ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು, ಆಟೊ ವಲಯ: ಹೆಚ್ಚಿದ ವಿದೇಶಿ ಹೂಡಿಕೆ

Published 11 ಜೂನ್ 2023, 3:13 IST
Last Updated 11 ಜೂನ್ 2023, 3:13 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ದೇಶದ ಷೇರುಪೇಟೆಗಳಲ್ಲಿ ಹಣಕಾಸು ಮತ್ತು ಆಟೊ ವಲಯದ ಷೇರುಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದರು.

ವಿದೇಶಿ ಹೂಡಿಕೆದಾರರು ಮೇ ತಿಂಗಳಿನಲ್ಲಿ ₹ 43,838 ಕೋಟಿ (ಎನ್‌ಎಸ್‌ಡಿಎಲ್ ಮಾಹಿತಿ) ಹೂಡಿಕೆ ಮಾಡಿದ್ದಾರೆ. ಇದರಲ್ಲಿ ಹೆಚ್ಚಿನ ಪಾಲನ್ನು ಹಣಕಾಸು ಸೇವೆಗಳು, ಆಟೊ, ಆಟೊ ಬಿಡಿಭಾಗಗಳು, ಬಂಡವಾಳ ಸರಕುಗಳು ಮತ್ತು ಎಫ್‌ಎಂಸಿಜಿ ವಲಯದಲ್ಲಿ ತೊಡಗಿಸಿದ್ದಾರೆ. ಜೂನ್‌ನಲ್ಲಿಯೂ ಹೂಡಿಕೆಯನ್ನು ಮುಂದುವರಿಸಿದ್ದು, ಹಣಕಾಸು ಮತ್ತು ಆಟೊ ವಲಯದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸುವ ನಿರೀಕ್ಷೆ ಇದೆ ಎಂದು ವಿಜಯಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮೇನಲ್ಲಿ ಐ.ಟಿ. ಮತ್ತು ಲೋಹ ವಲಯಗಳ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆದರೆ, ಏಪ್ರಿಲ್‌ಗೆ ಹೋಲಿಸಿದರೆ ಮಾರಾಟದ ಪ್ರಮಾಣ ಕಡಿಮೆ ಆಗಿದೆ ಎಂದು ತಿಳಿಸಿದರು.

ಜಾಗತಿಕವಾಗಿ ಮೇ ತಿಂಗಳಿನಲ್ಲಿ ಜಪಾನ್‌, ದಕ್ಷಿಣ ಕೊರಿಯಾ, ತೈವಾನ್‌ ಮತ್ತು ಭಾರತದ ಮಾರುಕಟ್ಟೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಆಗಿದ್ದು, ಚೀನಾದಿಂದ ಬಂಡವಾಳ ಹಿಂತೆಗೆತ ಆಗಿದೆ. ಜೂನ್‌ನಲ್ಲಿಯೂ ಇದೇ ಪ್ರವೃತ್ತಿ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಎಫ್‌ಪಿಐ ಒಳಹರಿವು ಮುಂದುವರಿದಿರುವುದರಿಂದಾಗಿ ನಿಫ್ಟಿಯು ಶೇ 10ರಷ್ಟು ಏರಿಕೆ ಕಂಡಿದೆ. ಮಾರ್ಚ್‌ನಲ್ಲಿ ಕನಿಷ್ಠ ಮಟ್ಟವನ್ನು ತಲುಪಿತ್ತು ಎಂದರು ಅವರು ಹೇಳಿದರು.

ಎಫ್‌ಐಐ ಒಳಹರಿವಿನ ವಿವರ (ಕೋಟಿಗಳಲ್ಲಿ)

ಜೂ. 5;₹701 ಮಾರಾಟ

ಜೂ. 6;₹386 ಖರೀದಿ

ಜೂ. 7;₹1,182 ಖರೀದಿ

ಜೂ. 8;₹212 ಖರೀದಿ

ಜೂ. 9;₹309 ಮಾರಾಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT