ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧನ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ

Last Updated 28 ಸೆಪ್ಟೆಂಬರ್ 2018, 19:47 IST
ಅಕ್ಷರ ಗಾತ್ರ

ಮುಂಬೈ: ಶಾಖೆಗಳನ್ನು ವಿಸ್ತರಿಸದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌, ಬಂಧನ್‌ ಬ್ಯಾಂಕ್‌ಗೆ ನಿರ್ಬಂಧ ವಿಧಿಸಿದೆ.

ತನ್ನ ಮುಂದಿನ ಆದೇಶ ದವರೆಗೂ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಚಂದ್ರಶೇಖರ್‌ ಘೋಷ್‌ ಅವರ ಭತ್ಯೆಯನ್ನು ಹೆಚ್ಚಿಸದಂತೆಯೂ ಸೂಚನೆ ನೀಡಿದೆ.

ಬಂಧನ್‌ ಬ್ಯಾಂಕ್‌, ಪರವಾನಗಿ ನಿಯಮ ಉಲ್ಲಂಘನೆ ಮಾಡಿದೆ.ಠೇವಣಿಗಳನ್ನು ಸಂಗ್ರಹಿಸದೇ ಇರುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ಪಾಲು ಬಂಡವಾಳವನ್ನು ಶೇ 40ಕ್ಕೆ ತಗ್ಗಿಸಲು ವಿಫಲವಾಗಿದೆ. ಹೀಗಾಗಿ ಈ ದಂಡನಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್‌, ಪಾಲು ಬಂಡವಾಳ ತಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಆರ್‌ಬಿಐ ಜತೆ ನಿರಂತರವಾಗಿ ಸಂಪರ್ಕದಲ್ಲಿ ಇರಲಾಗುವುದು ಎಂದು ತಿಳಿಸಿದೆ.

2014ರಲ್ಲಿ ಬ್ಯಾಂಕಿಂಗ್‌ ಸೇವೆ ಆರಂಭಿಸಲು ಪರವಾನಗಿ ಪಡೆದಿತ್ತು. 2015ರಿಂದ ಕಾರ್ಯನಿರ್ವಹಣೆ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT