ಉದ್ದೇಶಿಸಲಾಗಿದೆ.

'ಕೊರೊನಾ ವೈರಸ್‌ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಜಾಗತಿಕ ಮುಖಂಡರ ಪರಸ್ಪರ ಭೇಟಿಯು ಕಠಿಣವಾಗಲಿದೆ. ಸ್ವಿಡ್ಜರ್ಲೆಂಡ್‌ ಸರ್ಕಾರದ ಸಹಭಾಗಿತ್ವದೊಂದಿಗೆ ಪ್ರತಿ ಹಂತದಲ್ಲಿಯೂ ತಜ್ಞರ ಸಲಹೆಗಳನ್ನು ಪಡೆದು ಸಭೆಗೆ ಸಿದ್ಧತೆ ಮಾಡಲಾಗುತ್ತಿದೆ' ಎಂದು ಡಬ್ಲ್ಯುಇಎಫ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಕಳೆದ ಐದು ದಶಕಗಳಿಂದ ವಿವಿಧ ಸರ್ಕಾರಗಳು, ಅಂತರರಾಷ್ಟ್ರೀಯ ಸಂಘಟನೆಗಳು, ಉದ್ಯಮಿಗಳು, ಶಿಕ್ಷಣ ತಜ್ಞರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ಒಂದೇ ವೇದಿಕೆಗೆ ತರುವ ಕೆಲಸವನ್ನು ದಾವೋಸ್‌ ಸಭೆಯು ಮಾಡುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT