ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1 ಲಕ್ಷ ಕೋಟಿ ಡಾಲರ್‌ ಷೇರು ಮಾರುಕಟ್ಟೆ ಮೌಲ್ಯ; ದಾಖಲೆ ಸೃಷ್ಟಿಸಿದ 'ಆ್ಯಪಲ್'

Last Updated 3 ಆಗಸ್ಟ್ 2018, 2:42 IST
ಅಕ್ಷರ ಗಾತ್ರ

ಸ್ಯಾನ್‌ ಫ್ರಾನ್ಸಿಸ್ಕೊ: ಐಫೋನ್‌ ತಯಾರಿಕೆಯ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿರುವ ಅಮೆರಿಕದ ಆ್ಯಪಲ್‌ ಕಂಪನಿ 1 ಲಕ್ಷ ಕೋಟಿ ಡಾಲರ್‌ (ಅಂದಾಜು ₹68.64 ಲಕ್ಷ ಕೋಟಿ) ಷೇರು ಮಾರುಕಟ್ಟೆ ಮೌಲ್ಯ ಹೊಂದಿರುವ ಜಗತ್ತಿನ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನ್ಯೂಯಾರ್ಕ್‌ ಷೇರುಪೇಟೆಯಲ್ಲಿ ಕಳೆದ ಮೂರು ದಿನಗಳಲ್ಲಿ ಆ್ಯಪಲ್ ಷೇರು ಮೌಲ್ಯ ಶೇ.9 ಏರಿಕೆಯಾಗಿದೆ. ಗುರುವಾರ ಮಧ್ಯಾಹ್ನದ ವಹಿವಾಟಿನಲ್ಲಿಷೇರು ಮೌಲ್ಯ 207.05 ಡಾಲರ್ ದಾಟಿದಾಗ ಕಂಪನಿಯ ಷೇರು ಮಾರುಕಟ್ಟೆ ಮೌಲ್ಯ ಲಕ್ಷ ಕೋಟಿ ತಲುಪಿತು.

ಜೂನ್‌ಗೆ ಮುಕ್ತಾಯವಾದ ತ್ರೈಮಾಸಿಕ ವ್ಯವಹಾರದ ವರದಿ ಪ್ರಕಟವಾದಾಗ ಪ್ರಸ್ತುತ ಕಂಪನಿಯ ಷೇರು ಮೌಲ್ಯ ಶೇ.3ರಷ್ಟು ಏರಿಕೆಯಾಗಿತ್ತು. ಆ್ಯಪಲ್ ಕಂಪನಿಯಯೊಂದಿಗೆ ಪ್ರಬಲ ಪೈಪೋಟಿ ಹೊಂದಿರುವ ಅಮೆಜಾನ್ ಕಂಪನಿಯ ಷೇರು ಮಾರುಕಟ್ಟೆ ಮೌಲ್ಯ 90,000 ಕೋಟಿ ಡಾಲರ್ ಆಗಿದೆ

1976ರಲ್ಲಿ ಸ್ಟೀವ್ಸ್ ಜಾಬ್ಸ್ ಸ್ಥಾಪಿಸಿದ ಆ್ಯಪಲ್‌ಕಂಪನಿ 1980ರಿಂದ ಸಾರ್ವಜನಿಕ ಹೂಡಿಕೆಯನ್ನು ಪಡೆದುಕೊಂಡಿದೆ. 2011ರಲ್ಲಿ ಸ್ಟೀವ್‌ ಜಾಬ್ಸ್ ಮರಣಾನಂತರ ಟಿಮ್ ಕುಕ್ ಕಂಪನಿಯ ಮುಖ್ಯಸ್ಥರಾದರು,

ಆ್ಯಪಲ್ ಕಂಪನಿ ನಡೆದು ಬಂದ ಹಾದಿ
1976: ಆ್ಯಪಲ್ 1 ಪರ್ಸನಲ್ ಕಂಪ್ಯೂಟರ್ ಕಿಟ್
1977: ಆ್ಯಪಲ್ 2
1984 : ಮ್ಯಾಕಿನ್ತೋಶ್
1989 :ಮ್ಯಾಕಿನ್ತೋಶ್ ಪೋರ್ಟಬಲ್
1990: ಮ್ಯಾಕಿನ್ತೋಶ್ ಎಲ್ ಸಿ
1991: ಪವರ್ ಬುಕ್ ಸಿಸ್ಟಂ 7
1997: ಆ್ಯಪಲ್ ಸ್ಟೋರ್
1998: ಐಮ್ಯಾಕ್
1999: ಐಬುಕ್
2001: ಐಪೋಡ್
2003: ಐಟ್ಯೂನ್ಸ್ ಸ್ಟೋರ್
2006: ಮ್ಯಾಕ್‍ಬುಕ್ ಪ್ರೊ
2007: ಐ ಫೋನ್, ಆ್ಯಪಲ್ ಟಿವಿ
2008: ಆ್ಯಪ್ ಸ್ಟೋರ್
2010: ಐಪ್ಯಾಡ್
2011 : ಐ ಕ್ಲೌಡ್
2012: ಆ್ಯಪಲ್ ಇಯರ್‍‍ಪೋಡ್
2014: ಐಫೋನ್ 6
2015: ಆ್ಯಪಲ್ ವಾಚ್
2016: ಏರ್ ಪೋಡ್ಸ್
2017 :ಐಫೋನ್ ಎಕ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT