ಬ್ಯಾಂಕ್‌ ಸಾಲ ಮರುಪಾವತಿ ಮಾಡದ ಜೆಟ್‌ ಏರ್‌ವೇಸ್‌

7

ಬ್ಯಾಂಕ್‌ ಸಾಲ ಮರುಪಾವತಿ ಮಾಡದ ಜೆಟ್‌ ಏರ್‌ವೇಸ್‌

Published:
Updated:

ನವದೆಹಲಿ: ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಪೂರ್ಣ ಪ್ರಮಾಣದ ವಿಮಾನ ಯಾನ ಸಂಸ್ಥೆ ಜೆಟ್‌ ಏರ್‌ವೇಸ್‌, ದೇಶಿ ಬ್ಯಾಂಕ್‌ಗಳ ಒಕ್ಕೂಟದಿಂದ ಪಡೆದ ಸಾಲ ಮರು‍ಪಾವತಿ ಮಾಡದ ಸಂಕಷ್ಟಕ್ಕೆ ಸಿಲುಕಿದೆ.

ಕೆಲ ತಿಂಗಳುಗಳಿಂದ ಸಂಸ್ಥೆಯು ತನ್ನ ಸಿಬ್ಬಂದಿಗೆ ತಿಂಗಳ ಸಂಬಳವನ್ನೂ ತಡವಾಗಿ ಪಾವತಿಸುತ್ತಿದೆ. ನಗದು ಹರಿವು ಹೊಂದಾಣಿಕೆಯಾಗದ ಕಾರಣಕ್ಕೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ಡಿಸೆಂಬರ್‌ ಅಂತ್ಯಕ್ಕೆ ಅಸಲು ಮತ್ತು ಬಡ್ಡಿ ಪಾವತಿಸಲು ಸಾಧ್ಯವಾಗಿಲ್ಲ ಎಂದು ಸಂಸ್ಥೆಯು ಬುಧವಾರ ಷೇರುಪೇಟೆಗೆ ಮಾಹಿತಿ ನೀಡಿದೆ.

ಈ ಕಾರಣಕ್ಕೆ ಸಂಸ್ಥೆಯ ಷೇರುಬೆಲೆ ಶೇ 6.16ರಷ್ಟು ಕಡಿಮೆಯಾಗಿ ₹ 263.75ಕ್ಕೆ ಇಳಿದಿದೆ. ಇದರಿಂದ ಷೇರುಪೇಟೆಯ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಸಂಸ್ಥೆಯ ಸಂಪತ್ತು ಗರಿಷ್ಠ ₹ 2,996 ಕೋಟಿಗಳವರೆಗೆ ಕಡಿಮೆಯಾಗಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !