ಯಾವಾಗ ಸಾಲ ಮರುಪಾವತಿಗೆ ಆದ್ಯತೆ ಕೊಡಬೇಕು?
ನೀವು ನಿವೃತ್ತಿಗೆ ಸಮೀಪವಿದ್ದರೆ, ಹೆಚ್ಚಿನ ಬಡ್ಡಿ ದರಕ್ಕೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಮತ್ತು ಕಿರು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿದ್ದರೆ ಸಾಲ ತೀರಿಸುವುದಕ್ಕೆ ಆದ್ಯತೆ ನೀಡಬೇಕು. ಮನೆಯಲ್ಲಿ ಒಬ್ಬರೇ ದುಡಿಯುತ್ತಿದ್ದೀರಿ, ಕೆಲಸಕ್ಕೆ ಭದ್ರತೆ ಇಲ್ಲ, ಪರ್ಯಾಯ ಆದಾಯ ಮೂಲಗಳನ್ನು ಸೃಷ್ಟಿಸಿಕೊಂಡಿಲ್ಲ ಎಂದಾದರೆ ಸಾಲ ಮರುಪಾವತಿಗೆ ಒತ್ತು ನೀಡಬೇಕು. ಎಲ್ಲದಕ್ಕಿಂತ ಮಿಗಿಲಾಗಿ ಸಾಲ ತೀರಿದರೆ ನೆಮ್ಮದಿ ಅಂತ ನಿಮಗೆ ಅನಿಸಿದರೆ ಹೆಚ್ಚು ಆಲೋಚನೆ ಮಾಡದೆ ಸಾಧ್ಯವಾದಷ್ಟು ಬೇಗ ಸಾಲ ತೀರಿಸಲು ಮುಂದಾಗಬೇಕು.