ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಉಲ್ಬಣಗೊಂಡಿರುವಂತೆಯೇ ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮುಂದುವರಿದಿದ್ದು, ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಇಳಿಕೆ ಕಂಡಿವೆ.

ಏಷ್ಯಾ ಮಾರುಕಟ್ಟೆಗಳಲ್ಲಿ ಕುಸಿತ ಮುಂದುವರಿದಿದ್ದು, ಇದು ಬಿಎಸ್ಇ ಸೆನ್ಸೆಕ್ಸ್ ಹಾಗೂ ನಿಫ್ಟಿ ಮೇಲೆ ನೇರ ಪರಿಣಾಮ ಬೀರಿವೆ. ತೈಲ ಬೆಲೆ ಏರಿಕೆ ಸಹ ಹೂಡಿಕೆದಾರರಲ್ಲಿ ಅನಿಶ್ಚಿತತೆಗೆ ಕಾರಣವಾಯಿತು.

ಬಿಎಸ್ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 1,758.22 ಅಂಶ ಇಳಿಕೆ ಕಂಡು 78,480.63ಕ್ಕೆ ತಲುಪಿದೆ. ಆ ಮೂಲಕ ಶೇ 2.19ರಷ್ಟು ಕುಸಿತ ಕಂಡಿದೆ.

ಮತ್ತೊಂದೆಡೆ ಎನ್ಎಸ್ಇ ನಿಫ್ಟಿ 530.85 ಅಂಶ ಅಥವಾ ಶೇ 2.13ರಷ್ಟು ಇಳಿಕೆಯಾಗಿ 24,334.85 ಅಂಶಕ್ಕೆ ತಲುಪಿದೆ.

ಲಾರ್ಸೆನ್ & ಟರ್ಬೊ, ಟಾಟಾ ಸ್ಟೀಲ್, ಇಂಟರ್ಗ್ಲೋಬ್ ಏವಿಯೇಷನ್, ಅಲ್ಟ್ರಾಟೆಕ್ ಸಿಮೆಂಟ್, ಅದಾನಿ ಪೋರ್ಟ್ಸ್ ಮತ್ತು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಹೆಚ್ಚಿನ ನಷ್ಟ ಅನುಭವಿಸಿವೆ.

ಈ ನಡುವೆ ಇನ್ಫೋಸೀಸ್, ಎಚ್ಸಿಎಲ್ ಟೆಕ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಾಭ ಗಳಿಸಿದವು.

ಬ್ರೆಂಟ್ ಕಚ್ಚಾ ತೈಲ ದರವು ಶೇ 0.87ರಷ್ಟು ಏರಿಕೆಯಾಗಿದ್ದು, ಪ್ರತೀ ಬ್ಯಾರಲ್ ದರವು 82.11 ಡಾಲರ್ಗೆ ತಲುಪಿದೆ.

ಏಷ್ಯಾ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕೊಸ್ಪಿ, ಜಪಾನ್ನ ನಿಕ್ಕಿ, ಶಾಂಘೈನ ಎಸ್ಎಸ್ಇ ಕಾಂಪೊಸಿಟ್ ಹಾಗೂ ಹಾಂಕಾಂಗ್ನ ಹ್ಯಾಂಗ್ ಸೆಂಗ್ ಸೂಚ್ಯಂಕಗಳು ಇಳಿಕೆ ಕಂಡಿವೆ. ಮಂಗಳವಾರದಂದು ಅಮೆರಿಕದ ಮಾರುಕಟ್ಟೆ ಹಿನ್ನಡೆ ಅನುಭವಿಸಿತ್ತು.
.ಪಶ್ಚಿಮ ಏಷ್ಯಾ ಸಂಘರ್ಷ: ತೈಲ ಸಾಗಣೆ ಮಾರ್ಗ ಬಂದ್.MRPL ತೈಲ ಸಂಸ್ಕರಣೆ ಮೇಲೆ ಕೊಲ್ಲಿ ಯುದ್ಧದ ಕರಿಛಾಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.