ನವದೆಹಲಿ: ‘2018–19ರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು (ಪಿಎಸ್ಬಿ) ಮನ್ನಾ ಮಾಡಿರುವ ಸಾಲದ ಮೊತ್ತಕ್ಕಿಂತಲೂ ವಸೂಲಿ ಮಾಡಿರುವ ಮೊತ್ತವೇ ಅಧಿಕವಾಗಿದೆ‘ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, 2018–19ರಲ್ಲಿ ₹ 36,377 ಕೋಟಿ ಸಾಲ ಮನ್ನಾ ಮಾಡಲಾಗಿದ್ದು, ₹ 45,593 ಕೋಟಿ ಮೊತ್ತದ ಸಾಲ ವಸೂಲಿಯಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಮನ್ನಾ ಮಾಡಿರುವ ಸಾಲದ ಮೊತ್ತಕ್ಕೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಸಾಲ ವಸೂಲಿ ವೇಗವಾಗಿ ನಡೆಯುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

‘2008ರ ಮಾರ್ಚ್ನಲ್ಲಿ ₹ 18.19 ಲಕ್ಷ ಕೋಟಿಗಳಷ್ಟಿದ್ದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಸರಾಸರಿ ಮುಂಗಡವು 2014ರ ಮಾರ್ಚ್ ಅಂತ್ಯಕ್ಕೆ ₹ 52.16 ಲಕ್ಷ ಕೋಟಿಗೆ ಏರಿಕೆಯಾಗಿದೆ. ಬ್ಯಾಂಕ್ಗಳ ಸುಸ್ತಿ ಸಾಲ ಹೆಚ್ಚಾಗಲು ಆಕ್ರಮಣಕಾರಿ ಸಾಲ ನೀಡಿಕೆ ನೀತಿ, ಉದ್ದೇಶಪೂರ್ವಕ ಸುಸ್ತಿದಾರ, ಭ್ರಷ್ಟಾಚಾರ, ಇನ್ನೂ ಕೆಲವು ಸಂದರ್ಭಗಳಲ್ಲಿ ಮಂದಗತಿಯ ಆರ್ಥಿಕ ಪ್ರಗತಿ ಕಾರಣ’ ಎಂದಿದ್ದಾರೆ.

ಸಾಲ ವಸೂಲಿ ಹೆಚ್ಚಾಗುವಂತೆ ಮಾಡಲು, ಹಣಕಾಸು ನಷ್ಟ ಮತ್ತು ದಿವಾಳಿ ಕಾಯ್ದೆ, ಹಣಕಾಸು ಸ್ವತ್ತಿನ ಮರು ಹೊಂದಾಣಿಕೆಯಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.