ಮುಂಬೈ: ಸತತ ಏಳನೇ ದಿನವೂ ದೇಶೀಯ ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರಿದಿದೆ. ಹೂಡಿಕೆದಾರರು ಸೋಮವಾರ ವಹಿವಾಟು ಆರಂಭದಿಂದಲೇ ಖರೀದಿ ಉತ್ಸಾಹ ತೋರಿದ್ದು, ಷೇರುಪೇಟೆ ಸಂವೇದಿ ಸೂಚ್ಯಂಕ ಹೊಸ ದಾಖಲೆಯನ್ನು ತಲುಪಿದೆ.

ಮುಂಬೈ ಷೇರುಪೇಟೆ(ಬಿಎಸ್‌ಇ) ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ 40,458 ಅಂಶಗಳನ್ನು ದಾಟುವ ಮೂಲಕ ಹೂಡಿಕೆದಾರರಲ್ಲಿ ಭರವಸೆ ಹೆಚ್ಚಿಸಿದೆ. ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್‌ಇ) ಸಂವೇದಿ ಸೂಚ್ಯಂಕ ಸಹ ಶೇ 0.73ರಷ್ಟು ಏರಿಕೆ ಮೂಲಕ 12,000 ಅಂಶಗಳ ಸಮೀಪದಲ್ಲಿದೆ.

ಸಂಸ್ಥೆಯ ಆಡಳಿತ ವ್ಯವಹಾರಗಳ ವಿರುದ್ಧ ದೂರುಗಳು ದಾಖಲಾದ ಬೆನ್ನಲೇ ಇಳಿಮುಖವಾಗಿದ್ದ ಇನ್ಫೊಸಿಸ್ ಸಂಸ್ಥೆ ಷೇರುಗಳು ಇಂದು ದಿಢೀರ್ ಏರಿಕೆ ಕಂಡಿವೆ. ಪ್ರತಿ ಷೇ ₹681.80 ರಿಂದ ಆರಂಭವಾದ ಪ್ರತಿ ಷೇರಿನ ವಹಿವಾಟು ಬೆಲೆ ಸೂಚ್ಯಂಕದ ಓಟದೊಂದಿಗೆ ಬಹುಬೇಗ ₹700ರ ಗಡಿ ದಾಟಿತು. ಪ್ರಸ್ತುತ ₹720–₹724ರ ಬೆಲೆಯಲ್ಲಿ ವಹಿವಾಟು ನಡೆಯುತ್ತಿದೆ.

ಇದನ್ನೂ ಓದಿ:ಶೇ 16ರಷ್ಟು ಕುಸಿದ ಇನ್ಫೊಸಿಸ್ ಷೇರು ಬೆಲೆ; ಕಳೆದ 6 ವರ್ಷಗಳಲ್ಲೇ ಅತ್ಯಧಿಕ ನಷ್ಟ

ದೀರ್ಘಾವಧಿ ಬಂಡವಾಳ ಗಳಿಕೆ ಮೇಲಿನ ತೆರಿಗೆ, ಷೇರು ವಹಿವಾಟು ತೆರಿಗೆ ಹಾಗೂ ಲಾಭಾಂಶ ವಿತರಣೆ ಮೇಲಿನ ತೆರಿಗೆಗಳನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದಿಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಅಧಿಕ ಬಂಡವಾಳ ಹೂಡಿಕೆಗೆ ಸರ್ಕಾರ ಯೋಜನೆ ರೂಪಿಸುತ್ತಿರುವ ಅಂಶಗಳು ದೇಶಿ ಬಂಡವಾಳ ಹೂಡಿಕೆ ಚಟುವಟಿಕೆಯನ್ನು ಉತ್ತೇಜಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ಫೊಸಿಸ್ ಷೇರುಗಳು ಶೇ 4.73ರಷ್ಟು ಹಾಗೂ ವೇದಾಂತ ಲಿಮಿಟೆಡ್ ಷೇರುಗಳು ಶೇ 4.15ರಷ್ಟು ಗಳಿಕೆ ದಾಖಲಿಸಿವೆ. ಐದು ವಾರಗಳಲ್ಲಿಯೇ ಒಂದೇ ದಿನದ ವಹಿವಾಟಿನಲ್ಲಿ ಈ ಷೇರುಗಳು ಅತಿ ಹೆಚ್ಚು ಗಳಿಕೆ ಹೊಂದಿವೆ. ಬ್ಯಾಂಕಿಂಗ್ ವಲಯ ಹಾಗೂ ಐಟಿ ವಲಯದ ಷೇರುಗಳು ಏರಿಕೆ ಕಂಡಿವೆ.

ಇದನ್ನೂ ಓದಿ:ಇನ್ಫೊಸಿಸ್ ವಿರುದ್ಧ ತನಿಖೆಗೆ ‘ಸೆಬಿ’ ಚಾಲನೆ

ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಪ್ರತಿ ಷೇರು ₹895–₹890ರ ನಡುವೆ ವಹಿವಾಟು ನಡೆದಿದೆ.

ಇದನ್ನೂ ಓದಿ:ಅಧಿಕ ಲಾಭ ತೋರಿಸಲು ಇನ್ಫೊಸಿಸ್ ಸಿಇಒ ಅಡ್ಡಮಾರ್ಗ: ವಿಸಿಲ್ಬ್ಲೋವರ್ ಆರೋಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.