ಗುರುವಾರ , ಏಪ್ರಿಲ್ 9, 2020
19 °C

ಯೆಸ್ ಬ್ಯಾಂಕ್‌ನಲ್ಲಿ ಹಣ ಸುರಕ್ಷಿತವಾಗಿದೆ: ನಿರ್ಮಲಾ ಸೀತಾರಾಮನ್ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

nirmala

ನವದೆಹಲಿ: ಯೆಸ್ ಬ್ಯಾಂಕ್ ಸಮಸ್ಯೆ ಪರಿಹರಿಸಲು ಆರ್‌ಬಿಐ ಪ್ರಯತ್ನಿಸುತ್ತಿದೆ. ಯೆಸ್ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದವರ ಹಣ ಸುರಕ್ಷಿತವಾಗಿದೆ ಎಂದು ಆರ್‌ಬಿಐ ಗವರ್ನರ್ ಹೇಳಿರುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಯೆಸ್ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿರುವವರ ಹಣ ಸುರಕ್ಷಿತವಾಗಿದೆ ಎಂದು ನಾನು ಭರವಸೆ  ನೀಡುತ್ತೇನೆ. ಆರ್‌ಬಿಐ ಜತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಶುಕ್ರವಾರ ಮಾಧ್ಯಮದವರಲ್ಲಿ ಮಾತನಾಡಿದ ಸಚಿವೆ ಹೇಳಿದ್ದಾರೆ.

ಇದನ್ನೂ ಓದಿ: ಯೆಸ್ ಬ್ಯಾಂಕ್ ಬಿಕ್ಕಟ್ಟು: ‘ಅಬ್ಬಾ, ಸ್ವಲ್ಪದರಲ್ಲಿ ಬಚಾವಾದೆ’ ಟ್ವೀಟ್‌ ಲೋಕವಿಹಾರ

ಆರ್‌ಬಿಐ ಮತ್ತು ಸರ್ಕಾರ ಯೆಸ್ ಬ್ಯಾಂಕ್‌ನ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದ್ದು, ಎಲ್ಲರ ಹಿತ ಕಾಪಾಡಲಾಗುವುದು ಎಂದು ನಿರ್ಮಲಾ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು