ಕರ್ನಾಟಕದಲ್ಲಿ ಕೆಲಸ ಮಾಡುವ ವಯಸ್ಸಿನ ಶೇಕಡ 50ರಷ್ಟು ಮಂದಿ ಸ್ವಂತ ಉದ್ಯೋಗ ಮಾಡುತ್ತಿದ್ದಾರೆ. ಅಂದರೆ, ವೈದ್ಯರು, ವಕೀಲರು, ವಾಸ್ತುಶಿಲ್ಪಿಗಳು, ಸಣ್ಣ ವ್ಯಾಪಾರಿಗಳು, ಗಿಗ್ ಕಾರ್ಮಿಕರು... ಭಾರತದಲ್ಲಿ 30 ಕೋಟಿಗೂ ಹೆಚ್ಚು ಮಂದಿ ಸ್ವಂತ ಉದ್ಯೋಗದಲ್ಲಿದ್ದಾರೆ. ಆದರೆ ಇವರಿಗೆ ಸೂಕ್ತವಾದ ಅವಧಿ ವಿಮೆಯನ್ನು ಖರೀದಿಸುವುದು ಹಲವು ಕಾರಣಗಳಿಂದಾಗಿ ಕಷ್ಟವಾಗುತ್ತಿದೆ. ಸ್ವಂತ ಉದ್ಯೋಗದಲ್ಲಿ ಇರುವವರು ದೇಶದ ಬೆಳವಣಿಗೆಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಾರಾದರೂ, ನೌಕರರಿಗೆ ಸುಲಭವಾಗಿ ಸಿಗುವ ಹಣಕಾಸಿನ ಸುರಕ್ಷತೆ ಇವರಿಗೆ ಸಿಗುವುದಿಲ್ಲ.

ವೇತನ ಪಡೆಯುವ ವರ್ಗದವರಿಗೆ ಕಂಪನಿಯ ಕಡೆಯಿಂದ ಅವಧಿ ವಿಮೆಯು ಬಹಳ ಸುಲಭವಾಗಿ ಸಿಗುವ ಸಾಧ್ಯತೆ ಇರುತ್ತದೆ. ಆದರೆ ಸ್ವಂತ ಉದ್ಯೋಗದಲ್ಲಿ ತೊಡಗಿರುವವರಿಗೆ ಪರಿಸ್ಥಿತಿ ಭಿನ್ನವಾಗಿರುತ್ತದೆ. ಅವರಿಗೆ ಸರಿಯಾದ ವಿಮಾ ರಕ್ಷೆಯ ಮೊತ್ತವನ್ನು ನಿರ್ಧರಿಸುವುದೇ ಸವಾಲಾಗುತ್ತದೆ. ಇದಕ್ಕೆ ಮುಖ್ಯವಾದ ಕಾರಣಗಳು ಮೂರು.

ಆದಾಯದಲ್ಲಿ ಏರಿಳಿತ: ಸ್ವಂತ ಉದ್ಯೋಗದಲ್ಲಿ ಇರುವವರ ಆದಾಯದಲ್ಲಿ ಏರುಪೇರು ಇರುವುದು ಸಹಜ. ಉದಾಹರಣೆಗೆ, ಗ್ರಾಹಕರಿಂದ ಬರುವ ಬೇಡಿಕೆ ಆಧರಿಸಿ ಗುತ್ತಿಗೆದಾರ, ಅಂಗಡಿ ಮಾಲೀಕ, ವಾಸ್ತುಶಿಲ್ಪಿಯ ಆದಾಯದಲ್ಲಿ ಹೆಚ್ಚು–ಕಡಿಮೆ ಆಗುತ್ತಿರುತ್ತದೆ.

ಆದಾಯದಲ್ಲಿನ ಏರಿಳಿತಗಳು, ಇಂತಹ ವರ್ಗದವರ ಒಟ್ಟು ಆದಾಯ ಹಾಗೂ ಅವರಿಗೆ ಅಗತ್ಯವಿರುವ ವಿಮಾ ಮೊತ್ತವನ್ನು ತೀರ್ಮಾನ ಮಾಡುವ ವಿಚಾರದಲ್ಲಿ ವಿಮಾ ಕಂಪನಿಗಳ ಕೆಲಸವನ್ನು ಸಂಕೀರ್ಣವಾಗಿಸುತ್ತವೆ.

ಆದಾಯದ ದಾಖಲೆ ಇಲ್ಲದಿರುವುದು: ಅವಧಿ ವಿಮೆಯನ್ನು ನೀಡುವ ಕಂಪನಿಗಳು ವ್ಯಕ್ತಿಯ ಆದಾಯವನ್ನು ಅಧಿಕೃತ ದಾಖಲೆ ಆಧರಿಸಿ ನಿರ್ಣಯಿಸುತ್ತವೆ. ಸ್ವಂತ ಉದ್ಯೋಗ ಮಾಡುವವರಿಗೆ ಆದಾಯಕ್ಕೆ ಸೂಕ್ತವಾದ ದಾಖಲೆಗಳು ಇಲ್ಲದಿರುವ ಕಾರಣಕ್ಕೆ, ಅವರಿಗೆ ಸೂಕ್ತವಾದ ಅವಧಿ ವಿಮೆಯನ್ನು ಖರೀದಿ ಮಾಡುವುದು ಕಷ್ಟದ ಕೆಲಸವಾಗಿ ಪರಿಣಮಿಸುತ್ತದೆ.

ಹೆಚ್ಚಿನ ರಿಸ್ಕ್: ಸ್ವಂತ ಉದ್ಯೋಗ ಮಾಡುತ್ತಿರುವವರ ಆದಾಯವು ತೀರಾ ನಿಶ್ಚಿತವಾಗಿ ಇರುವುದಿಲ್ಲವಾದ ಕಾರಣ, ವಿಮಾ ಕಂಪನಿಗಳಿಗೆ ಇಂತಹ ವ್ಯಕ್ತಿಗಳ ‘ಜೀವದ ಮೌಲ್ಯವನ್ನು’ (ಎಚ್ಎಲ್ವಿ) ನಿರ್ಧರಿಸುವುದು ಕಷ್ಟದ ಕೆಲಸವಾಗುತ್ತದೆ. ಹಾಗೆಯೇ, ಇಂತಹ ವ್ಯಕ್ತಿಗಳು ವಿಮಾ ಪ್ರೀಮಿಯಂ ಮೊತ್ತವನ್ನು ನಿರಂತರವಾಗಿ ಪಾವತಿ ಮಾಡಬಲ್ಲರೇ ಎಂಬುದನ್ನು ನಿಖರವಾಗಿ ಹೇಳುವುದು ಕೂಡ ಕಷ್ಟವಾಗುತ್ತದೆ. ಈ ಅನಿಶ್ಚಿತತೆಗಳ ಕಾರಣದಿಂದಾಗಿ ಇವರ ಅರ್ಜಿಗಳು ಕೆಲವೊಮ್ಮೆ ತಿರಸ್ಕೃತಗೊಳ್ಳುತ್ತವೆ, ಇನ್ನು ಕೆಲವೊಮ್ಮೆ ಇವರಿಗೆ ಕಡಿಮೆ ಮೊತ್ತಕ್ಕೆ ವಿಮೆ ನೀಡಲಾಗುತ್ತದೆ.

ತಂತ್ರಜ್ಞಾನದ ಬಳಕೆ: ವಿಮಾ ಕಂಪನಿಗಳು ತಂತ್ರಜ್ಞಾನದ ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು, ವಿಮಾ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕು. ಆಗ ಅವುಗಳಿಗೆ, ಈ ವರ್ಗವನ್ನು ಸರಿಯಾಗಿ ತಲುಪಲು ಸಾಧ್ಯವಾಗುತ್ತದೆ. ಬ್ಯಾಂಕ್ ವಹಿವಾಟು ದಾಖಲೆಗಳು, ಜಿಎಸ್ಟಿ ವಿವರ ಸಲ್ಲಿಕೆಯ ದಾಖಲೆಗಳು, ಯುಪಿಐ ಪಾವತಿ ವಿವರಗಳು ಆದಾಯಕ್ಕೆ ದಾಖಲೆಯಾಗಿ ಒದಗಿಬರುವ ಸಂಬಳದ ಚೀಟಿ ಅಥವಾ ಆದಾಯ ತೆರಿಗೆ ಪಾವತಿ ವಿವರಗಳಿಗೆ ಪರ್ಯಾಯವಾಗಿ ಬಳಕೆಗೆ ಬರಬಹುದು.

ವಿಮಾ ಕಂಪನಿಗಳು ಈ ಬದಲಾವಣೆಗೆ ಒಗ್ಗಿಕೊಂಡರೆ ವ್ಯಕ್ತಿಯ ಹಣಕಾಸಿನ ಸ್ಥಿತಿಯನ್ನು ಹೆಚ್ಚು ನಿಖರವಾಗಿ ಅರ್ಥ ಮಾಡಿಕೊಳ್ಳಲು ಆಗುತ್ತದೆ. ಅದರಲ್ಲೂ ಮುಖ್ಯವಾಗಿ ಆದಾಯಕ್ಕೆ ಸೂಕ್ತವಾದ ದಾಖಲೆಗಳು ಇಲ್ಲದ ಸ್ವಂತ ಉದ್ಯೋಗ ನಡೆಸುತ್ತಿರುವವರ ವಿಚಾರದಲ್ಲಿ ಇವು ಹೆಚ್ಚು ನೆರವಾಗುತ್ತವೆ.

ಜೀವಕ್ಕೆ ರಕ್ಷೆ: ಭಾರತದಲ್ಲಿ ಜೀವ ವಿಮಾ ಸೌಲಭ್ಯವನ್ನು ಪಡೆದವರ ಪ್ರಮಾಣವು 2023–24ನೇ ಹಣಕಾಸು ವರ್ಷದಲ್ಲಿ ಶೇ 2.8ಕ್ಕೆ ಇಳಿಕೆ ಕಂಡಿದೆ. ಗ್ರಾಹಕರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸಲು ವಿಮಾ ಉದ್ಯಮವು ಮುಂದಡಿ ಇರಿಸಬೇಕಿದೆ. ವ್ಯಕ್ತಿಗೆ ಸೂಕ್ತವಾಗುವ ವಿಮಾ ಮೊತ್ತ ಎಷ್ಟು ಎಂಬುದನ್ನು ನಿರ್ಧರಿಸಲು ವಿಮಾ ಕಂಪನಿಗಳು ತಂತ್ರಜ್ಞಾನದ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕಿದೆ.

ನೀತಿ ನಿರೂಪಕರು, ವಿಮಾ ಕಂಪನಿಗಳು ಹಾಗೂ ಹಣಕಾಸು ಸಂಸ್ಥೆಗಳ ನಡುವೆ ಸಮನ್ವಯಕ್ಕೆ ಆದ್ಯತೆ ನೀಡಿ, ಸ್ವಂತ ಉದ್ಯೋಗ ನಡೆಸುತ್ತಿರುವವರಿಗೆ ಸೂಕ್ತವಾದ ವಿಮಾ ಯೋಜನೆಗಳು ರೂಪುಗೊಳ್ಳಬೇಕಿದೆ. ಇದು ಸಾಧ್ಯವಾದಾಗ 2047ರ ವೇಳೆಗೆ ಎಲ್ಲರಿಗೂ ವಿಮಾ ಸೌಲಭ್ಯ ತಲುಪಿಸುವ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ

ಲೇಖಕ: ಗೋ ಡಿಜಿಟ್ ಜೀವ ವಿಮಾ ಕಂಪನಿಯ ಹಿರಿಯ ಅಧಿಕಾರಿ

ಮನುಷ್ಯನ ಜೀವಕ್ಕೆ ಒಂದು ಬೆಲೆ

ಜೀವ ವಿಮೆಯ ಮೊತ್ತವು ಎಷ್ಟು ಇರಬೇಕು ಎಂಬುದನ್ನು ತೀರ್ಮಾನಿಸುವುದು ಹಣಕಾಸಿನ ಲೆಕ್ಕಾಚಾರದ ಕೆಲಸ ಮಾತ್ರವೇ ಅಲ್ಲ. ಅದು ಪ್ರೀತಿಪಾತ್ರರನ್ನು ನೋಡಿಕೊಳ್ಳುವ ವಿಚಾರದಲ್ಲಿನ ಬದ್ಧತೆಯನ್ನು ತೋರಿಸುವ ಕೆಲಸವೂ ಹೌದು. ಸ್ವಂತ ಉದ್ಯೋಗ ನಡೆಸುತ್ತಿರುವವರಿಗೆ ಆದಾಯ ನಿಶ್ಚಿತವಾಗಿ ಇಲ್ಲದಿರುವ ಕಾರಣಕ್ಕೆ ಇದು ಇನ್ನಷ್ಟು ಹೆಚ್ಚು ಜವಾಬ್ದಾರಿಯ ಕೆಲಸ. ವಿಮಾ ಮೊತ್ತ ನಿರ್ಧರಿಸುವ ಮೊದಲು ಈ ಅಂಶಗಳನ್ನು ಪರಿಗಣಿಸಬೇಕು:

ಬಾಕಿ ಇರುವ ಸಾಲಗಳು: ಉದ್ಯಮಕ್ಕಾಗಿ ಪಡೆದಿರುವ ಸಾಲ, ವೈಯಕ್ತಿಕ ಸಾಲ ಎಷ್ಟಿದೆ ಎಂಬುದನ್ನು ಪರಿಗಣಿಸಿ ವಿಮಾ ಮೊತ್ತ ತೀರ್ಮಾನಿಸಬೇಕು. ಹೀಗೆ ಮಾಡಿದಾಗ, ವ್ಯಕ್ತಿಯ ಅನುಪಸ್ಥಿತಿಯಲ್ಲಿ ಆ ಹೊರೆಯು ಆತನ ಕುಟುಂಬದ ಸದಸ್ಯರ ಮೇಲೆ ಬೀಳುವುದಿಲ್ಲ.

ಮುಂದಿನ ಗುರಿಗಳು: ಮಕ್ಕಳ ಶಿಕ್ಷಣ, ಸಂಗಾತಿಯ ನಿವೃತ್ತಿ ನಂತರದ ಬದುಕು ಹಾಗೂ ಇತರ ದೀರ್ಘಾವಧಿ ಆಸೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಿ. ವ್ಯಕ್ತಿಯ ಅನುಪಸ್ಥಿತಿಯ ನಡುವೆಯೂ ವಿಮೆಯು ಈ ಎಲ್ಲ ಆಸೆಗಳನ್ನು ಕಾಪಿಟ್ಟುಕೊಳ್ಳಲು ನೆರವಾಗಬೇಕು.

ಹಣದುಬ್ಬರ: ದೀರ್ಘಕಾಲದಲ್ಲಿ ಜೀವನದ ವೆಚ್ಚದಲ್ಲಿ ಯಾವ ಪ್ರಮಾಣದ ಹೆಚ್ಚಳ ಆಗಬಹುದು ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳಿ.

ಜೀವ ವಿಮೆ ಅಂದರೆ ಸಂಖ್ಯೆಗಳ ಆಚೆಗೆ ಇರುವಂಥದ್ದು. ಅದು ದುಡಿಯುವ ವ್ಯಕ್ತಿಯು ಇನ್ನಿಲ್ಲವಾದ ನಂತರವೂ, ಆತನ ಕುಟುಂಬದ ಸದಸ್ಯರು ಹಣಕಾಸಿನ ಹೊರೆ ಇಲ್ಲದೆ ತಮ್ಮ ಗುರಿಗಳನ್ನು ಮುಟ್ಟಲು ನೆರವಾಗುವಂತೆ ಇರಬೇಕು. ಸರಿಯಾದ ಜೀವ ವಿಮೆಯನ್ನು ಪಡೆಯುವುದು ಅಂದರೆ ಪ್ರೀತಿಯನ್ನು, ಜವಾಬ್ದಾರಿಯನ್ನು, ದೂರದರ್ಶಿತ್ವವನ್ನು ಸಮರ್ಪಕವಾಗಿ ನಿರ್ವಹಿಸುವುದು ಕೂಡ ಹೌದು.

ಸಾಮಾನ್ಯವಾಗಿ ಜೀವ ವಿಮೆ ಪಡೆಯುವವರು ತಮ್ಮ ವಾರ್ಷಿಕ ಆದಾಯದ 10ರಿಂದ 15 ಪಟ್ಟು ಹೆಚ್ಚು ಮೊತ್ತಕ್ಕೆ ವಿಮೆ ಪಡೆಯಬೇಕು. ಆದರೆ ಸ್ವಂತ ಉದ್ಯೋಗ ನಡೆಸುತ್ತಿರುವವರು ಹೆಚ್ಚಿನ ಮೊತ್ತಕ್ಕೆ ವಿಮೆ ಪಡೆಯಬೇಕಾಗಬಹುದು.

ಹೆಚ್ಚುವರಿ ಸೌಲಭ್ಯ ಪಡೆಯಿರಿ: ಅವಧಿ ವಿಮೆ ಪಡೆಯುವಾಗ ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ಕೂಡ ಪಡೆದುಕೊಳ್ಳಬಹುದು. ಅಂತಹ ಸೌಲಭ್ಯ ಗಳು ಕುಟುಂಬಕ್ಕೆ ಹಣಕಾಸಿನ ಬಿಕ್ಕಟ್ಟು ಎದುರಾದಾಗ ರಕ್ಷಣೆಗೆ ಬರುತ್ತವೆ.

ಗಂಭೀರ ಆರೋಗ್ಯ ಸಮಸ್ಯೆ: ಕ್ಯಾನ್ಸರ್ ಹಾಗೂ ಹೃದ್ರೋಗದಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾದಾಗ ವ್ಯಕ್ತಿಗೆ ಇಡುಗಂಟಿನ ರೂಪದಲ್ಲಿ ಹಣವನ್ನು ನೀಡುವ ಸೌಲಭ್ಯ ಪಡೆದುಕೊಳ್ಳಿ. ಇದರಿಂದ ಆರೋಗ್ಯಸೇವಾ ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ.

ಪ್ರೀಮಿಯಂ ಮನ್ನಾ ಸೌಲಭ್ಯ: ಈ ಸೌಲಭ್ಯವನ್ನು ಪಡೆದುಕೊಂಡಲ್ಲಿ, ವ್ಯಕ್ತಿಗೆ ಅಂಗವೈಕಲ್ಯ ಅಥವಾ ಗಂಭೀರ ಅನಾರೋಗ್ಯದಿಂದಾಗಿ ಪ್ರೀಮಿಯಂ ಮೊತ್ತ ಪಾವತಿಸಲು ಸಾಧ್ಯವಾಗದೆ ಇದ್ದಾಗಲೂ, ವಿಮಾ ರಕ್ಷೆಯು ಚಾಲ್ತಿಯಲ್ಲಿ ಇರುತ್ತದೆ.

ಅಪಘಾತದಿಂದ ಸಾವು: ವಿಮಾ ಸೌಲಭ್ಯ ಪಡೆದಿರುವ ವ್ಯಕ್ತಿಯು ಅಪಘಾತದ ಕಾರಣದಿಂದಾಗಿ ಸಾವನ್ನಪ್ಪಿದರೆ, ಹೆಚ್ಚುವರಿ ಹಣಕಾಸಿನ ನೆರವು ಒದಗಿಸುವ ಸೌಲಭ್ಯವು ಅವಧಿ ವಿಮೆಯಲ್ಲಿ ಇರುತ್ತದೆ. ಅದನ್ನು ಪಡೆಯಬಹುದು. ಹೆಚ್ಚುವರಿ ಸೌಲಭ್ಯ ಪಡೆಯಲು ಹೆಚ್ಚುವರಿ ಮೊತ್ತ ಪಾವತಿಸಬೇಕು. ಆದರೆ ಅವು ವಿಮಾ ರಕ್ಷೆಯ ವ್ಯಾಪ್ತಿಯನ್ನು ಹೆಚ್ಚು ಮಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.