ನವದೆಹಲಿ (ಪಿಟಿಐ): ದೇಶದ ಷೇರುಪೇಟೆಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಮುಂಬೈ ಷೇರುಪೇಟೆಯಲ್ಲಿ (ಬಿಎಸ್ಇ) ನೋಂದಾಯಿತ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು ಮಂಗಳವಾರ 5 ಟ್ರಿಲಿಯನ್ ಡಾಲರ್ಗೆ (₹414 ಲಕ್ಷ ಕೋಟಿ) ತಲುಪಿದೆ.

ಅಮೆರಿಕ, ಚೀನಾ, ಜಪಾನ್ ಮತ್ತು ಹಾಂಗ್ಕಾಂಗ್ ಷೇರುಪೇಟೆಯ ನಂತರ ಬಿಎಸ್ಇ ವಿಶ್ವದ ಐದನೇ ಅತಿದೊಡ್ಡ ಮಾರುಕಟ್ಟೆಯಾಗಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ನ ದೀಪಕ್ ಜಸಾನಿ ಹೇಳಿದ್ದಾರೆ.

2007ರ ಮೇ 28ರಂದು ಕಂಪನಿಗಳ ಮಾರುಕಟ್ಟೆ ಮೌಲ್ಯವು 1 ಟ್ರಿಲಿಯನ್ ಡಾಲರ್ಗೆ ಮುಟ್ಟಿತ್ತು. 2017ರ ಜುಲೈ 10ರಂದು 2 ಟ್ರಿಲಿಯನ್ ಡಾಲರ್ ಹಾಗೂ 2021ರ ಮೇ 24ರಂದು 3 ಟ್ರಿಲಿಯನ್ ಡಾಲರ್ಗೆ ತಲುಪಿತ್ತು. ಕಳೆದ ವರ್ಷದ ನವೆಂಬರ್ 29ರಂದು 4 ಟ್ರಿಲಿಯನ್ ಡಾಲರ್ಗೆ ತಲುಪಿತ್ತು.

ಮಾರುಕಟ್ಟೆ ಮೌಲ್ಯವು 1 ಟ್ರಿಲಿಯನ್ ಡಾಲರ್ನಿಂದ 2 ಟ್ರಿಲಿಯನ್ ಡಾಲರ್ಗೆ ಏರಿಕೆಯಾಗಲು 10 ವರ್ಷ ತೆಗೆದುಕೊಂಡಿದೆ. 2.5 ಟ್ರಿಲಿಯನ್ಗೆ ಹೆಚ್ಚಳವಾಗಲು 1,255 ದಿನಗಳನ್ನು ತೆಗೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.