ಜಿಎಸ್ಟಿ ಮಂಡಳಿಯು ಎಫ್ಎಂಸಿಜಿ, ವಾಹನ ಸೇರಿದಂತೆ ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ತಗ್ಗಿಸುವ ತೀರ್ಮಾನ ಕೈಗೊಂಡಿದೆ. ಉತ್ಪನ್ನಗಳ ಬೆಲೆ ಇಳಿಕೆಯು ತಕ್ಷಣದ ಪ್ರಯೋಜನವಾಗಿ ಜನಸಾಮಾನ್ಯರಿಗೆ ದೊರೆಯಲಿದೆ. ಆದರೆ, ಹೂಡಿಕೆದಾರರು ಎಲ್ಲಿ ಲಾಭ ಅರಸಬೇಕಿದೆ? ಇಲ್ಲಿದೆ ತಜ್ಞರ ವಿಶ್ಲೇಷಣೆ...

ಜಗತ್ತಿನಲ್ಲಿ ಅತ್ಯಂತ ವೇಗದ ಬೆಳವಣಿಗೆ ಕಾಣುತ್ತಿರುವ ದೊಡ್ಡ ಅರ್ಥ ವ್ಯವಸ್ಥೆ ಎಂದು ಭಾರತದ ಅರ್ಥವ್ಯವಸ್ಥೆಯನ್ನು ಕಳೆದ ನಾಲ್ಕು ವರ್ಷಗಳಿಂದ ಗುರುತಿಸಲಾಗುತ್ತಿದೆ. ಆದರೆ ಅರ್ಥ ವ್ಯವಸ್ಥೆಯ ಬೆಳವಣಿಗೆಯ ವೇಗವು ತುಸು ಕಡಿಮೆ ಆಗಿರುವಂತಿದೆ. ಅಂತರರಾಷ್ಟ್ರೀಯ ವ್ಯಾಪಾರದಲ್ಲಿನ ಅನಿಶ್ಚಿತತೆಗಳು ಹಾಗೂ ಅಮೆರಿಕವು ಭಾರತದ ಸರಕುಗಳ ಮೇಲೆ ವಿಧಿಸಿರುವ ಭಾರಿ ಪ್ರಮಾಣದ ಸುಂಕದ ಹಿನ್ನೆಲೆಯಲ್ಲಿ, 2025–26ನೇ ಹಣಕಾಸು ವರ್ಷದಲ್ಲಿ ಶೇಕಡ 6.5ರ ಬೆಳವಣಿಗೆಯ ಗುರಿಯನ್ನು ತಲುಪಲು ಆಗಲಿಕ್ಕಿಲ್ಲ.

ಬೆಳವಣಿಗೆಯ ಪ್ರಮಾಣವು ಶೇ 6.2ರ ಆಸುಪಾಸಿನಲ್ಲಿ ಇರಬಹುದು. ಅಂದರೆ, ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಉತ್ತೇಜನ ಬೇಕಾಗಿದೆ ಎಂಬುದು ಸ್ಪಷ್ಟ.

ನೀತಿ ನಿರ್ಧಾರಗಳನ್ನು ಕೈಗೊಳ್ಳುವ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಆರ್ಬಿಐ ಮುನ್ನೋಟದಿಂದ ಹೆಜ್ಜೆ ಇರಿಸುತ್ತಿವೆ. ₹12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ (ವೇತನದಾರರಿಗೆ ₹12.75 ಲಕ್ಷದವರೆಗಿನ ಆದಾಯಕ್ಕೆ ವಿನಾಯಿತಿ) ನೀಡುವ ಬಜೆಟ್ ಮಂಡಿಸುವ ಮೂಲಕ ಈ ವರ್ಷದ ಆರಂಭ ಆಯಿತು. ಈ ವಿತ್ತೀಯ ಉತ್ತೇಜನಾ ಕ್ರಮಕ್ಕೆ ಪೂರಕವಾಗಿ ಆರ್ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಒಟ್ಟು ಶೇ 1ರಷ್ಟು ತಗ್ಗಿಸಿತು. ನಗದು ಮೀಸಲು ಅನುಪಾತವನ್ನು (ಸಿಆರ್ಆರ್) ತಗ್ಗಿಸಿತು. ಬೆಳವಣಿಗೆಯನ್ನು ಹೆಚ್ಚಿಸಲು, ಬೇಡಿಕೆಗೆ ಶಕ್ತಿ ನೀಡಲು, ಹೊಸ ಹೂಡಿಕೆಗಳಿಗೆ ಉತ್ತೇಜನ ನೀಡಲು ಹಣಕಾಸು ಮತ್ತು ವಿತ್ತೀಯ ನೆಲೆಯ ಈ ಬಲಿಷ್ಠ ಕ್ರಮಗಳು ನೆರವಾದವು.

ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಿರುವುದು, ಮಧ್ಯಮ ವರ್ಗದ ಜನರ ಕೈಯಲ್ಲಿ ಖರ್ಚಿಗೆ ಹೆಚ್ಚು ಹಣ ಉಳಿಯುವಂತೆ ಮಾಡಿದ್ದಷ್ಟೇ ಅಲ್ಲದೆ, ಗ್ರಾಹಕರಲ್ಲಿನ ವಿಶ್ವಾಸವನ್ನು ಕೂಡ ಹೆಚ್ಚು ಮಾಡುವಂಥದ್ದು. ಇದು ಅರ್ಥ ವ್ಯವಸ್ಥೆಯಲ್ಲಿ ಬೇಡಿಕೆಯನ್ನು ಉಳಿಸಿಕೊಳ್ಳುವುದಕ್ಕೆ ಬಹಳ ಮಹತ್ವದ್ದು. ರೆಪೊ ದರದ ಇಳಿಕೆಯು ವ್ಯಕ್ತಿಗಳಿಗೆ ಹಾಗೂ ಉದ್ದಿಮೆಗಳಿಗೆ ಸಾಲದ ಮೇಲಿನ ಬಡ್ಡಿಯನ್ನು ತಗ್ಗಿಸುತ್ತದೆ. ಈ ಮೂಲಕ ಅದು ಸಾಲ ನೀಡಿಕೆ ಹೆಚ್ಚಳ ಹಾಗೂ ಬಂಡವಾಳ ಸೃಜನೆಗೆ ಪೂರಕ ಪರಿಸ್ಥಿತಿ ನಿರ್ಮಿಸಿದೆ. ಸಿಆರ್ಆರ್ ತಗ್ಗಿಸಿರುವ ಕ್ರಮವು ಬ್ಯಾಂಕಿಂಗ್ ವ್ಯವಸ್ಥೆಗೆ ಹೆಚ್ಚು ಹಣ ಲಭ್ಯವಾಗುವಂತೆ ಮಾಡುತ್ತದೆ. ಇದರಿಂದಾಗಿ ಹಣಕಾಸಿನ ಸಂಸ್ಥೆಗಳು ಇನ್ನಷ್ಟು ಮುಕ್ತವಾಗಿ ಸಾಲ ನೀಡಲು, ಅರ್ಥ ವ್ಯವಸ್ಥೆಯ ಉತ್ಪಾದಕ ವಲಯಗಳನ್ನು ಬೆಂಬಲಿಸಲು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ, ಈ ಸಂಘಟಿತ ಯತ್ನವು ನೀತಿಗಳಲ್ಲಿ ಹಾಗೂ ಉದ್ದೇಶಗಳಲ್ಲಿನ ಸ್ಪಷ್ಟತೆಯನ್ನು ಹೇಳುತ್ತಿದೆ.

ಸುಧಾರಣೆಗಳು ತ್ವರಿತಗತಿಯಲ್ಲಿ ಆಗುತ್ತಿರುವಂತೆ ಕಾಣುತ್ತಿದೆ. ಸ್ವಾತಂತ್ರ್ಯೋತ್ಸವದ ದಿನ ಮಾಡಿದ ಭಾಷಣದಲ್ಲಿ ಪ್ರಧಾನಿಯವರು ಜಿಎಸ್ಟಿ ವ್ಯವಸ್ಥೆಯಲ್ಲಿ ದೀಪಾವಳಿಗೆ ಮೊದಲು ಬದಲಾವಣೆಗಳನ್ನು ತರುವುದಾಗಿ ಹೇಳಿದರು. ಜಿಎಸ್ಟಿ ದರಗಳಲ್ಲಿ ಬದಲಾವಣೆ ತರುವ ಪ್ರಸ್ತಾವಕ್ಕೆ ಜಿಎಸ್ಟಿ ಮಂಡಳಿ ಒಪ್ಪಿಗೆ ನೀಡಿದೆ.

ಬೇಡಿಕೆಗೆ ಇಂಬು, ಬೆಳವಣಿಗೆಗೆ ಉತ್ತೇಜನ:

ಹೂಡಿಕೆದಾರರ ದೃಷ್ಟಿಯಿಂದ ಹೇಳುವುದಾದರೆ, ಜಿಎಸ್ಟಿ ದರ ಇಳಿಕೆಯ ತಕ್ಷಣದ ಪರಿಣಾಮವಾಗಿ ಪ್ರಮುಖ ವಲಯಗಳಲ್ಲಿ ಬೇಡಿಕೆ ಹೆಚ್ಚಾಗುವ ಹಾಗೂ ಕಂಪನಿಗಳ ಲಾಭದಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ಜಿಎಸ್ಟಿ ದರ ಇಳಿಕೆಯಿಂದಾಗಿ ಉತ್ಪನ್ನಗಳ ಹಾಗೂ ಸೇವೆಗಳ ಬೆಲೆಯು ಕಡಿಮೆಯಾಗುವ ನಿರೀಕ್ಷೆ ಇದೆ. ಇದು ಬೇಡಿಕೆ ಹೆಚ್ಚಳಕ್ಕೆ ನೆರವಾಗಬಹುದು. ಎಫ್ಎಂಸಿಜಿ, ಆಟೊಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳು, ಸಿಮೆಂಟ್, ವಿಮೆ ವಲಯಗಳು ಜಿಎಸ್ಟಿ ಇಳಿಕೆಯಿಂದಾಗಿ ಪ್ರಯೋಜನ ಪಡೆಯುವ ಸ್ಥಿತಿಯಲ್ಲಿವೆ. ಅತಿಹೆಚ್ಚಿನ ಪ್ರಯೋಜನವು ಆಟೊಮೊಬೈಲ್ ವಲಯಕ್ಕೆ ಸಿಗಲಿದೆ. ವಾಹನಗಳ ಮೇಲಿನ ತೆರಿಗೆಯನ್ನು ಶೇ 28ರ ಬದಲು ಶೇ 18ಕ್ಕೆ ನಿಗದಿ ಮಾಡಲಾಗಿದೆ.

ಕಡಿಮೆ ತೆರಿಗೆ ಹಾಗೂ ತತ್ಪರಿಣಾಮವಾಗಿ ವಾಹನಗಳ ಬೆಲೆಯಲ್ಲಿನ ಇಳಿಕೆಯು ಬೇಡಿಕೆಯನ್ನು ಹೆಚ್ಚಿಸಬಲ್ಲದು, ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಬಲ್ಲದು. ಜಿಎಸ್ಟಿ ಸರಳೀಕರಣವು ದೀರ್ಘಾವಧಿಯಲ್ಲಿ ಇನ್ನಷ್ಟು ಹೆಚ್ಚಿನ ಪ್ರಯೋಜನಗಳನ್ನು ತಂದುಕೊಡುವ ನಿರೀಕ್ಷೆ ಇದೆ. ಇವೆಲ್ಲವೂ ಅಲ್ಪಾವಧಿಯ ಅವಕಾಶಗಳನ್ನು ಅರಸುತ್ತಿರುವ ಹೂಡಿಕೆದಾರರಿಗೆ ಹಾಗೂ ಈ ವಲಯಗಳಲ್ಲಿ ಸುಸ್ಥಿರ ಬೆಳವಣಿಗೆಯ ಸಾಧ್ಯತೆಗಳನ್ನು ಅರಸುತ್ತಿರುವವರಿಗೆ ಒಳ್ಳೆಯದು.

ಹೂಡಿಕೆಯ ದೃಷ್ಟಿಯಿಂದ, ಜಿಎಸ್ಟಿ ಬದಲಾವಣೆಯು ಬಹಳ ಮಹತ್ವ ಪಡೆದುಕೊಳ್ಳುತ್ತದೆ. ಏಕೆಂದರೆ ಇದು ಗ್ರಾಹಕರು ಮಾಡುವ ವೆಚ್ಚಗಳ ಜೊತೆ, ಕಂಪನಿಗಳ ಲಾಭ–ನಷ್ಟದ ಜೊತೆ ನೇರ ನಂಟು ಹೊಂದಿದೆ. ಉದಾಹರಣೆಗೆ, ಬಹಳ ಕಡಿಮೆ ಪ್ರಮಾಣದ ಲಾಭದೊಂದಿಗೆ ಕಾರ್ಯಾಚರಣೆ ನಡೆಸುವ ಎಫ್ಎಂಸಿಜಿ ಕಂಪನಿಗಳು ತೆರಿಗೆ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿ ತಮ್ಮ ಮಾರಾಟ ಪ್ರಮಾಣ ಹೆಚ್ಚಿಸಿಕೊಳ್ಳಬಹುದು. ಅಥವಾ ಅವು ತೆರಿಗೆ ಇಳಿಕೆಯಿಂದಾಗುವ ಉಳಿತಾಯದ ಒಂದು ಪಾಲನ್ನು ತಮ್ಮಲ್ಲೇ ಇರಿಸಿಕೊಂಡು ಲಾಭದ ಪ್ರಮಾಣ ಹೆಚ್ಚಿಸಿಕೊಳ್ಳಬಹುದು.

ಆಟೊಮೊಬೈಲ್ ಮಾರುಕಟ್ಟೆಯು ದರದಲ್ಲಿ ಆಗುವ ವ್ಯತ್ಯಾಸಗಳಿಗೆ ಬಹಳ ತೀವ್ರವಾಗಿ ಸ್ಪಂದಿಸುತ್ತದೆ. ಜಿಎಸ್ಟಿ ಇಳಿಕೆಯ ಕ್ರಮವು ವಾಹನಗಳ ಬೇಡಿಕೆಯನ್ನು ಹೆಚ್ಚಿಸಬಹುದು, ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನಗಳು ಹಾಗೂ ಸಣ್ಣ ಕಾರುಗಳಿಗೆ ಬೇಡಿಕೆ ಹೆಚ್ಚಬಹುದು. ಅದೇ ರೀತಿಯಲ್ಲಿ ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಹವಾನಿಯಂತ್ರಕಗಳಿಗೆ ಹಬ್ಬದ ಋತುವಿನಲ್ಲಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಬಹುದು. ಮನೆಗಳ ನಿರ್ಮಾಣ ಮತ್ತು ಮೂಲಸೌಕರ್ಯ ನಿರ್ಮಾಣ ಚಟುವಟಿಕೆಗಳಿಗೆ ಚುರುಕು ದೊರೆತು, ಹೆಚ್ಚಿನ ಜನ ವಿಮಾ ಉತ್ಪನ್ನಗಳನ್ನು ಹೊಂದಲು ಬಯಸಿ, ಸಿಮೆಂಟ್ ಹಾಗೂ ವಿಮಾ ವಲಯ ಕೂಡ ಹೆಚ್ಚಿನ ಬೇಡಿಕೆ ದಾಖಲಿಸಬಹುದು.

ವಿಸ್ತೃತವಾದ ನೆಲೆಯಲ್ಲಿ ಹೇಳಬೇಕು ಎಂದಾದರೆ, ಜಿಎಸ್ಟಿ ವ್ಯವಸ್ಥೆಯಲ್ಲಿ ದಕ್ಷತೆ ಹೆಚ್ಚಾಗಿ, ಜಿಎಸ್ಟಿ ವ್ಯವಸ್ಥೆಯು ಹೆಚ್ಚು ಸರಳಗೊಂಡು, ತೆರಿಗೆ ಸೋರಿಕೆಯು ಕಡಿಮೆ ಆಗಬಹುದು. ಇದರಿಂದಾಗಿ ಸರ್ಕಾರದ ವರಮಾನ ಹೆಚ್ಚಬಹುದು. ವಾಣಿಜ್ಯೋದ್ಯಮಗಳಿಗೆ ಉತ್ತಮ ವಾತಾವರಣ ಸೃಷ್ಟಿಯಾಗಬಹುದು. ಇದು ಹೂಡಿಕೆದಾರರಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ಹೇಳುವುದಿದ್ದರೆ, ಜಿಎಸ್ಟಿ ಇಳಿಕೆಯ ತೀರ್ಮಾನವು ಅಲ್ಪಾವಧಿಯಲ್ಲಿ ಬೇಡಿಕೆ ಆಧಾರಿತ ಅವಕಾಶಗಳನ್ನು ಸೃಷ್ಟಿಸುವುದಲ್ಲದೆ, ಸುಸ್ಥಿರವಾದ ವರಮಾನಕ್ಕೆ ದಾರಿ ಮಾಡಿಕೊಡುತ್ತದೆ. ಈ ಮೊದಲು ಉಲ್ಲೇಖಿಸಿದ ಉದ್ಯಮ ವಲಯಗಳು ಮಧ್ಯಮಾವಧಿ ಹಾಗೂ ದೀರ್ಘಾವಧಿಗೆ ಹೂಡಿಕೆಗೆ ಆಕರ್ಷಕವಾಗಿ ಕಾಣಲಾರಂಭಿಸುತ್ತವೆ.

ಹೂಡಿಕೆ ದೃಷ್ಟಿಯಿಂದ ಎಲ್ಲಿದೆ ಅವಕಾಶ?:

ಜಿಎಸ್ಟಿ ಬದಲಾವಣೆಯ ತೀರ್ಮಾನಗಳಿಗೆ ದೇಶದ ಷೇರು ಮಾರುಕಟ್ಟೆಗಳು ಈಗಾಗಲೇ ಪ್ರತಿಕ್ರಿಯೆ ನೀಡಿವೆ. ಜಿಎಸ್ಟಿ ದರವನ್ನು ಶೇ 12ರಿಂದ ಶೇ 5ಕ್ಕೆ ಇಳಿಸುವ ತೀರ್ಮಾನಕ್ಕೆ ಎಫ್ಎಂಸಿಜಿ ಕಂಪನಿಗಳ ಷೇರುಗಳು ಧನಾತ್ಮಕವಾಗಿ ಸ್ಪಂದಿಸಿವೆ.

ಎಚ್ಯುಎಲ್ ಕೋಲ್ಗೇಟ್ ಬಿಕಾಜಿ ಇಮಾಮಿ ಡಾಬರ್ ಮತ್ತು ನೆಸ್ಲೆ ಕಂಪನಿಯ ಷೇರುಗಳಿಗೆ ಪ್ರಯೋಜನ ಆಗುವ ನಿರೀಕ್ಷೆ ಇದೆ. ಆದರೆ ಈ ಷೇರುಗಳು ಈಗಾಗಲೇ ದುಬಾರಿ ಮೌಲ್ಯ ಪಡೆದಿರುವ ಕಾರಣಕ್ಕೆ ಅವು ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆ ಜಾಸ್ತಿ ಇಲ್ಲ.

ಸಣ್ಣ ಕಾರುಗಳು ಹಾಗೂ 350 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳು ಜಿಎಸ್ಟಿ ಇಳಿಕೆಯ (ಶೇ 28ರಿಂದ ಶೇ 18ಕ್ಕೆ) ಗಣನೀಯ ಪ್ರಯೋಜನ ಪಡೆಯಲಿವೆ. ಮಾರುತಿ ಸುಜುಕಿ ಮಹೀಂದ್ರ ಆ್ಯಂಡ್ ಮಹೀಂದ್ರ ಹೀರೊ ಮೊಟರ್ಸ್ ಟಿವಿಎಸ್ ಐಷರ್ ಮತ್ತು ಬಜಾಜ್ ಕಂಪನಿಗಳಿಗೆ ಇದರಿಂದ ಪ್ರಯೋಜನ ಆಗುತ್ತದೆ.

ಟಿ.ವಿ. ಹವಾನಿಯಂತ್ರಕ ರೆಫ್ರಿಜರೇಟರ್ ವಾಷಿಂಗ್ ಮೆಷಿನ್ ಮೇಲಿನ ತೆರಿಗೆಯನ್ನು ಶೇ 28ರಿಂದ ಶೇ 18ಕ್ಕೆ ಇಳಿಸಲಾಗುತ್ತಿದೆ. ಕಂಪನಿಗಳಾದ ಬ್ಲ್ಯೂಸ್ಟಾರ್ ವೋಲ್ಟಾಸ್ ಆ್ಯಂಬರ್ ಬಜಾಜ್ ಎಲೆಕ್ಟ್ರಿಕಲ್ಸ್ ವಿ–ಗಾರ್ಡ್ ಹಾಕಿನ್ಸ್ ಮತ್ತು ವರ್ಲ್ಪೂಲ್ಗೆ ಇದರಿಂದ ಪ್ರಯೋಜನ ಆಗಲಿದೆ. ಸಿಮೆಂಟ್ ಕಂಪನಿಗಳು ಕೂಡ ಜಿಎಸ್ಟಿ ದರವನ್ನು ಶೇ 28ರಿಂದ ಶೇ 18ಕ್ಕೆ ತಗ್ಗಿಸುವ ತೀರ್ಮಾನದಿಂದಾಗಿ ಲಾಭ ಪಡೆದುಕೊಳ್ಳಲಿವೆ.

ಜಿಎಸ್ಟಿ ಸುಧಾರಣೆ 2025ರ ಬಜೆಟ್ನಲ್ಲಿ ನೀಡಿರುವ ವಿತ್ತೀಯ ಉತ್ತೇಜನ ಆರ್ಬಿಐ ನೀಡಿರುವ ಹಣಕಾಸಿನ ಉತ್ತೇಜನ ಒಟ್ಟಾಗಿ ದೇಶದ ಜಿಡಿಪಿ ಬೆಳವಣಿಗೆ ದರವನ್ನು ಹೆಚ್ಚಿಸಲಿವೆ. ಇದು 2026–27ನೇ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ಕಂಪನಿಗಳ ಲಾಭ ಗಳಿಕೆ ಪ್ರಮಾಣವನ್ನು ಹೆಚ್ಚು ಮಾಡಬಹುದು. ಆ ಮೂಲಕ ಷೇರುಪೇಟೆಯಲ್ಲಿ ಗಳಿಕೆಯ ಓಟಕ್ಕೆ ನೆರವು ನೀಡಬಹುದು. ಆದರೆ ಅಮೆರಿಕವು ವಿಧಿಸಿರುವ ಸುಂಕವು ಯಾವ ಬಗೆಯಲ್ಲಿ ಪರಿಣಾಮ ಬೀರುತ್ತದೆ ದೇಶದ ರಫ್ತು ಮತ್ತು ಜಿಡಿಪಿ ಬೆಳವಣಿಗೆಯ ಮೇಲೆ ಹೇಗೆ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಗಮನಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.