ಸೋಮವಾರ, ಜೂನ್ 27, 2022
26 °C

ಫ್ಲೋಬಿಜ್‌ ಸ್ಟಾರ್ಟ್‌ಅಪ್‌: ವಹಿವಾಟು ವಿಸ್ತರಣೆಗೆ ಬಂಡವಾಳ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದಲ್ಲಿ ಅತ್ಯಂತ ತ್ವರಿತವಾಗಿ ಬೆಳವಣಿಗೆ ದಾಖಲಿಸುತ್ತಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಸ್‌ಎಂಬಿ) ಡಿಜಿಟಲೀಕರಣ ನವೋದ್ಯಮವಾಗಿರುವ ಫ್ಲೋಬಿಜ್‌ (FloBiz), ತನ್ನ ವಹಿವಾಟು ವಿಸ್ತರಿಸಲು ಎಲಿವೇಷನ್‌ ಕ್ಯಾಪಿಟಲ್‌ನ ನೇತೃತ್ವದಲ್ಲಿ ನಡೆದ ಸರಣಿ ಎ ಸುತ್ತಿನಲ್ಲಿ ₹ 72 ಕೋಟಿ ಮೊತ್ತದ (10 ದಶಲಕ್ಷ ಡಾಲರ್‌) ಬಂಡವಾಳ  ಸಂಗ್ರಹಿಸಿದೆ.

ಫ್ಲೋಬಿಜ್‌ ನವೋದ್ಯಮದಲ್ಲಿನ ಹಾಲಿ ಹೂಡಿಕೆ ಕಂಪನಿಗಳಾದ ಗ್ರೀನ್‌ಓಕ್ಸ್‌ ಕ್ಯಾಪಿಟಲ್‌ ಮತ್ತು ಬೀನೆಕ್ಸ್ಟ್‌ ಕೂಡ ಈ ಬಂಡವಾಳ ಸಂಗ್ರಹ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.

ಬಿಲ್ಲಿಂಗ್‌ ಮತ್ತು ಲೆಕ್ಕಪತ್ರ ನಿರ್ವಹಿಸುವ ಆ್ಯಪ್‌ ‘ಮೈ ಬಿಲ್ ಬುಕ್‌’ (myBillBook) ಒದಗಿಸುವ ಫ್ಲೋಬಿಜ್‌, ಸಂಗ್ರಹವಾಗಿರುವ  ಹೊಸ ಬಂಡವಾಳವನ್ನು ತನ್ನ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲು, ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು, ಮಾರಾಟ ಹಾಗೂ ಮಾರುಕಟ್ಟೆ ಪ್ರಯತ್ನಗಳನ್ನು ತ್ವರಿತಗೊಳಿಸುವುದಕ್ಕೆ ಬಳಸಲು ಉದ್ದೇಶಿಸಿದೆ. 30 ಲಕ್ಷಕ್ಕೂ ಹೆಚ್ಚು ‘ಎಸ್‌ಎಂಬಿ‘ಗಳು ಈ ನವೋದ್ಯಮದ ಪ್ರಯೋಜನ ಪಡೆದುಕೊಳ್ಳುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು