ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ ಷೇರು ಶೇ 4.78 ಏರಿಕೆ; ಲವಲವಿಕೆ ಕಂಡ ನಿಫ್ಟಿ, ಸೆನ್ಸೆಕ್ಸ್‌ 

Last Updated 13 ಜನವರಿ 2020, 6:02 IST
ಅಕ್ಷರ ಗಾತ್ರ

ಬೆಂಗಳೂರು:ದೇಶದ ಬೃಹತ್‌ ಐಟಿ ಸಂಸ್ಥೆಗಳಲ್ಲಿ ಒಂದಾದ ಇನ್ಫೊಸಿಸ್‌ ಡಿಸೆಂಬರ್‌ ತ್ರೈಮಾಸಿಕದಲ್ಲಿ ಲಾಭ ಗಳಿಕೆ ಪ್ರಮಾಣ ಹೆಚ್ಚಳ ಘೋಷಿಸಿಕೊಂಡ ಪರಿಣಾಮ ಕಂಪನಿ ಷೇರು ಬೆಲೆ ಸೋಮವಾರ ಶೇ 4.78ರಷ್ಟು ಏರಿಕೆ ಕಂಡಿದೆ. ಇದರೊಂದಿಗೆ ದೇಶದ ಷೇರು ಪೇಟೆಗಳಲ್ಲೂ ಸಕಾರಾತ್ಮಕ ವಹಿವಾಟು ನಡೆದಿದ್ದು, ಸೂಚ್ಯಂಕಗಳು ಹೊಸ ಎತ್ತರ ತಲುಪಿವೆ.

ಸಿಇಒ ಸಲೀಲ್‌ ಪಾರೇಖ್‌ ಮತ್ತು ಸಿಎಫ್‌ಇ ನೀಲಂಜನ್‌ ರಾಯ್‌ ಅವರ ಮೇಲೆ ಅನಾಮಧೇಯ ಸಿಬ್ಬಂದಿ ಮಾಡಿದ್ದ ದೋಷಾರೋಪಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ಕೈಗೊಂಡಿದ್ದ ಇನ್ಫೊಸಿಸ್‌ ಶುಕ್ರವಾರ ದೋಷಮುಕ್ತ ಎಂದು ಘೋಷಿಸಿತ್ತು. ಇದರೊಂದಿಗೆ ಕಂಪನಿಡಿಸೆಂಬರ್‌ ತ್ರೈಮಾಸಿಕದಲ್ಲಿ ₹ 4,466 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿರುವ ಪರಿಣಾಮ ಹೂಡಿಕೆದಾರರು ಇನ್ಫೊಸಿಸ್‌ ಷೇರುಗಳ ಖರೀದಿಗೆ ಉತ್ಸಾಹ ತೋರಿದ್ದು,ಷೇರು ಬೆಲೆ ₹ 773.45 ತಲುಪಿದೆ. ವಹಿವಾಟು ಆರಂಭವಾಗಿ ಎರಡು ತಾಸಿನ ಒಳಗೆ ಶೇ 4.78ರಷ್ಟು ಏರಿಕೆ ದಾಖಲಿಸಿದೆ.

ರಾಷ್ಟ್ರೀಯ ಷೇರು ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಶೇ 0.55ರಷ್ಟು ಹೆಚ್ಚಳದೊಂದಿಗೆ 12,323.80 ಅಂಶ ತಲುಪಿದರೆ, ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶೇ 0.61ರಷ್ಟು ಏರಿಕೆಯೊಂದಿಗೆ41,853.85 ಅಂಶ ಮುಟ್ಟಿದೆ. ನಿಫ್ಟಿ ಐಟಿ ವಲಯ ಶೇ 1.23ರಷ್ಟು ಏರಿಕೆ ಕಂಡಿದೆ.

ಮಂಡನೆಯಾಗಲಿರುವ ಕೇಂದ್ರ ಬಜೆಟ್‌, ಕಂಪನಿಗಳ ತ್ರೈಮಾಸಿಕ ಗಳಿಕೆ ಹಾಗೂ ಅಮೆರಿಕ–ಇರಾನ್‌ ನಡುವೆ ನಿಯಂತ್ರಣದಲ್ಲಿರುವ ಪರಿಸ್ಥಿತಿ ಎಲ್ಲವೂ ದೇಶದ ಷೇರು ಪೇಟೆಗಳ ಮೇಲೆ ಪರಿಣಾಮ ಬೀರಿವೆ. ಇಂದು ಡಾಲರ್‌ ಎದುರು ರೂಪಾಯಿ ಮೌಲ್ಯ 12 ಪೈಸಿ ಹೆಚ್ಚಳದೊಂದಿಗೆ ₹ 70.82ರಲ್ಲಿ ವಹಿವಾಟು ನಡೆದಿದೆ. ಚಿಲ್ಲರೆ ಹಣದುಬ್ಬರ ಮಾಹಿತಿಯು ಸೋಮವಾರ ಹೊರಬರಲಿದ್ದು, ಹೂಡಿಕೆದಾರರ ಮೇಲೆ ಪರಿಣಾಮ ಬೀರಬಹುದಾಗಿದೆ.

ಕೋಲ್‌ ಇಂಡಿಯಾ ಲಿಮಿಟೆಡ್‌ ಷೇರು ಶೇ 2.14ರಷ್ಟು ಕಂಡರೆ, ಭಾರ್ತಿ ಏರ್‌ಟೆಲ್‌ ಶೇ 1.47 ಹಾಗೂಯೆಸ್‌ ಬ್ಯಾಂಕ್‌ ಲಿಮಿಟೆಡ್‌ ಷೇರು ಶೇ 6.15ರಷ್ಟು ಕುಸಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT