ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕೀಕೃತ ಮಾರುಕಟ್ಟೆ ವ್ಯಾಪ್ತಿಗೆ 66 ಎಫ್‌ಪಿಒ

Last Updated 25 ಫೆಬ್ರವರಿ 2021, 21:52 IST
ಅಕ್ಷರ ಗಾತ್ರ

ಬೆಂಗಳೂರು: ನಬಾರ್ಡ್‌ ಮತ್ತು ರಾಜ್ಯ ಸರ್ಕಾರದ ಬೆಂಬಲ ಹೊಂದಿರುವ 66 ‘ರೈತ ಉತ್ಪಾದಕ ಸಂಘಟನೆ’ಗಳು (ಎಫ್‌ಪಿಒ) ಗುರುವಾರ ನಡೆದ ಕಾರ್ಯಕ್ರಮದಲ್ಲಿ ‘ಏಕೀಕೃತ ಮಾರುಕಟ್ಟೆ ವೇದಿಕೆ’ಗೆ (ಯುಎಂಪಿ) ಸೇರ್ಪಡೆಗೊಂಡವು.

ನಬಾರ್ಡ್‌ನ ಪ್ರಾದೇಶಿಕ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸಂಘಟನೆಗಳು ರಾಷ್ಟ್ರೀಯ ಇ–ಮಾರುಕಟ್ಟೆ ಸೇವೆ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಮನೋಜ್ ರಾಜನ್ ಅವರ ಸಮ್ಮುಖದಲ್ಲಿ ಯುಎಂಪಿ ಸೇರಿದವು ಎಂದು ನಬಾರ್ಡ್‌ನ ಪ್ರಕಟಣೆ ತಿಳಿಸಿದೆ. ನಬಾರ್ಡ್‌ನ ಕರ್ನಾಟಕ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ ನೀರಜ್ ಕುಮಾರ್ ವರ್ಮಾ ಅವರೂ ಉಪಸ್ಥಿತರಿದ್ದರು.

ಈ 66 ಸಂಘಟನೆಗಳಿಗೆ ಇನ್ನು ಮುಂದೆ 162 ಮಾರುಕಟ್ಟೆಗಳ 44 ಸಾವಿರ ನೋಂದಾಯಿತ ವರ್ತಕರ ಜೊತೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. 60ಕ್ಕೂ ಹೆಚ್ಚಿನ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಸಿಗುತ್ತದೆ. ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT