ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಸಗಟು ಹಣದುಬ್ಬರ

Last Updated 14 ಅಕ್ಟೋಬರ್ 2022, 13:53 IST
ಅಕ್ಷರ ಗಾತ್ರ

ನವದೆಹಲಿ: ಸಗಟು ಬೆಲೆ ಆಧಾರಿತ ಹಣದುಬ್ಬರ ಪ್ರಮಾಣವು ಸೆಪ್ಟೆಂಬರ್‌ನಲ್ಲಿ 18 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಆಹಾರ, ಇಂಧನ ಮತ್ತು ತಯಾರಿಸಿದ ಉತ್ಪನ್ನಗಳ ಬೆಲೆ ಇಳಿಕೆಯಾಗಿರುವ ಕಾರಣ ಸಗಟು ಹಣದುಬ್ಬರ ಪ್ರಮಾಣವು ಶೇಕಡ 10.7ಕ್ಕೆ ತಗ್ಗಿದೆ.

ಸಗಟು ಹಣದುಬ್ಬರವು ಸತತ ನಾಲ್ಕು ತಿಂಗಳುಗಳಿಂದ ಇಳಿಕೆಯ ಹಾದಿಯಲ್ಲಿ ಇದೆ. ಹೀಗಿದ್ದರೂ, ಇದು ಎರಡಂಕಿ ಪ್ರಮಾಣಕ್ಕಿಂತ ಕೆಳಗೆ ಬಂದಿಲ್ಲ. ‘ಸೆಪ್ಟೆಂಬರ್‌ನಲ್ಲಿ ಖನಿಜ ತೈಲ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ರಾಸಾಯನಿಕ ಹಾಗೂ ರಾಸಾಯನಿಕ ಉತ್ಪನ್ನಗಳು, ಮೂಲ ಲೋಹ, ವಿದ್ಯುತ್, ಜವಳಿ ವಸ್ತುಗಳ ಬೆಲೆ ಏರಿಕೆಯು ಸಗಟು ಹಣದುಬ್ಬರಕ್ಕೆ ಕೊಡುಗೆ ನೀಡಿವೆ’ ಎಂದು ಪ್ರಕಟಣೆ ತಿಳಿಸಿದೆ.

ಹಿಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ 11.80ರಷ್ಟು ಇತ್ತು. ಸಗಟು ಹಣದುಬ್ಬರದ ಲೆಕ್ಕಾಚಾರದಲ್ಲಿ ಆಹಾರ ವಸ್ತುಗಳನ್ನು ಪರಿಗಣಿಸುವುದು, ಚಿಲ್ಲರೆ ಹಣದುಬ್ಬರ ಪ್ರಮಾಣ ಲೆಕ್ಕಹಾಕುವಾಗ ಪರಿಗಣಿಸುವುದಕ್ಕಿಂತ ಕಡಿಮೆ ಎಂದು ಆಕ್ಯೂಟ್ ರೇಟಿಂಗ್ಸ್ ಆ್ಯಂಡ್‌ ರಿಸರ್ಚ್‌ ಸಂಸ್ಥೆಯ ಮುಖ್ಯ ವಿಶ್ಲೇಷಣಾ ಅಧಿಕಾರಿ ಸುಮನ್ ಚೌಧರಿ ತಿಳಿಸಿದ್ದಾರೆ.

ರೆಪೊ ದರವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ತೀರ್ಮಾನ ಕೈಗೊಳ್ಳಲು ಆರ್‌ಬಿಐ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಪರಿಗಣಿಸುತ್ತದೆ. ಚಿಲ್ಲರೆ ಹಣದುಬ್ಬರವು ಸತತ ಒಂಬತ್ತು ತಿಂಗಳುಗಳಿಂದ ಗರಿಷ್ಠ ಮಟ್ಟಕ್ಕಿಂತ ಹೆಚ್ಚಾಗಿದೆ.

‘ಅರ್ಥ ವ್ಯವಸ್ಥೆಯ ಚೇತರಿಕೆಯು ನಿಧಾನಗತಿಗೆ ತಿರುಗಿರುವ ಕಾರಣದಿಂದಾಗಿ ಹಾಗೂ ಸರಕುಗಳ ಬೆಲೆ ಹೆಚ್ಚಳದ ಸಾಧ್ಯತೆ ಕಡಿಮೆ ಇರುವ ಕಾರಣದಿಂದಾಗಿ ಸಗಟು ಹಣದುಬ್ಬರವು ಮುಂದಿನ ದಿನಗಳಲ್ಲಿ ತಗ್ಗಬಹುದು ಎಂಬುದು ನಮ್ಮ ನಿರೀಕ್ಷೆ’ ಎಂದು ಚೌಧರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT