ತಿಂಗಳ ಮೊದಲ ವಾರ ಮಧ್ಯಮ ವರ್ಗದ ಮನೆಗಳಲ್ಲಿ ಸಂತೋಷದ ದಿನಗಳೇ. ಆದರೆ ಆ ಸಂತೋಷ ತಿಂಗಳಿಡೀ ಉಳಿಯುವುದಿಲ್ಲ. ಮನೆ ಬಾಡಿಗೆ, ವಿದ್ಯುತ್ ಬಿಲ್, ಮಕ್ಕಳ ಶಾಲಾ ಶುಲ್ಕ, ದಿನಸಿ ಖರ್ಚು, ಪಾವತಿಸಬೇಕಾದ ಸಾಲದ ಕಂತುಗಳು – ಎಲ್ಲವೂ ಸೇರಿ ಸಂಬಳವನ್ನು ತಿಂಗಳ ಮೊದಲಾರ್ಧದಲ್ಲೇ ಖಾಲಿಯಾಗುತ್ತದೆ. ತಿಂಗಳ ಕೊನೆಯಲ್ಲಿ ‘ಇನ್ನೆಷ್ಟು ಉಳಿಯಿತು?‘ ಎನ್ನುವುದಕ್ಕಿಂತ ‘ಸಂಬಳ ಬರಲು ಇನ್ನೆಷ್ಟು ದಿನ ಕಾಯಬೇಕು? ಎಂಬ ಆತಂಕ ಮಾಸಿಕ ಸಂಬಳಕ್ಕೆ ದುಡಿಯುವ ಮಧ್ಯಮ ವರ್ಗದವರದ್ದು. ಹಣದ ಕೊರತೆಯ ಒತ್ತಡ ಕೇವಲ ಜೇಬಿಗೆ ಮಾತ್ರವಲ್ಲ, ಮನಸ್ಸಿಗೂ ತಟ್ಟುತ್ತದೆ.
.ಭವಿಷ್ಯದಲ್ಲಿ ಬಡತನ ಇರುವುದೇ ಇಲ್ಲ, ಉಳಿತಾಯ ಏಕೆ? ಮತ್ತೊಂದು ಹುಳ ಬಿಟ್ಟ ಮಸ್ಕ್.
ಮಧ್ಯಮ ವರ್ಗದ ಬಹುತೇಕ ತಂದೆ-ತಾಯಿಗಳಿಗೆ ಒಂದು ದೊಡ್ಡ ಕನಸು ಇರುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ, ಗೌರವಯುತ ಭವಿಷ್ಯ. ಆದರೆ ಆ ಕನಸಿನ ಸಾಕಾರಕ್ಕೆ ಬೇಕಾದ ಖರ್ಚು ದಿನೇ ದಿನೇ ಹೆಚ್ಚುತ್ತಲೇ ಇರುತ್ತದೆ. ಮಕ್ಕಳ ಶಾಲಾ ಶುಲ್ಕ, ಕೋಚಿಂಗ್ ಕ್ಲಾಸ್, ಪುಸ್ತಕಗಳು, ಸಮವಸ್ತ್ರ – ಈ ಎಲ್ಲವೂ ಕುಟುಂಬದ ಆದಾಯದ ಮೂಲಕ್ಕೆ ಪೆಟ್ಟು ಕೊಡುತ್ತವೆ. ಕಡಿಮೆ ಆದಾಯದ ಕುಟುಂಬಗಳಿಗೆ ಈ ವೆಚ್ಚಗಳು ಕನಸುಗಳನ್ನು ದುಬಾರಿಯನ್ನಾಗಿಸುತ್ತವೆ. ಇದು ಗೊತ್ತಿದ್ದರೂ, ಮಕ್ಕಳ ಮುಖದಲ್ಲಿ ಮೂಡುವ ನಗುವಿಗೆ, ಅವರ ಭವಿಷ್ಯದ ಭರವಸೆಗಳಿಗಾಗಿ ತಾಯ್ತಂದೆಯರು ಕಷ್ಟಪಡುತ್ತಾರೆ.

ಭಾರತದಲ್ಲಿ ಬ್ಯಾಂಕ್ ಖಾತೆ ಹೊಂದಿದವರು ಶೇಕಡ 89 ಇದ್ದರೂ, ಉಳಿತಾಯದ ದರದಲ್ಲಿ ಹಿಂದೆ ಇದ್ದೇವೆ. ಕುಟುಂಬದ ಸದಸ್ಯರಿಗೆ ಆರೋಗ್ಯ ಸಮಸ್ಯೆ ಬಂದಾಗ ಹಣದ ಕೊರತೆ ಎಷ್ಟು ಕ್ರೂರವಾಗಬಹುದು ಎಂಬುದು ಮದ್ಯಮ ವರ್ಗದ ಜನರಿಗೆ ಅನೇಕ ಬಾರಿ ಅನುಭವಕ್ಕೆ ಬರುತ್ತಲೇ ಇರುತ್ತದೆ. ಆಸ್ಪತ್ರೆಯ ಬಿಲ್, ಶಸ್ತ್ರಚಿಕಿತ್ಸೆಯ ಭಾರ ಇವು ಇಡೀ ಕುಟುಂಬವನ್ನು ಸಾಲದ ಕೂಪಕ್ಕೆ ತಳ್ಳಬಹುದು. ಈ ಸಮಯದಲ್ಲಿ ‘ಸ್ವಲ್ಪ ಉಳಿತಾಯ ಮಾಡಿದ್ದರೆ..‘ ಎಂಬ ಪಶ್ಚಾತ್ತಾಪದ ನುಡಿಗಳು ಅನೇಕ ಮನೆ-ಮನಗಳಲ್ಲಿ ಕೇಳಿಸುತ್ತಿದೆ. ಹಾಗಾಗಿ ತುರ್ತು ನಿಧಿ ಎಂದರೆ ಐಷಾರಾಮಿ ಅಲ್ಲ, ಅದು ಬದುಕಿನ ರಕ್ಷಣಾ ಕವಚ. ಇದನ್ನರಿತು ಕನಿಷ್ಠ 6 ರಿಂದ 9 ತಿಂಗಳ ಖರ್ಚಿಗೆ ಬೇಕಾದ ಹಣವನ್ನು ತುರ್ತು ನಿಧಿಯಲ್ಲಿಡುವುದು ಕ್ಷೇಮ.
.ಪ್ರಶ್ನೋತ್ತರ: ತಿಂಗಳಿಗೆ ₹35,000 ಸಂಬಳ ಬಂದರೆ ಹೇಗೆ ಉಳಿತಾಯ ಮಾಡಬಹುದು.
ಬಹುತೇಕರಿಗೆ ಹಣ ಸಂಪಾದಿಸುವುದು ಗೊತ್ತು, ಆದರೆ ಹಣವನ್ನು ಹೇಗೆ ನಿರ್ವಹಿಸಬೇಕು ಎಂಬುದು ಗೊತ್ತಿಲ್ಲ. ವೈಯಕ್ತಿಕ ಹಣಕಾಸಿನ ಮುಖ್ಯ ಅಂಶಗಳಲ್ಲಿ ಪ್ರಮುಖವಾದದ್ದು ಬಜೆಟ್ ಮತ್ತು ಖರ್ಚಿನ ಮೇಲ್ವಿಚಾರಣೆ. ಭಾರತದಲ್ಲಿ ಇಂದು ಹಣಕಾಸು ಸಾಕ್ಷರತೆಯ ದರ ಕೇವಲ ಶೇಕಡ 27 ಅಷ್ಟೇ. ಇದು ಜಾಗತಿಕ ಸರಾಸರಿ ಶೇಕಡ 42ಕ್ಕಿಂತ ಕಡಿಮೆ. ಇದು ಭಾರತದ ಮಧ್ಯಮ ವರ್ಗದ ಜನರ ದೊಡ್ಡ ಸಮಸ್ಯೆ. ಅನಗತ್ಯ ಖರ್ಚು ಹಾಗೂ ಸಾಲಗಳು, ಹೂಡಿಕೆ ಬಗ್ಗೆ ಇರುವ ಭಯ ಇವೆಲ್ಲವೂ ಕುಟುಂಬದ ಭವಿಷ್ಯವನ್ನು ದುರ್ಬಲಗೊಳಿಸುತ್ತಿವೆ. ಆದರೆ ಹಣಕಾಸು ಅರಿವು ಇದ್ದರೆ, ಸಣ್ಣ ಆದಾಯದಲ್ಲೂ ದೊಡ್ಡ ಭದ್ರತೆ ನಿರ್ಮಿಸಬಹುದು.

ತಿಂಗಳಿಗೆ ₹ 500 ಉಳಿತಾಯ ಮಾಡುವುದು ದೊಡ್ಡದೇನೂ ಅಲ್ಲ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅದೇ ₹ 500 ಅನ್ನು ಹೂಡಿಕೆ ಮಾಡುವ ಆರ್ಥಿಕ ಶಿಸ್ತನ್ನು ಬೆಳೆಸಿಕೊಳ್ಳಲು ಮುಂದಾಗುವುದಿಲ್ಲ. ಧೀರ್ಘ ಕಾಲಾವಧಿಗೆ ಈ ರೀತಿಯ ಹೂಡಿಕೆ ಮಾಡಿದರೆ, ಮಕ್ಕಳ ಶಿಕ್ಷಣಕ್ಕೆ, ನಿವೃತ್ತಿ ಜೀವನಕ್ಕೆ ದೊಡ್ಡ ನೆರವಾಗಬಹುದು ಎಂದು ತಿಳಿಯಬೇಕು. ಯಾಕೆಂದರೆ ಇಂದಿನ ಈ ಚಿಕ್ಕ ಹೆಜ್ಜೆಗಳು ಮುಂದಿನ ದೊಡ್ಡ ಕನಸುಗಳಿಗೆ ದಾರಿ ಮಾಡಿಕೊಡುತ್ತವೆ. ಉಳಿತಾಯ ಎಂದರೆ ಇವತ್ತಿಗೆ ತ್ಯಾಗ ಎನಿಸಬಹುದು, ಆದರೆ ಅದು ಭವಿಷ್ಯದ ನೆಮ್ಮದಿಯನ್ನು ನಿರ್ಧರಿಸುವ ಬೆಲೆಯಾಗಿದೆ.
.ಅಂಚೆ ಕಚೇರಿಯ ವಿವಿಧ ಉಳಿತಾಯ ಯೋಜನೆ: ಯಾವುದಕ್ಕೆ ಹೆಚ್ಚು ಬಡ್ಡಿ? ಮಾಹಿತಿ ಇಲ್ಲಿದೆ.
ಹಣ ಹೆಚ್ಚಿದ್ದರೆ ಮಾತ್ರ ನಮ್ಮ ಜೀವನ ಸುಂದರವಾಗುತ್ತದೆ ಎಂಬುದು ಸತ್ಯವಲ್ಲ. ಆದರೆ ನಮಗೆ ಅದೇ ಹಣದ ಭದ್ರತೆ ಇದ್ದರೆ, ಜೀವನ ಸುಲಭವಾಗುತ್ತದೆ ಎಂಬುದು ಅಷ್ಟೇ ಸತ್ಯ. ಮಧ್ಯಮ ವರ್ಗದವರಿಗೆ ಬೇಕಾಗಿರುವುದು ಐಶ್ವರ್ಯವಲ್ಲ, ಆರ್ಥಿಕ ಸ್ಥಿರತೆ. ಭಯರಹಿತವಾದ ಮಕ್ಕಳ ಭವಿಷ್ಯದ ದಿನಗಳು, ವೈದ್ಯಕೀಯ ಖರ್ಚಿನ ಆತಂಕವೇ ಇಲ್ಲದ ಘಳಿಗೆ, ನಿವೃತ್ತಿಯ ದಿನಗಳ ಬಗ್ಗೆ ಇರುವ ವಿಶ್ವಾಸ ಅದೇ ನಿಜವಾದ ಶ್ರೀಮಂತಿಕೆ.

ಒಂದನ್ನಂತೂ ನಾವು ಮರೆಯಬಾರದು, ಹಣ ನಮ್ಮ ಜೀವನವನ್ನು ನಿಯಂತ್ರಿಸಬಾರದು. ಆದರೆ ನಾವು ಹಣವನ್ನು ನಿಯಂತ್ರಿಸಬೇಕು. ಸಣ್ಣ ಆದಾಯದಲ್ಲೂ ದೊಡ್ಡ ಭವಿಷ್ಯವನ್ನು ನಿರ್ಮಿಸಲು ಸಾಧ್ಯ. ಅದಕ್ಕಾಗಿ ಬೇಕಾಗಿರುವುದು ಹಣಕಾಸಿನ ಅರಿವು, ನಿರಂತರ ಶಿಸ್ತು ಮತ್ತು ಅನಿಶ್ಚಿತತೆಯನ್ನು ಎದುರಿಸುವ ಧೈರ್ಯ.ಯಾರಿಗೆ ಸಾಲುತ್ತೆ ಸಂಬಳ ಎನ್ನುವುದಕ್ಕಿಂತ ಸಂಬಳದಲ್ಲೇ ಉಳಿಸಿ, ಬೆಳೆಸಿ ಜಯಿಸಬೇಕಿದೆ.
.ರಾಷ್ಟ್ರೀಯ ಉಳಿತಾಯ ಯೋಜನೆ ಮರುಕಳಿಸುವ RD ಖಾತೆಯಿಂದ ಸಾಲ ಪಡೆಯಬಹುದೇ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.