ಶನಿವಾರ, ಏಪ್ರಿಲ್ 1, 2023
23 °C

ಬೆಂಗಳೂರಿನಲ್ಲಿ ಇಪಿಎಫ್‌ಒ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಬೆಂಗಳೂರಿನ ರಾಜರಾಜೇಶ್ವರಿ ನಗರದ ಪ್ರಾದೇಶಿಕ ಕಚೇರಿ ವತಿಯಿಂದ ಶುಕ್ರವಾರ ಕುಂದು ಕೊರತೆ ಬಗೆಹರಿಸುವ ಅಭಿಯಾನ ನಡೆಯಿತು.

ಬಿಡದಿ ಕೈಗಾರಿಕಾ ಪ್ರದೇಶದ ಹಿಂದುಸ್ಥಾನ್ ಕೋಕಾ ಕೋಲಾ ಬೆವರೇಜಸ್ ಲಿಮಿಟೆಡ್‌ ಆವರಣದಲ್ಲಿ ವಿವಿಧ ಕಂಪನಿಗಳ ಪ್ರತಿನಿಧಿಗಳನ್ನು ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಭೇಟಿ ಮಾಡಿದರು. ಹೆಸರು, ಜನ್ಮ ದಿನಾಂಕದಲ್ಲಿ ಬದಲಾವಣೆ, ಯುಎಎನ್‌ ನಿಷ್ಕ್ರಿಯ ಆಗಿರುವುದು ಸೇರಿದಂತೆ ಪಿಂಚಣಿ ಪಡೆಯುವವರ ಹಲವು ಸಮಸ್ಯೆಗಳನ್ನು ಇದೇ ವೇಳೆ ಬಗೆಹರಿಸಲಾಯಿತು. 

ಮುಂಬರುವ ದಿನಗಳಲ್ಲಿ ಪ್ರತಿ ತಿಂಗಳೂ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸಂಘಟನೆಯ ಜಾರಿ ಅಧಿಕಾರಿ ನವ್‌ನೀತ್‌ ಪ್ರಕಾಶ್‌ ಅವರು ‘ಪ್ರಜಾವಾಣಿ’ ತಿಳಿಸಿದರು.

ರಾಜರಾಜೇಶ್ವರಿ ನಗರದ ಪ್ರಾದೇಶಿಕ ಕಚೇರಿಯ ಕಮಿಷನರ್ ಇನಕೋಟಿ ಶ್ರೀದೇವಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು.

ಇಪಿಎಫ್‌ಒ ತನ್ನ ಸದಸ್ಯರು, ಉದ್ಯೋಗದಾತರು ಹಾಗೂ ಪಿಂಚಣಿ ಪಡೆಯುವವರನ್ನು ಸಂಪರ್ಕಿಸುವ ‘ನಿಧಿ ಆಪ್‌ಕೆ ನಿಕಟ್‌ 2.0’ ಹೆಸರಿನ ಬೃಹತ್ ಅಭಿಯಾನವನ್ನು ಪ್ರತಿ ಜಿಲ್ಲೆಯಲ್ಲಿಯೂ ಹಮ್ಮಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು