ಹೂಡಿಕೆಗೆ ₹100 ಇದೆ ಎಂದಾದರೆ ಅದರಲ್ಲಿ ಕನಿಷ್ಠ ₹10 ಚಿನ್ನದ ಮೇಲೆ ತೊಡಗಿಸಬೇಕು ಎನ್ನುವುದು ಒಂದು ಲೆಕ್ಕಾಚಾರ. ಬಂಗಾರದ ಮೇಲೆ ಹೂಡಿಕೆ ಅಂತ ಬಂದಾಗ ಬಹುತೇಕರು ಒಡವೆ ಚಿನ್ನ, ಚಿನ್ನದ ನಾಣ್ಯ, ಚಿನ್ನದ ಬಿಸ್ಕೆಟ್ಗಳನ್ನು ಖರೀದಿಸುತ್ತಾರೆ. ಆದರೆ ಈ ರೀತಿಯ ವಸ್ತುರೂಪದ ಚಿನ್ನ ಕೊಂಡಾಗ ವೇಸ್ಟೇಜ್, ತಯಾರಿಕಾ ವೆಚ್ಚ, ಜಿಎಸ್ಟಿ ಹೀಗೆ ಹಲವು ಹೊರೆಗಳು ಬೀಳುತ್ತವೆ. ಜೊತೆಗೆ ಚಿನ್ನವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಪ್ರತಿ ವರ್ಷ ಬ್ಯಾಂಕ್ ಲಾಕರ್ ಶುಲ್ಕ ತೆರಬೇಕಿರುವುದರಿಂದ ಹೆಚ್ಚಿನ ಲಾಭ ಗಳಿಕೆ ಸಾಧ್ಯವಾಗುವುದಿಲ್ಲ. ಹಳದಿ ಲೋಹದ ಮೇಲಿನ ಹೂಡಿಕೆಗೆ ಈಗಿನ ಸಂದರ್ಭದಲ್ಲಿ ಹಲವು ಡಿಜಿಟಲ್ ಆಯ್ಕೆಗಳಿವೆ. ಅಂತಹ ಒಂದು ಪ್ರಮುಖ ಮಾದರಿ ಗೋಲ್ಡ್ ಇಟಿಎಫ್. ಗೋಲ್ಡ್ ಇಟಿಎಫ್ನಲ್ಲಿ ಹೂಡಿಕೆ ಮಾಡುವುದು ಹೇಗೆ ಎನ್ನುವುದನ್ನು ವಿವರವಾಗಿ ತಿಳಿಯೋಣ.

ಏನಿದು ಗೋಲ್ಡ್ ಇಟಿಎಫ್?: ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ ಎನ್ನುವುದು ಗೋಲ್ಡ್ ಇಟಿಎಫ್ನ ವಿಸ್ತೃತ ರೂಪ. ಷೇರು ಮಾರುಕಟ್ಟೆಯಲ್ಲಿ ಹೇಗೆ ವಿವಿಧ ಕಂಪನಿಗಳ ಷೇರುಗಳ ಖರೀದಿ ಮತ್ತು ಮಾರಾಟ ನಡೆಯುವುದೋ ಅದೇ ರೀತಿ ಗೋಲ್ಡ್ ಇಟಿಎಫ್ಗಳ ವಹಿವಾಟನ್ನು ಷೇರುಪೇಟೆಯಲ್ಲಿ ನಡೆಸಬಹುದು. ಚಿನ್ನದ ಬೆಲೆ ಏರಿಕೆಯಾದಂತೆ ಗೋಲ್ಡ್ ಇಟಿಎಫ್ಗಳ ಮೌಲ್ಯ ಹೆಚ್ಚಾಗುತ್ತದೆ. ಅದರ ಬೆಲೆ ತಗ್ಗಿದಂತೆಲ್ಲಾ ಗೋಲ್ಡ್ ಇಟಿಎಫ್ ಮೌಲ್ಯವೂ ಇಳಿಕೆಯಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಲಭ್ಯವಿರುವ ಗೋಲ್ಡ್ ಇಟಿಎಫ್ಗಳ ಮೂಲಕ ನೀವು ಬಂಗಾರದ ಮೇಲೆ ಹೂಡಿಕೆ ಮಾಡಲು ಸಾಧ್ಯವಿದೆ. ಒಂದು ಗೋಲ್ಡ್ ಇಟಿಎಫ್ ಒಂದು ಗ್ರಾಂ ಚಿನ್ನಕ್ಕೆ ಸರಿಸಮಾನವಾಗಿರುತ್ತದೆ. ಆದರೆ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಇಟಿಎಫ್ ಯೂನಿಟ್ಗಳನ್ನು ಖರೀದಿಸಲು ಸಾಧ್ಯವಿದೆ. ಉದಾಹರಣೆಗೆ, ಬಹುತೇಕ ಇಟಿಎಫ್ಗಳಲ್ಲಿ ₹85ರಿಂದ ₹90ಯಿಂದಲೇ ಹೂಡಿಕೆ ಆರಂಭಿಸಬಹುದಾಗಿದೆ. ಗೋಲ್ಡ್ ಇಟಿಎಫ್ಗಳು ಹೂಡಿಕೆದಾರರ ಮೊತ್ತಕ್ಕೆ ಪ್ರತಿಯಾಗಿ ಘನರೂಪದ ಚಿನ್ನ ಖರೀದಿಸುತ್ತವೆ.

ಇಟಿಎಫ್ ಹೂಡಿಕೆ ವಿಶೇಷತೆ: ಗೋಲ್ಡ್ ಇಟಿಎಫ್ಗಳು ನೇರವಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತವೆ ಮತ್ತು ಇವನ್ನು ಖರೀದಿಸಲು ಡಿ-ಮ್ಯಾಟ್ ಖಾತೆ ಅತ್ಯಗತ್ಯ. ಗೋಲ್ಡ್ ಇಟಿಎಫ್ಗಳಲ್ಲಿ ವೆಚ್ಚ ಅನುಪಾತ (ಎಕ್ಸ್ಪೆನ್ಸ್ ರೇಷಿಯೊ) ಶೇ 0.30ರಿಂದ ಶೇ 1ರಷ್ಟಿರುತ್ತದೆ. ಅಂದರೆ ಗೋಲ್ಡ್ ಮ್ಯೂಚುವಲ್ ಫಂಡ್ಗಳಿಗಿಂತ ಇಟಿಎಫ್ಗಳಲ್ಲಿ ವೆಚ್ಚ ಅನುಪಾತ ಕಡಿಮೆ. ಷೇರು ಮಾರುಕಟ್ಟೆಯಲ್ಲಿ ಚಾಲ್ತಿಯ ಸಮಯದಲ್ಲಿ ಗೋಲ್ಡ್ ಇಟಿಎಫ್ಗಳ ಖರೀದಿ ಮತ್ತು ಮಾರಾಟ ಸಾಧ್ಯವಿರುವುದರಿಂದ ಹಣದ ಅಗತ್ಯವಿದ್ದಾಗ ನಗದೀಕರಣ ಸುಲಭ. ಗೋಲ್ಡ್ ಇಟಿಎಫ್ಗಳಲ್ಲಿ ಹೂಡಿಕೆ ಮಾಡಿ 12 ತಿಂಗಳಿಗಿಂತ ಹೆಚ್ಚು ಸಮಯವಾಗಿದ್ದರೆ ಗಳಿಕೆ ಮೇಲೆ ಶೇ 12.5ರಷ್ಟು ಎಲ್ಟಿಸಿಜಿ ತೆರಿಗೆ ಅನ್ವಯಿಸುತ್ತದೆ. ಇಟಿಎಫ್ಗಳಲ್ಲಿ ಹೂಡಿಕೆ ಮಾಡಿ 12 ತಿಂಗಳ ಒಳಗೇ ಮಾರಾಟ ಮಾಡಿದರೆ ಹೂಡಿಕೆದಾರನ ತೆರಿಗೆ ಹಂತಕ್ಕೆ ಅನುಗುಣವಾಗಿ ತೆರಿಗೆ ಕಟ್ಟಬೇಕು. ಷೇರು ಪೇಟೆಯಲ್ಲಿ ಹತ್ತಾರು ಕಂಪನಿಗಳ ಗೋಲ್ಡ್ ಇಟಿಎಫ್ಗಳಿವೆ. ಐಸಿಐಸಿಐ ಪ್ರೂಡೆನ್ಶಿಯಲ್ ಗೋಲ್ಡ್ ಇಟಿಎಫ್, ನಿಪ್ಪಾನ್ ಇಂಡಿಯಾ ಇಟಿಎಫ್ ಗೋಲ್ಡ್ ಬೀಸ್, ಜೆರೋಧಾ ಗೋಲ್ಡ್ ಇಟಿಎಫ್ ಈ ಹೂಡಿಕೆಯ ಕೆಲ ಉದಾಹರಣೆಗಳು.

ಚಿನ್ನದ ಮೇಲೆ ಹೂಡಿಕೆ ಏಕೆ?: ಸಾಮಾನ್ಯವಾಗಿ ಷೇರು ಮಾರುಕಟ್ಟೆ ಕುಸಿತ ಕಂಡಾಗ ಚಿನ್ನದ ಬೆಲೆ ಸ್ಥಿರವಾಗಿ ನಿಲ್ಲುತ್ತದೆ, ಇಲ್ಲವಾದರೆ ಗಣನೀಯವಾಗಿ ಏರಿಕೆ ಕಾಣುತ್ತದೆ. ಬೆಲೆ ಏರಿಕೆ, ಮಾರುಕಟ್ಟೆ ಏರಿಳಿತ, ಯುದ್ಧ ಸಂದರ್ಭ ಹೀಗೆ ನಾನಾ ಸನ್ನಿವೇಶಗಳಲ್ಲಿ ಚಿನ್ನವು ಹೂಡಿಕೆದಾರರ ಕೈ ಹಿಡಿದಿದೆ. ಐತಿಹಾಸಿಕ ಅಂಕಿ-ಅಂಶಗಳನ್ನು ನೋಡಿದಾಗ ಹೂಡಿಕೆದಾರರಿಗೆ ಬಂಗಾರ ಅತ್ಯುತ್ತಮ ಗಳಿಕೆ ತಂದುಕೊಟ್ಟಿದೆ. ಕ್ಯಾಪಿಟಲ್ ಮೈಂಡ್ ಅನಾಲಿಸಿಸ್ ಮಾಡಿರುವ ಅಧ್ಯಯನದ ಪ್ರಕಾರ 1970ರಿಂದ 2025ರವರೆಗಿನ 55 ವರ್ಷಗಳ ದತ್ತಾಂಶ ನೋಡಿದಾಗ ಚಿನ್ನ ಬರೋಬ್ಬರಿ ವಾರ್ಷಿಕ ಸರಾಸರಿ ಶೇ 13.3ರಷ್ಟು ಗಳಿಕೆ ಒದಗಿಸಿದೆ. ಷೇರು ಮಾರುಕಟ್ಟೆಯ ಐತಿಹಾಸಿಕ ಗಳಿಕೆ ನೋಡಿದಾಗ ವಾರ್ಷಿಕ ಸರಾಸರಿ ಶೇ 11.70ರಷ್ಟು ಲಾಭ ಹೂಡಿಕೆದಾರರಿಗೆ ಸಿಕ್ಕಿದೆ. ಅಂದರೆ, ದೀರ್ಘಾವಧಿಯಲ್ಲಿ ಷೇರು ಮಾರುಕಟ್ಟೆಯ ಗಳಿಕೆಯನ್ನೂ ಮೀರಿ ಚಿನ್ನ ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿರುವುದು ಕಂಡುಬರುತ್ತದೆ.

ಲೇಖಕ ಚಾರ್ಟರ್ಡ್ ಅಕೌಂಟೆಂಟ್: ಗೋಲ್ಡ್ ಇಟಿಎಫ್ ಹೂಡಿಕೆ ಅವಕಾಶ ಒದಗಿಸುವ ಕೆಲವು ಕಂಪನಿಗಳ ಹೆಸರನ್ನು ಲೇಖನದಲ್ಲಿ ಮಾಹಿತಿಗೆ ಮಾತ್ರವೇ ಉಲ್ಲೇಖಿಸಲಾಗಿದೆ.

ಷೇರುಪೇಟೆ: ರೆಪೊ ದರ ಇಳಿಕೆ ಪುಟಿದೆದ್ದ ಷೇರುಪೇಟೆ

ಜೂನ್ 6ರಂದು ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. 82188 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.91ರಷ್ಟು ಗಳಿಸಿಕೊಂಡಿದೆ. 25003 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.02ರಷ್ಟು ಗಳಿಸಿಕೊಂಡಿದೆ. ಇನ್ನು ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಶೇ 2.77ರಷ್ಟು ಜಿಗಿದಿದ್ದರೆ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 3.91ರಷ್ಟು ಏರಿಕೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರ ಮತ್ತು ನಗದು ಮೀಸಲು ಅನುಪಾತ (ಸಿಆರ್ಆರ್) ದರಗಳನ್ನು ಕಡಿಮೆ ಮಾಡಿದ ಪರಿಣಾಮ ಮಾರುಕಟ್ಟೆ ಪುಟಿದೆದ್ದಿದೆ. ವಾರದ ಅವಧಿಯಲ್ಲಿ ವಲಯವಾರು ಪ್ರಗತಿ ನೋಡಿದಾಗ ರಿಯಲ್ ಎಸ್ಟೇಟ್ ಶೇ 9.51 ಲೋಹ ಶೇ 2.32 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.78 ಬ್ಯಾಂಕ್ ನಿಫ್ಟಿ ಶೇ 1.49 ಆಟೊ ಶೇ 1.44 ಫೈನಾನ್ಸ್ ಶೇ 1.32 ಫಾರ್ಮಾ ಶೇ 1.13 ಸರ್ವಿಸಸ್ ಶೇ 1.11 ಎಫ್ಎಂಸಿಜಿ ಶೇ 0.94ರಷ್ಟು ಗಳಿಸಿಕೊಂಡಿವೆ. ನಿಫ್ಟಿ ಮಾಧ್ಯಮ ಶೇ 0.32 ಮತ್ತು ಐ.ಟಿ ಶೇ 0.07ರಷ್ಟು ಇಳಿಕೆ ದಾಖಲಿಸಿವೆ.

ಇಳಿಕೆ – ಗಳಿಕೆ: ನಿಫ್ಟಿ 50ಯಲ್ಲಿ ವಾರದ ಲೆಕ್ಕಾಚಾರ ನೋಡಿದಾಗ ಎಚ್ಡಿಎಫ್ಸಿ ಲೈಫ್ ಇನ್ಶೂರೆನ್ಸ್ ಶೇ 2.99 ಟಿಸಿಎಸ್ ಶೇ 2.27 ಟಾಟಾ ಸ್ಟೀಲ್ ಶೇ 2.17 ಎಸ್ಬಿಐ ಲೈಫ್ ಇನ್ಶೂರೆನ್ಸ್ ಶೇ 1.8 ಬಜಾಜ್ ಫಿನ್ಸರ್ವ್ ಶೇ 1.07 ಟಾಟಾ ಮೋಟರ್ಸ್ ಶೇ 1.06 ಹೀರೊ ಮೋಟೊಕಾರ್ಪ್ ಶೇ 0.83 ಎಲ್ ಆ್ಯಂಡ್ ಟಿ ಶೇ 0.78 ಏಷ್ಯನ್ ಪೇಂಟ್ಸ್ ಶೇ 0.53 ವಿಪ್ರೊ ಶೇ 0.44 ಮತ್ತು ಎನ್ಟಿಪಿಸಿ ಶೇ 0.42ರಷ್ಟು ಕುಸಿದಿವೆ. ಎಟರ್ನಲ್ ಶೇ 9.72 ಶ್ರೀರಾಮ್ ಫೈನಾನ್ಸ್ ಶೇ 7.62 ಡಾ. ರೆಡ್ಡಿಸ್ ಲ್ಯಾಬ್ಸ್ ಶೇ 5.48 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 4.25 ಅದಾನಿ ಪೋರ್ಟ್ಸ್ ಶೇ 2.72 ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 2.61 ಜಿಯೊ ಫೈನಾನ್ಶಿಯಲ್ ಶೇ 2.55 ಸಿಪ್ಲಾ ಶೇ 2.44 ಟ್ರೆಂಟ್ ಶೇ 2.38 ಬಜಾಜ್ ಫೈನಾನ್ಸ್ ಶೇ 2.16 ಪವರ್ ಗ್ರಿಡ್ ಕಾರ್ಪೊರೇಷನ್ ಶೇ 2.05 ಎಚ್ಡಿಎಫ್ಸಿ ಬ್ಯಾಂಕ್ ಶೇ 1.75ರಷ್ಟು ಗಳಿಸಿಕೊಂಡಿವೆ.

ಮುನ್ನೋಟ: ಆರ್ಬಿಐ ರೆಪೊ ದರ ಕಡಿತದ ಸಕಾರಾತ್ಮಕ ಪರಿಣಾಮ ಮಾರುಕಟ್ಟೆ ಮೇಲೆ ಇರಲಿದೆ. ಮಾರುಕಟ್ಟೆ ಏರುಗತಿಯಲ್ಲಿರುವುದರಿಂದ ಸದ್ಯದ ಸ್ಥಿತಿಯಲ್ಲಿ ಅಳೆದು ತೂಗಿ ಕುಸಿತ ಕಂಡಾಗ ಉತ್ತಮ ಷೇರುಗಳ ಖರೀದಿಗೆ ಮುಂದಾಗಬಹುದು. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶಿಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.