ಮುಂಬೈ: ಸತತ ಐದನೇ ದಿನವೂ ದೇಶದ ಷೇರುಪೇಟೆ ಇಳಿಮುಖವಾಗಿದ್ದು, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 536 ಅಂಶ ಕುಸಿದಿದೆ.

ಕೇಂದ್ರದ ವಾರ್ಷಿಕ ಬಜೆಟ್ ಮಂಡನೆಯಾಗುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಲಾಭ ಗಳಿಕೆ ಹಾದಿ ಹಿಡಿದು, ಷೇರು ಮಾರಾಟಕ್ಕೆ ಮುಂದಾಗಿದ್ದಾರೆ. ಸೆನ್ಸೆಕ್ಸ್ ಶೇ 1.13ರಷ್ಟು ಕಡಿಮೆಯಾಗಿ 46,874.36 ಅಂಶ ತಲುಪಿದೆ. ನಿಫ್ಟಿ 149.95 ಅಂಶಗಳಷ್ಟು ಕುಸಿದು 13,817.55 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯವಾಗಿದೆ.

ಸೆನ್ಸೆಕ್ಸ್ ಪಟ್ಟಿಯಲ್ಲಿ ಹಿಂದುಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್‌ಯುಎಲ್) ಷೇರು ಅತಿ ಹೆಚ್ಚು ಶೇ 4ರಷ್ಟು ಕುಸಿದಿದೆ. ಮಾರುತಿ, ಎಚ್‌ಡಿಎಫ್‌ಸಿ ಬ್ಯಾಂಕ್, ಪವರ್‌ಗ್ರಿಡ್, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಸಿಎಲ್ ಟೆಕ್ ಹಾಗೂ ಬಜಾಜ್ ಫಿನ್‌ಸರ್ವ್ ಷೇರು ಸಹ ನಷ್ಟಕ್ಕೆ ಒಳಗಾಗಿವೆ.

ಆ್ಯಕ್ಸಿಸ್ ಬ್ಯಾಂಕ್, ಎಸ್‌ಬಿಐ, ಒಎನ್‌ಜಿಸಿ ಹಾಗೂ ಐಸಿಐಸಿಐ ಬ್ಯಾಂಕ್ ಷೇರುಗಳು ಗಳಿಕೆ ದಾಖಲಿಸಿವೆ.

ಇತ್ತೀಚೆಗೆ ವಿದೇಶಿ ಹೂಡಿಕೆ ಹೊರಹರಿವು ಹೆಚ್ಚಿರುವುದು ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರಿದೆ. ಬುಧವಾರ ವಿದೇಶಿ ಹೂಡಿಕೆದಾರರು ₹1,688.22 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಶಾಂಘೈ, ಹಾಂಕಾಂಗ್, ಸೋಲ್ ಹಾಗೂ ಟೋಕಿಯೊ ಷೇರುಪೇಟೆಗಳಲ್ಲಿಯೂ ಇಳಿಮುಖ ವಹಿವಾಟು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.