‘ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ರಿಸ್ಕ್‌ಗಳಿಗೆ ಒಳಪಟ್ಟಿವೆ’ ಎನ್ನುವ ಘೋಷಣೆ ಕೇಳಿದ ಕೂಡಲೇ ಅನೇಕರು ಮ್ಯೂಚುವಲ್ ಫಂಡ್ ಹೂಡಿಕೆಯ ಸಹವಾಸವೇ ಬೇಡ ಎನ್ನುವ ನಿರ್ಣಯಕ್ಕೆ ಬಂದುಬಿಡುತ್ತಾರೆ. ಆದರೆ ನೆನಪಿರಲಿ, ದೀರ್ಘಾವಧಿಯಲ್ಲಿ ಸಂಪತ್ತು ವೃದ್ಧಿಸಿಕೊಳ್ಳಲು ಇರುವ ಉತ್ತಮ ಹೂಡಿಕೆ ಆಯ್ಕೆಗಳಲ್ಲಿ ಮ್ಯೂಚುವಲ್ ಫಂಡ್‌ಗಳು ಒದಗಿಸುವ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ಐಪಿ) ಪ್ರಮುಖವಾದದ್ದು. ಹಣದುಬ್ಬರದ ಪ್ರಮಾಣವನ್ನು ಮೀರಿ ಲಾಭ ಕೊಡುವ ಸಾಮರ್ಥ್ಯ ಮ್ಯೂಚುವಲ್ಫಂಡ್ ಎಸ್ಐಪಿಗೆ ಇದೆ.

ಎಸ್ಐಪಿಯಲ್ಲಿ ಸಿಗುವ ಲಾಭ ಎಷ್ಟು?:
ಅಂಕಿ- ಅಂಶಗಳನ್ನು ಗಮನಿಸಿದಾಗ, ಮ್ಯೂಚುವಲ್ ಫಂಡ್ ಹೂಡಿಕೆಗಳು ಬ್ಯಾಂಕ್ ಎಫ್.ಡಿ.ಗಿಂತ (ನಿಶ್ಚಿತ ಠೇವಣಿ) ಹೆಚ್ಚು ಲಾಭವನ್ನುಖಂಡಿತವಾಗಿಯೂ ತಂದುಕೊಟ್ಟಿವೆ ಎಂಬುದು ಅರಿವಾಗುತ್ತದೆ. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟು, 2011ರ ಐರೋಪ್ಯ ರಾಷ್ಟ್ರಗಳ ಸಾಲ ಬಿಕ್ಕಟ್ಟು, 2016ರ ನೋಟು ರದ್ದತಿ,
2020ರ ಕೋವಿಡ್ ತಲ್ಲಣ... ಹೀಗೆ ವಿವಿಧ ಸಂದರ್ಭಗಳಲ್ಲಿ ಮಾರುಕಟ್ಟೆಗಳ ಏಳುಬೀಳಿನ ನಡುವೆಯೂ ದೀರ್ಘಾವಧಿಯಲ್ಲಿ ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರನಿಗೆ ಸಂಪತ್ತು ಗಳಿಸಿಕೊಟ್ಟಿವೆ. ಮ್ಯೂಚುವಲ್ ಫಂಡ್ ಹೂಡಿಕೆಗಳಲ್ಲಿ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಮತ್ತು ಮಲ್ಟಿಕ್ಯಾಪ್ ಎಂಬ
ವಿವಿಧ ಮಾದರಿಗಳಿವೆ.

ಒಂದೊಂದು ಮಾದರಿಯ ಹೂಡಿಕೆಗಳು ಒಂದೊಂದು ರೀತಿಯ ಲಾಭಾಂಶ ಕೊಟ್ಟಿದ್ದರೂ ಸರಾಸರಿ ಪರಿಗಣಿಸಿದಾಗ ಮ್ಯೂಚುವಲ್ ಫಂಡ್ ಎಸ್ಐಪಿಗಳು ಶೇ 8ರಿಂದ ಶೇ 20ರವರೆಗೆ ಲಾಭ ಕೊಟ್ಟಿವೆ.

ಎಸ್ಐಪಿಯಲ್ಲಿ ಎಷ್ಟು ಹೂಡಿಕೆ ಮಾಡಬೇಕು?:
ನೀವು ಎಷ್ಟು ಹಣ ಒಗ್ಗೂಡಿಸುವ ಗುರಿ ಹೊಂದಿದ್ದೀರಿ, ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಬಹುದು, ಎಷ್ಟು ಅವಧಿಗೆ ಹೂಡಿಕೆ ಮಾಡಬೇಕು ಮತ್ತು ನಿರೀಕ್ಷೆ ಮಾಡುವ ಲಾಭಾಂಶ ಎಷ್ಟು ಎನ್ನುವ ನಾಲ್ಕು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡ ಬಳಿಕ ಮ್ಯೂಚುವಲ್ ಫಂಡ್ ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ (ಎಸ್ಐಪಿ) ಎಷ್ಟು ಹೂಡಿಕೆ ಮಾಡಬೇಕು ಎನ್ನುವುದನ್ನು ತೀರ್ಮಾನಿಸಬೇಕಾಗುತ್ತದೆ.

ಉದಾಹರಣೆಗೆ ನಿಮಗೆ 15 ವರ್ಷಗಳ ನಂತರ ಮಕ್ಕಳ ಶಿಕ್ಷಣಕ್ಕಾಗಿ ₹25 ಲಕ್ಷ ಅಗತ್ಯವಿದ್ದು ಹೂಡಿಕೆ ಮೊತ್ತಕ್ಕೆ ಶೇ 12ರಷ್ಟು ಲಾಭಾಂಶ ಸಿಗುತ್ತದೆ ಎಂದು ಭಾವಿಸಿದಲ್ಲಿ ಪ್ರತಿ ತಿಂಗಳು ₹5 ಸಾವಿರವನ್ನು ಎಸ್ಐಪಿ ಹೂಡಿಕೆಗೆ ಮೀಸಲಿಡ
ಬೇಕಾಗುತ್ತದೆ.

ಎಸ್ಐಪಿ ಮೂಲಕ ಹೂಡಿಕೆ ಹೇಗೆ?:
ಮ್ಯೂಚುವಲ್ ಫಂಡ್ ಏಜೆಂಟರ ಮೂಲಕ, ಬ್ಯಾಂಕ್ಶಾಖೆಗಳ ಮೂಲಕ ಮ್ಯೂಚುವಲ್ ಫಂಡ್ ಎಸ್‌ಐಪಿಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. ಡಿಜಿಟಲ್ ವೇದಿಕೆಗಳ ಮೂಲಕ ಅಂದರೆ, ಬ್ಯಾಂಕ್ ಜಾಲತಾಣಗಳು, ಮ್ಯೂಚುವಲ್ ಫಂಡ್ ಹೂಡಿಕೆ ಆ್ಯಪ್‌ಗಳಾದ ಗ್ರೋ, ಪೇಟಿಎಂ ಮನಿ ಮುಂತಾದ ವೇದಿಕೆಗಳನ್ನು ಬಳಸಿಕೊಂಡು ಕೂಡ ಹೂಡಿಕೆ ಮಾಡಬಹುದು. ಮ್ಯೂಚುವಲ್ ಫಂಡ್ ಪರಿಭಾಷೆಯಲ್ಲಿ ಬ್ಯಾಂಕ್ ಅಥವಾ ಏಜೆಂಟರ ಮೂಲಕ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್‌ಅನ್ನು ‘ರೆಗ್ಯೂಲರ್’ ಮ್ಯೂಚುವಲ್ ಫಂಡ್ ಎಂದು, ನೇರವಾಗಿ ನೀವೇಹೂಡಿಕೆ ಮಾಡುವ ಫಂಡ್‌ಅನ್ನು ‘ಡೈರೆಕ್ಟ್ ಮ್ಯೂಚುವಲ್ ಫಂಡ್’ ಎಂದು ಕರೆಯುತ್ತಾರೆ. ಕಡಿಮೆ ವೆಚ್ಚದಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿಹೂಡಿಕೆ ಮಾಡಬೇಕು ಅಂದರೆ ‘ಡೈರೆಕ್ಟ್ ಮ್ಯೂಚುವಲ್ ಫಂಡ್’ ಒಳ್ಳೆಯ ಆಯ್ಕೆ.

ಸಣ್ಣ ಮೊತ್ತದ ಹೂಡಿಕೆಯೋ, ದೊಡ್ಡ ಮೊತ್ತದ ಹೂಡಿಕೆಯೋ?:
ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವಾಗ ಒಂದೇ ಬಾರಿಗೆ ದೊಡ್ಡ ಮೊತ್ತದ ಹೂಡಿಕೆ ಮಾಡುವುದು ಒಳಿತೋ ಅಥವಾ ಹಂತ ಹಂತವಾಗಿ ಎಸ್ಐಪಿ ಮೂಲಕ ಹಣ ತೊಡಗಿಸುವುದು ಉತ್ತಮವೋ ಎಂಬ ಪ್ರಶ್ನೆ ಎದುರಾಗುತ್ತದೆ. ಎಸ್ಐಪಿ ಮೂಲಕ ಹೂಡಿಕೆ ಮಾಡುವಾಗ ನೀವು ಮಾರುಕಟ್ಟೆಯ ಏರಿಳಿತಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ನಿಯಮಿತವಾಗಿ ನಿರ್ದಿಷ್ಟ ಮೊತ್ತ ಹೂಡಿಕೆ ಮಾಡುತ್ತಾ ಹೋದರೆ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗುತ್ತದೆ. ಆದರೆ ದೊಡ್ಡ ಮೊತ್ತದ ಹೂಡಿಕೆ ಮಾಡಬೇಕಾದರೆ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟವಿದೆಯೋ, ಕರಡಿ ಹಿಡಿತವಿದೆಯೋ ಎಂದು ಅರಿತು ನಿರ್ಧಾರ ಕೈಗೊಳ್ಳುವುದು ಮುಖ್ಯ. ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟವಿರುವಾಗ ದೊಡ್ಡ ಮೊತ್ತದ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು. ಹಾಗಾಗಿ ಯಾವ ಸಮಯದಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡುತ್ತೀರಿ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.