‘ಮಗಳು ಈಗ 8ನೇ ಕ್ಲಾಸ್ನಲ್ಲಿ ಓದುತ್ತಿದ್ದಾಳೆ, ಅವಳು ಮುಂದೆ ವೈದ್ಯಕೀಯ ವ್ಯಾಸಂಗ ಮಾಡಲು ಬಯಸಿದರೆ ಕನಿಷ್ಠ ₹50 ಲಕ್ಷ ಬೇಕು. ನನ್ನ ನಿವೃತ್ತಿಗೆ ಇನ್ನು ಐದು ವರ್ಷ ಇದೆ. ಕನಿಷ್ಠ ₹50 ಲಕ್ಷ ಉಳಿತಾಯ ಮಾಡಿಕೊಂಡರೆ ಹೇಗೋ ನಿವೃತ್ತಿ ನಂತರದ ಜೀವನ ಸಲೀಸಾಗಿ ಹೋಗುತ್ತೆ. ಒಂದು ನಿವೇಶನವಿದೆ. ನಾಲ್ಕೈದು ವರ್ಷಗಳಲ್ಲಿ ಅಲ್ಲಿ ಒಂದು ಅಂತಸ್ತಿನ ಮನೆ ಕಟ್ಟಿಸೋಕೆ ₹50 ಲಕ್ಷವಾದರೂ ಬೇಕು. ಹೀಗೆ ಐದು ವರ್ಷಗಳಲ್ಲಿ ದೊಡ್ಡ ಮೊತ್ತ ಗಳಿಸಲು ಸಾಧ್ಯವೇ’ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಆದರೆ ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತ ಗಳಿಸಬೇಕಾದರೆ ದೊಡ್ಡ ಮೊತ್ತದ ಹೂಡಿಕೆಯ ಜೊತೆಗೆ ಸರಿಯಾದ ಯೋಜನೆಯೂ ಬೇಕಾಗುತ್ತದೆ. ಐದು ವರ್ಷಗಳಲ್ಲಿ ₹50 ಲಕ್ಷ ಪೇರಿಸಬೇಕಾದರೆ ಹೂಡಿಕೆ ಯೋಜನೆ ಹೇಗಿರಬೇಕು?

ಯಾವ ಹೂಡಿಕೆ ಪರಿಗಣಿಸಬಹುದು?: ಐದು ವರ್ಷಗಳಲ್ಲಿ ₹50 ಲಕ್ಷ ಒಗ್ಗೂಡಿಸಬೇಕಾದರೆ ಈಕ್ವಿಟಿ ಮ್ಯೂಚುವಲ್ ಫಂಡ್ಗಳು ಸರಿಯಾದ ಆಯ್ಕೆಯಲ್ಲ. ಏಕೆಂದರೆ ಅಲ್ಪಾವಧಿಯಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ಗಳ ಮೇಲಿನ ಗಳಿಕೆ ಏರಿಳಿತದ ಹಾದಿಯಲ್ಲಿರುವ ಸಾಧ್ಯತೆ ಇರುತ್ತದೆ. ಒಂದೊಮ್ಮೆ ಐದು ವರ್ಷದ ಆಸುಪಾಸಿನಲ್ಲಿ ಮಾರುಕಟ್ಟೆ ಕುಸಿತದ ಹಾದಿಯಲ್ಲಿದ್ದರೆ ಹೂಡಿಕೆ ಮೊತ್ತವನ್ನು ಲಾಭದೊಂದಿಗೆ ನಗದೀಕರಣ ಮಾಡುವುದು ಕಷ್ಟವಾಗುತ್ತದೆ. ಐದು ವರ್ಷಗಳ ಗುರಿ ಇರುವಾಗ ಹೈಬ್ರಿಡ್ ಫಂಡ್ಗಳಾದ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್ ಅಥವಾ ಅಗ್ರೆಸಿವ್ ಹೈಬ್ರಿಡ್ ಫಂಡ್ಗಳನ್ನು ಪರಿಗಣಿಸಬೇಕಾಗುತ್ತದೆ. ಹೈಬ್ರಿಡ್ ಫಂಡ್ಗಳು ಹೂಡಿಕೆದಾರರ ಕನಿಷ್ಠ ಶೇ 65ರಷ್ಟು ಮೊತ್ತವನ್ನು ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಗಳಲ್ಲಿ ತೊಡಗಿಸುತ್ತವೆ. ಇನ್ನುಳಿದ ಶೇ 35ರಷ್ಟು ಮೊತ್ತವನ್ನು ಹೆಚ್ಚು ರಿಸ್ಕ್ ಇಲ್ಲದ ಹಾಗೂ ಸ್ಥಿರ ಗಳಿಕೆ ಕೊಡುವ ಸಾಲಪತ್ರ ಆಧಾರಿತ ಹೂಡಿಕೆಗಳಲ್ಲಿ ತೊಡಗಿಸಲಾಗುತ್ತದೆ. ಇಲ್ಲಿ ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಯ ಜೊತೆಗೆ ಸ್ಥಿರ ಆದಾಯ ಕೊಡುವ ಸಾಲಪತ್ರದ ಹೂಡಿಕೆಗಳೂ ಇರುವುದರಿಂದ ಮಾರುಕಟ್ಟೆ ಅನಿಶ್ಚಿತತೆಯ ಸಂದರ್ಭದಲ್ಲಿ ಆಗುವ ನಷ್ಟವನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಅಂದರೆ ಹೈಬ್ರಿಡ್ ಫಂಡ್ಗಳು ಮಾರುಕಟ್ಟೆ ಓಟದ ಸಂದರ್ಭದಲ್ಲಿ ಹೆಚ್ಚು ಗಳಿಕೆ ತಂದುಕೊಡುತ್ತವೆ ಮತ್ತು ಮಾರುಕಟ್ಟೆ ಅನಿಶ್ಚಿತತೆಯ ಸಂದರ್ಭದಲ್ಲಿ ನಿಮ್ಮ ಹೂಡಿಕೆಯನ್ನು ತೀರಾ ಕೆಳಮಟ್ಟಕ್ಕೆ ಕುಸಿಯಲು ಬಿಡುವುದಿಲ್ಲ.

ಹೇಗೆ ಹೂಡಿಕೆ ಮಾಡಬೇಕು?: ಯಾವುದರ ಮೇಲೆ ಹೂಡಿಕೆ ಮಾಡಬೇಕು ಎನ್ನುವುದು ತೀರ್ಮಾನವಾದ ಬಳಿಕ ಹೇಗೆ ಹೂಡಿಕೆ ಮಾಡಬೇಕು ಎನ್ನುವುದನ್ನು ನಿರ್ಣಯಿಸಬೇಕಾಗುತ್ತದೆ. ಸಾಧ್ಯವಾದಾಗಲೆಲ್ಲ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುತ್ತಾ ಹೋಗುವುದೇ ಐದು ವರ್ಷಗಳಲ್ಲಿ ₹50 ಲಕ್ಷದ ಗುರಿ ಮುಟ್ಟಲು ಸರಿಯಾದ ಮಾರ್ಗ ಎನಿಸುತ್ತದೆ. ಆದರೆ ದೊಡ್ಡ ಮೊತ್ತ ಪೇರಿಸುವಾಗ ಮಾರುಕಟ್ಟೆ ಏರಿಳಿತಗಳ ಲೆಕ್ಕಾಚಾರದೊಂದಿಗೆ ಶಿಸ್ತುಬದ್ಧ ಹೂಡಿಕೆ ಮಾಡುವುದು ಮುಖ್ಯ. ಹೈಬ್ರಿಡ್ ಮ್ಯೂಚುವಲ್ ಫಂಡ್ಗಳಲ್ಲಿ ಪ್ರತಿ ತಿಂಗಳು ವ್ಯವಸ್ಥಿತವಾಗಿ ಹೂಡಿಕೆ ಮಾಡುವ ಮೂಲಕ ಮಾರುಕಟ್ಟೆ ಏರಿಳಿತಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಹೂಡಿಕೆ ಗುರಿ ತಲುಪಬಹುದಾಗಿದೆ.

ಎಷ್ಟು ಮೊತ್ತ ಹೂಡಿಕೆ?: ಹೂಡಿಕೆ ಉತ್ಪನ್ನ ಮತ್ತು ಕ್ರಮವನ್ನು ನಿರ್ಧರಿಸಿದ ಮೇಲೆ ₹50 ಲಕ್ಷದ ಗುರಿ ತಲುಪಲು ಪ್ರತಿ ತಿಂಗಳು ಎಷ್ಟು ಮೊತ್ತವನ್ನು ಎಸ್ಐಪಿ ಮೂಲಕ ತೊಡಗಿಸಬೇಕು ಎನ್ನುವುದನ್ನು ನಿರ್ಧರಿಸಬೇಕಾಗುತ್ತದೆ. ಹೈಬ್ರಿಡ್ ಫಂಡ್ನಲ್ಲಿ ಹೂಡಿಕೆ ಮೇಲಿನ ಗಳಿಕೆ ಮಾರುಕಟ್ಟೆ ಸ್ಥಿತಿಗತಿಗೆ ಅನುಗುಣವಾಗಿ ಬದಲಾಗುವುದರಿಂದ ವಿವಿಧ ಗಳಿಕೆ ಲೆಕ್ಕಾಚಾರದೊಂದಿಗೆ ನಿಮ್ಮ ಹೂಡಿಕೆ ಮೊತ್ತವನ್ನು ನಿಗದಿಪಡಿಸಬೇಕಾಗುತ್ತದೆ. ಹೂಡಿಕೆ ಮೇಲೆ ವಾರ್ಷಿಕ ಸರಾಸರಿ ಶೇ 8ರಷ್ಟು ಗಳಿಕೆ ಸಿಕ್ಕರೆ ಪ್ರತಿ ತಿಂಗಳು ₹67,610 ಹೂಡಿಕೆ ಮಾಡಬೇಕಾಗುತ್ತದೆ. ಶೇ 10ರಷ್ಟು ಸಿಕ್ಕರೆ ₹64,040 ತೊಡಗಿಸಬೇಕಾಗುತ್ತದೆ. ಶೇ 12ರಷ್ಟು ಗಳಿಕೆ ಸಿಕ್ಕರೆ ಪ್ರತಿ ತಿಂಗಳು ₹60,650 ಎಸ್ಐಪಿ ಮಾಡಬೇಕಾಗುತ್ತದೆ. ಇವೆಲ್ಲದರ ಜೊತೆಗೆ ನಿಮ್ಮ ಗಳಿಕೆ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾದಾಗಲೆಲ್ಲಾ ದೊಡ್ಡ ಮೊತ್ತದ ಹೂಡಿಕೆ ಮಾಡಿದರೆ ₹50 ಲಕ್ಷದ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.

ಈ ತಪ್ಪು ಬೇಡ: 5 ವರ್ಷಗಳಲ್ಲಿ ₹50 ಲಕ್ಷ ಗಳಿಸಬೇಕಾದರೆ ಯೋಜನೆ ಎಷ್ಟು ಮುಖ್ಯವೋ ಅದರ ಶಿಸ್ತುಬದ್ಧ ಅನುಷ್ಠಾನವೂ ಮುಖ್ಯ. ಪ್ರತಿ ತಿಂಗಳು ನಿಗದಿತ ಎಸ್ಐಪಿ ಮೊತ್ತವನ್ನು ತೊಡಗಿಸುವುದು ಬಹಳ ಮುಖ್ಯ. ಅನಿವಾರ್ಯ ಸಂದರ್ಭದಲ್ಲಿ ಹೂಡಿಕೆ ತಪ್ಪಿಸಿದರೆ ಮುಂದಿನ ತಿಂಗಳು ಹೆಚ್ಚುವರಿ ಮೊತ್ತ ಹೂಡಿಕೆ ಮಾಡಲು ಗಮನವಹಿಸಿ. ಧುತ್ತೆಂದು ಬರುವ ತುರ್ತು ಖರ್ಚುಗಳು ನಿಮ್ಮ ಹೂಡಿಕೆಯನ್ನು ಬಾಧಿಸದಂತೆ ನೋಡಿಕೊಳ್ಳಿ. ಅದಕ್ಕಾಗಿ 6 ತಿಂಗಳ ಖರ್ಚಿನ ಬಾಬ್ತನ್ನು ತುರ್ತು ನಿಧಿಯಲ್ಲಿ ಇಟ್ಟುಕೊಳ್ಳಿ. ₹50 ಲಕ್ಷದ ಗುರಿ ಇದೆ ಎನ್ನುವಾಗ ಹಣದುಬ್ಬರ ಪ್ರಮಾಣದ ಅಂದಾಜಿರಲಿ. ಈಗ ₹50 ಲಕ್ಷಕ್ಕೆ ಇರುವ ಮೌಲ್ಯಕ್ಕೂ ಐದು ವರ್ಷಗಳ ಬಳಿಕದ ₹50 ಲಕ್ಷಕ್ಕೆ ಇರುವ ಮೌಲ್ಯಕ್ಕೂ ವ್ಯತ್ಯಾಸವಿರುತ್ತದೆ ಎನ್ನುವುದು ತಿಳಿದಿರಲಿ.

ಪರ್ಯಾಯ ಮಾರ್ಗಗಳು: ಐದು ವರ್ಷಗಳಲ್ಲಿ ₹50 ಲಕ್ಷ ಗಳಿಸಲು ಮಾಡಬೇಕಿರುವ ಎಸ್ಐಪಿ ಮೊತ್ತ ಹೆಚ್ಚು ಎನಿಸಿದರೆ ಆರಂಭದಲ್ಲಿ ಎಸ್ಐಪಿ ಮೊತ್ತವನ್ನು ಕಡಿಮೆ ಮಾಡಿಕೊಂಡು ನಂತರದಲ್ಲಿ ಹೆಚ್ಚಳ ಮಾಡುತ್ತಾ ಹೋಗಿ. ನಿಮ್ಮ ವಾರ್ಷಿಕ ಸಂಬಳದಲ್ಲಿ ಏರಿಕೆಯಾಗುವ ಪ್ರಮಾಣಕ್ಕೆ ತಕ್ಕಂತೆ ನೀವು ಎಸ್ಐಪಿಯಲ್ಲಿ ಏರಿಕೆ ಮಾಡುತ್ತಾ ಹೋದರೆ ಗುರಿ ತಲುಪಲು ಸಾಧ್ಯ. ಹೂಡಿಕೆ ಮೊತ್ತ ಹೆಚ್ಚಿಸುತ್ತಾ ಹೋಗಲು ಸಾಧ್ಯವಿಲ್ಲ ಎನ್ನುವುದಾದರೆ ಹೂಡಿಕೆ ಗುರಿಯ ಅವಧಿಯನ್ನೇ ಆರೇಳು ವರ್ಷಕ್ಕೆ ವಿಸ್ತರಿಸಿಕೊಳ್ಳಿ.

ಗುರಿ ಸಾಧಿಸಲು ಈ ತಪ್ಪು ಮಾಡಬೇಡಿ

5 ವರ್ಷಗಳಲ್ಲಿ ₹50 ಲಕ್ಷ ಗಳಿಸಬೇಕಾದರೆ ಯೋಜನೆ ಎಷ್ಟು ಮುಖ್ಯವೋ ಅದರ ಶಿಸ್ತುಬದ್ಧ ಅನುಷ್ಠಾನವೂ ಮುಖ್ಯ. ಪ್ರತಿ ತಿಂಗಳು ನಿಗದಿತ ಎಸ್ಐಪಿ ಮೊತ್ತವನ್ನು ತೊಡಗಿಸುವುದು ಬಹಳ ಮುಖ್ಯ. ಅನಿವಾರ್ಯ ಸಂದರ್ಭದಲ್ಲಿ ಹೂಡಿಕೆ ತಪ್ಪಿಸಿದರೆ ಮುಂದಿನ ತಿಂಗಳು ಹೆಚ್ಚುವರಿ ಮೊತ್ತ ಹೂಡಿಕೆ ಮಾಡಲು ಗಮನವಹಿಸಿ. ಧುತ್ತೆಂದು ಬರುವ ತುರ್ತು ಖರ್ಚುಗಳು ನಿಮ್ಮ ಹೂಡಿಕೆಯನ್ನು ಬಾಧಿಸದಂತೆ ನೋಡಿಕೊಳ್ಳಿ. ಅದಕ್ಕಾಗಿ 6 ತಿಂಗಳ ಖರ್ಚಿನ ಬಾಬ್ತನ್ನು ತುರ್ತು ನಿಧಿಯಲ್ಲಿ ಇಟ್ಟುಕೊಳ್ಳಿ. ₹50 ಲಕ್ಷದ ಗುರಿ ಇದೆ ಎನ್ನುವಾಗ ಹಣದುಬ್ಬರ ಪ್ರಮಾಣದ ಅಂದಾಜಿರಲಿ. ಈಗ ₹50 ಲಕ್ಷಕ್ಕೆ ಇರುವ ಮೌಲ್ಯಕ್ಕೂ ಐದು ವರ್ಷಗಳ ಬಳಿಕದ ₹50 ಲಕ್ಷಕ್ಕೆ ಇರುವ ಮೌಲ್ಯಕ್ಕೂ ವ್ಯತ್ಯಾಸವಿರುತ್ತದೆ ಎನ್ನುವುದು ತಿಳಿದಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.