ಆರ್‌ಬಿಐಗೆ ಬಂದವು 396 ಖೋಟಾ ನೋಟು!

ಗುರುವಾರ , ಏಪ್ರಿಲ್ 25, 2019
26 °C

ಆರ್‌ಬಿಐಗೆ ಬಂದವು 396 ಖೋಟಾ ನೋಟು!

Published:
Updated:

ಬೆಂಗಳೂರು: ಎಸ್‌ಬಿಐ, ಸಿಂಡಿಕೇಟ್ ಸೇರಿದಂತೆ ವಿವಿಧ ಬ್ಯಾಂಕ್‌ಗಳಿಂದ ಕಳೆದ ಆರು ತಿಂಗಳಲ್ಲಿ ಆರ್‌ಬಿಐಗೆ ಜಮೆಯಾಗಿರುವ ಹಣದಲ್ಲಿ ₹ 100 ಮುಖ ಬೆಲೆಯ 396 ಖೋಟಾ ನೋಟುಗಳು ಪತ್ತೆಯಾಗಿವೆ!

ಆರ್‌ಬಿಐ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಆಂತರಿಕ ಲೆಕ್ಕಪತ್ರ ಪರಿಶೋಧನೆ ವೇಳೆ ಈ ಅಂಶ ಬಹಿರಂಗವಾಗಿದೆ.

2018ರ ಆ.1 ರಿಂದ 2019ರ ಫೆ.28ರವರೆಗೆ ವಿವಿಧ ಬ್ಯಾಂಕ್‌ಗಳಿಂದ ಜಮೆ ಆಗಿರುವ ಹಣವನ್ನು ಲೆಕ್ಕ ಮಾಡಿದಾಗ ₹ 39,600 ಮೊತ್ತದ ಖೋಟಾ ನೋಟುಗಳು ಸಿಕ್ಕಿವೆ. ಈ ಕುರಿತು ಹಲಸೂರು ಗೇಟ್ ಠಾಣೆಗೆ ಮಂಗಳವಾರ ದೂರು ನೀಡಲಾಗಿದೆ.

ಅಕ್ಟೋಬರ್‌ನಲ್ಲೂ ಪತ್ತೆ
‘ಆರ್‌ಬಿಐ 2018ರ ಅಕ್ಟೋಬರ್‌ನಲ್ಲಿ ಲೆಕ್ಕ ಪರಿಶೋಧನೆ ನಡೆಸಿದಾಗಲೂ  ₹100 ಮುಖಬೆಲೆಯ 39, ₹500 ಮುಖಬೆಲೆಯ 533,‌ ₹1,000 ಮುಖಬೆಲೆಯ 323 ಖೋಟಾ ನೋಟುಗಳು ಸಿಕ್ಕಿದ್ದವು.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !