‘ಔದ್ಯಮಿಕ ಜಗತ್ತಿನಲ್ಲಿ ಯಾವತ್ತೂ ಹಿಂಬದಿಯ ದೃಶ್ಯ ಕಾಣಿಸುವ ಕನ್ನಡಿ ಸ್ಪಷ್ಟವಾಗಿರುತ್ತದೆ. ಆದರೆ, ಎದುರುಗಡೆಯ ದೃಶ್ಯ ನೋಡುವ ವಿಂಡ್ ಸ್ಕ್ರೀನ್ ಅಸ್ಪಷ್ಟವಾಗಿರುತ್ತದೆ’– ಇದು ಖ್ಯಾತ ಹೂಡಿಕೆ ತಜ್ಞ ವಾರನ್ ಬಫೆಟ್ ನುಡಿ. ಈ ಮಾತಿಗೆ ಅನ್ವರ್ಥವೆಂಬಂತೆ 2018ರ ಷೇರುಪೇಟೆ ವಹಿವಾಟು ನಡೆದಿದೆ.

2017ರಲ್ಲಿ ನಿರೀಕ್ಷೆಗಿಂತ ಶೇ 25 ರಷ್ಟು ಹೆಚ್ಚು ಬೆಳವಣಿಗೆ ಕಂಡಿದ್ದ ಪೇರುಪೇಟೆ ವಹಿವಾಟಿನಿಂದ ಉತ್ತೇಜಿತರಾಗಿದ್ದ ತಜ್ಞರು 2018 ರಲ್ಲಿ ಭಾರಿ ಅಂದಾಜು ಮಾಡಿದ್ದರು. ಆದರೆ, ವಾಸ್ತವದಲ್ಲಿ ಆ ಲೆಕ್ಕಾಚಾರ ಬುಡಮೇಲಾಗಿದೆ. 2018 ರಲ್ಲಿ ‘ನಿಫ್ಟಿ’ ಯಲ್ಲಿನ 50 ಕಂಪನಿಗಳ ಪೈಕಿ 18 ಮಾತ್ರ ನಿರೀಕ್ಷೆ ಮೀರಿ ಏರಿಕೆ ದಾಖಲಿಸಿವೆ.

2018ನೇ ವರ್ಷದಲ್ಲಿ ಟಿಸಿಎಸ್‌ನ ಷೇರಿನ ಬೆಲೆ ₹ 1,252 ವರೆಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಟಿಸಿಎಸ್ ಷೇರಿನ ಪ್ರಸ್ತುತ ಬೆಲೆ ₹ 1,968 ಆಸುಪಾಸಿನಲ್ಲಿದೆ. ಅಂದರೆ ನಿರೀಕ್ಷೆಗಿಂತ ಈ ಕಂಪನಿಯ ಷೇರು ಬರೋಬ್ಬರಿ ಶೇ 57.1 ರಷ್ಟು ಏರಿಕೆ ದಾಖಲಿಸಿದೆ.

ಟಾಟಾ ಮೋಟರ್ಸ್ಸ್ ಷೇರಿನ ಬೆಲೆ 2018 ರಲ್ಲಿ ₹ 495ಗಳ ವರೆಗೆ ಏರಿಕೆಯಾಗಬಹುದು ಎಂಬ ಅಂದಾಜಿತ್ತು. ಆದರೆ ಸದ್ಯ ಟಾಟಾ ಮೋಟರ್ಸ್ ಷೇರಿನ ಬೆಲೆ ₹ 174 (ಶೇ 65 ರಷ್ಟು ಹಿನ್ನಡೆ) ಆಸುಪಾಸಿನಲ್ಲಿದೆ.

ಮೈಂಡ್ ಟ್ರೀ ಷೇರುಗಳು ಪ್ರಸಕ್ತ ವರ್ಷದಲ್ಲಿ ₹ 482 ಗಳವರೆಗೆ ಏರಿಕೆ ದಾಖಲಿಸಲಿವೆ ಎಂಬ ಲೆಕ್ಕಾಚಾರವಿತ್ತು. ಆದರೆ ನಿರೀಕ್ಷೆ ಮೀರಿ, ಕಂಪನಿಯ ಷೇರಿನ ಬೆಲೆ ₹ 850(ಶೇ 76.1ರಷ್ಟು ಏರಿಕೆ) ಮತ್ತು ದಿವಾನ್ ಹೌಸಿಂಗ್ ಫೈನಾನ್ಸ್ ₹ 663 ಗಳ ವರೆಗೆ ಏರಿಕೆ ಕಾಣಲಿದೆ ಎಂಬ ಅಂದಾಜಿತ್ತು. ಆದರೆ ಸದ್ಯ ಇದರ ಬೆಲೆ₹ 227 (ಶೇ 65.7 ರಷ್ಟು ಹಿನ್ನಡೆ) ಆಸುಪಾಸಿನಲ್ಲಿದೆ.

ಷೇರುಪೇಟೆ ನಿರೀಕ್ಷಿತ ಪ್ರಗತಿ ಸಾಧಿಸದಿರಲು ಹಲವು ಕಾರಣ. ಅವುಗಳಲ್ಲಿ ಹಣಕಾಸು ವಲಯದಲ್ಲಿನ ಹಗರಣಗಳು, ನಗದು ಪೂರೈಕೆ ಕೊರತೆ, ರಾಜಕೀಯ ವಿದ್ಯಮಾನಗಳು, ಜಾಗತಿಕ ಮಾರುಕಟ್ಟೆಯ ವರ್ತನೆ, ಕಚ್ಚಾ ತೈಲ ಬೆಲೆ, ರೂಪಾಯಿ ಮೌಲ್ಯ ಅಸ್ಥಿರತೆ ಪ್ರಮುಖವಾಗಿವೆ.

2019 ರಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದವರೆಗೂ ಮಾರುಕಟ್ಟೆಯ ಚಲನೆಯನ್ನು ಅಂದಾಜು ಮಾಡುವುದು ಕಷ್ಟ. ಹೀಗಾಗಿ ಹೂಡಿಕೆದಾರರು ರಕ್ಷಣಾತ್ಮಕ ಆಟ ಮುಂದುವರಿಸಲಿದ್ದಾರೆ.

ಹಿನ್ನೋಟ, ಮುನ್ನೋಟ: ವಾರದ ಅವಧಿಯಲ್ಲಿ ಸೆನ್ಸೆಕ್ಸ್, ನಿಫ್ಟಿ ಕ್ರಮವಾಗಿ ಶೇ 0.61 ಮತ್ತು 0.48 ರಷ್ಟು ಕುಸಿತ ಕಂಡಿವೆ. ಬ್ಯಾಂಕ್‌ಗಳ ನಗದು ಕೊರತೆ ನೀಗಿಸಲು ಕೇಂದ್ರದ ಕ್ರಮಗಳು, ಕಚ್ಚಾತೈಲ ಬೆಲೆ ಇಳಿಕೆ ಪೂರಕ ಬೆಳವಣಿಗೆಗಳಾಗಿದ್ದರೂ, ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿ ದರ ಹೆಚ್ಚಳ ಸೇರಿ ಹಲವು ಬಾಹ್ಯ ಕಾರಣಗಳಿಂದ ಪೇಟೆ ನಕಾರಾತ್ಮಕ ಹಾದಿ ಹಿಡಿಯಿತು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ ) ಮಂಡಳಿ ಸಭೆಯ ತೀರ್ಮಾನಗಳು ಷೆರುಪೇಟೆಯ ಮುಂದಿನ ವಾರದ ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ.

ಕ್ರಿಸ್‌ಮಸ್ ಪ್ರಯುಕ್ತ ಡಿ. 25 ರಂದು ಮಾರುಕಟ್ಟೆಗಳಿಗೆ ರಜೆ ಇರಲಿದೆ.

ತೆರಿಗೆ ಉಳಿಸಲು ಈಗಲೇ ಯೋಚಿಸಿ

ಹೊಸ ವರ್ಷದ ಆರಂಭಕ್ಕೆ ದಿನಗಣನೆ ಶುರುವಾಗಿದೆ. 2018-19 ನೇ ಆರ್ಥಿಕ ವರ್ಷ ಪೂರ್ಣಗೊಳ್ಳಲು ಇನ್ನು ಮೂರು ತಿಂಗಳಷ್ಟೇ ಬಾಕಿ ಇದೆ. ಈಗಾಗಲೇ ಎಲ್ಲರ ತಲೆಯಲ್ಲೂ ಈ ವರ್ಷ ತೆರಿಗೆಗೆ ಒಳಪಡುವ ಆದಾಯ ಎಷ್ಟು. ನ್ಯಾಯಯುತವಾಗಿ ತೆರಿಗೆ ಉಳಿಸುವುದು ಹೇಗೆ.. ಎಂಬಿತ್ಯಾದಿ ಪ್ರಶ್ನೆಗಳು ಗಿರಕಿ ಹೊಡೆಯುತ್ತಿವೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಪೂರಕ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ.

ಎಲ್ಲೆಲ್ಲಿ ಹಣ ಹೂಡಿದರೆತೆರಿಗೆ ವಿನಾಯ್ತಿ ಲಭ್ಯ?

* ಟರ್ಮ್ ಲೈಫ್ ಇನ್ಶೂರೆನ್ಸ್

* ಲೈಫ್ ಇನ್ಶೂರೆನ್ಸ್

* ಹೆಲ್ತ್ ಇನ್ಶೂರೆನ್ಸ್

* ತೆರಿಗೆ ಉಳಿತಾಯದ ಮ್ಯೂಚುವಲ್ ಫಂಡ್

* ಪಿಪಿಎಫ್ ( ಪಬ್ಲಿಕ್ ಪ್ರಾವಿಡೆಂಟ್ ಫಂಡ್)

* ತೆರಿಗೆ ಉಳಿತಾಯದ ಸ್ಥಿರ ಠೇವಣಿ ಯೋಜನೆ

* ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ

* ಸುಕನ್ಯಾ ಸಮೃದ್ಧಿ ಯೋಜನೆ

* ರಾಷ್ಟ್ರೀಯ ಪಿಂಚಣಿ ಯೋಜನೆ

*ವರ್ಷಾಸನ ಯೋಜನೆ

ತೆರಿಗೆ ಕಡಿತದ ಪ್ರಯೋಜನ ನೀಡುವ ವಿವಿಧ ಸೆಕ್ಷನ್‌ಗಳು

* ಸೆಕ್ಷನ್ 80ಡಿಡಿಬಿ: ವೈದ್ಯಕೀಯ ಚಿಕಿತ್ಸೆ ವೆಚ್ಚ

* 80ಜಿಜಿ: ಮನೆ ಬಾಡಿಗೆಗೆ ತೆರಿಗೆ ವಿನಾಯ್ತಿ

* ಸೆಕ್ಷನ್ 80ಇ: ಶೈಕ್ಷಣಿಕ ಸಾಲದ ಬಡ್ಡಿಗೆ ವಿನಾಯ್ತಿ

* ಸೆಕ್ಷನ್ 80ಜಿ: ದಾನ ಕಾರ್ಯಗಳಿಗೆ ನೀಡುವ ದೇಣಿಗೆ

* 80ಜಿಜಿಸಿ:ರಾಜಕೀಯ ಪಕ್ಷಗಳಿಗೆ ನೀಡುವ ಫಂಡ್

(ಲೇಖಕ: ಸುವಿಷನ್ ಹೋಲ್ಡಿಂಗ್ಸ್‌ನ ಉಪಾಧ್ಯಕ್ಷ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.