ಹಾಂಗ್‌ಝೌ: ಇಂಡೊನೇಷ್ಯಾ ಮಹಿಳಾ ತಂಡದವರು ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಂಗೋಲಿಯ ವಿರುದ್ಧ 172 ರನ್‌ಗಳ ಜಯ ಸಾಧಿಸಿದರು.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಡೊನೇಷ್ಯಾ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 187 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮಂಗೋಲಿಯ 10 ಓವರ್‌ಗಳಲ್ಲಿ ಕೇವಲ 15 ರನ್‌ಗಳಿಗೆ ಆಲೌಟಾಯಿತು. ಈ ತಂಡದ ಏಳು ಆಟಗಾರ್ತಿಯರು ಶೂನ್ಯಕ್ಕೆ ಔಟಾದರು.
‘ಎ’ ಗುಂಪಿನ ಪಂದ್ಯದಲ್ಲಿ ಇಂಡೊನೇಷ್ಯಾ ಪರ ನಿ ಲುಹ್ ದೇವಿ 48 ಎಸೆತಗಳಲ್ಲಿ 62 ರನ್ ಗಳಿಸಿದರು. ‘ಬಿ’ ಗುಂಪಿನ ಪಂದ್ಯದಲ್ಲಿ ಮಲೇಷ್ಯಾ, 22 ರನ್‌ಗಳಿಂದ ಹಾಂಗ್‌ಕಾಂಗ್ ವಿರುದ್ಧ ಗೆದ್ದಿತು.