ಮ್ಯೂಚುವಲ್ ಫಂಡ್ಗಳು ಹೂಡಿಕೆದಾರರಿಗೆ ಎಷ್ಟು ಲಾಭ ನೀಡಿವೆ, ಆ ಲಾಭವು ಒಳ್ಳೆಯ ಪ್ರಮಾಣದಲ್ಲಿ ಇದೆಯೋ ಅಥವಾ ಅದು ಅಷ್ಟೇನೂ ಸಮಾಧಾನ ತರುವಂತೆ ಇಲ್ಲವೋ ಎಂಬುದನ್ನು ಪರಿಶೀಲಿಸುವಾಗ, ಲಾಭವನ್ನು ವಿವಿಧ ಸೂಚ್ಯಂಕಗಳ ಜೊತೆ ಹೋಲಿಸಿ ನೋಡುವ ಕ್ರಮವೊಂದು ಇದೆ.

ಅಂದರೆ, ನಿರ್ದಿಷ್ಟ ಸೂಚ್ಯಂಕವೊಂದು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಲಾಭ ನೀಡಿದೆ ಎಂಬುದನ್ನು ಆಯ್ದ ಮ್ಯೂಚುವಲ್ ಫಂಡ್ ಅದೇ ಅವಧಿಯಲ್ಲಿ ನೀಡಿದ ಗಳಿಕೆಯ ಜೊತೆ ಹೋಲಿಸಿ ನೋಡಲಾಗುತ್ತದೆ. ಫಂಡ್ನ ಗಳಿಕೆಯು ಹೆಚ್ಚಿದ್ದರೆ, ಅದು ಆ ಫಂಡ್ನ ನಿರ್ವಹಣೆ ಉತ್ತಮವಾಗಿದೆ ಎಂಬುದನ್ನು ಸೂಚಿಸುತ್ತದೆ. ಫಂಡ್ ಒಂದು ಉತ್ತಮವಾಗಿದೆಯೋ, ಇಲ್ಲವೋ ಎಂಬುದನ್ನು ತೀರ್ಮಾನಿಸಲು ಈ ಹೋಲಿಕೆಯೊಂದೇ ಅಂತಿಮ ಅಲ್ಲದಿದ್ದರೂ, ಹೂಡಿಕೆದಾರರು ಈ ರೀತಿ ಹೋಲಿಸಿ ನೋಡುವುದು ಅಪೇಕ್ಷಣೀಯ ಎಂದು ತಜ್ಞರು ಹೇಳುತ್ತಾರೆ.

ಹೀಗೆ ಹೋಲಿಕೆ ಮಾಡಿ ನೋಡುವುದಕ್ಕೆ ಅಗತ್ಯ ಸೌಲಭ್ಯವನ್ನು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟವು ತನ್ನ ವೆಬ್ಸೈಟ್ನಲ್ಲಿ (www.amfiindia.com) ಒದಗಿಸಿದೆ. ಈ ವೆಬ್ಸೈಟ್ಗೆ ಭೇಟಿ ನೀಡಿ, ರಿಸರ್ಚ್ ಆ್ಯಂಡ್ ಇನ್ಫಾರ್ಮೇಷನ್ ವಿಭಾಗದಲ್ಲಿನ ‘ಅದರ್ ಡೇಟಾ’ ಕೊಂಡಿಯ ಮೇಲೆ ಕ್ಲಿಕ್ ಮಾಡಬೇಕು. ಆಗ ಫಂಡ್ಗಳನ್ನು ಹೋಲಿಕೆ ಮಾಡಲು ಇರುವ ಪುಟ ತೆರೆದುಕೊಳ್ಳುತ್ತದೆ.

ಹೋಲಿಕೆ ಮಾಡಲು ಹೊರಟಿರುವ ಫಂಡ್ ಈಕ್ವಿಟಿ ವಿಭಾಗಕ್ಕೆ ಸೇರಿದ್ದೋ, ಡೆಟ್ ವಿಭಾಗಕ್ಕೆ ಸೇರಿದ್ದೋ ಎಂಬುದನ್ನು ಈ ಪುಟದಲ್ಲಿ ಮೊದಲು ಆಯ್ಕೆ ಮಾಡಿಕೊಳ್ಳಬೇಕು. ನಂತರ ಫಂಡ್ನ ಉಪವರ್ಗೀಕರಣ ಯಾವುದು (ಫ್ಲೆಕ್ಸಿ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಇತ್ಯಾದಿ) ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯಲ್ಲಿ ಯಾವ ಫಂಡ್ ಎಂಬುದನ್ನು ಆಯ್ಕೆ ಮಾಡಿ, ‘ಗೋ’ ಬಟನ್ ಕ್ಲಿಕ್ ಮಾಡಬೇಕು.

ಇಷ್ಟು ಆಯ್ಕೆ ಮಾಡಿಕೊಂಡ ನಂತರದಲ್ಲಿ, ಫಂಡ್ ಹಾಗೂ ಅದು ತಂದುಕೊಟ್ಟ ಲಾಭವನ್ನು ಹೋಲಿಕೆ ಮಾಡಬೇಕಿರುವ ಸೂಚ್ಯಂಕವು ಕಾಣುತ್ತದೆ.

ಇದನ್ನು ಆಧರಿಸಿ, ಫಂಡ್ನಿಂದ ಸಿಕ್ಕ ಲಾಭವನ್ನು ವಿವಿಧ ಅವಧಿಗೆ (1 ವರ್ಷ, 3 ವರ್ಷ, 5 ವರ್ಷ) ಹೋಲಿಕೆ ಮಾಡಬಹುದು. ಆ ಫಂಡ್ ಒಳ್ಳೆಯ ಲಾಭವನ್ನು ಕೊಟ್ಟಿದೆಯೋ ಇಲ್ಲವೋ ಎಂಬುದನ್ನು ಹೂಡಿಕೆದಾರರು ತಾವಾಗಿಯೇ ಪರಿಶೀಲಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.