ಮುಂಬೈ: ಆರ್‌ಬಿಐ ಬಡ್ಡಿ ದರ ಹೆಚ್ಚಿಸಿದ ಬೆನ್ನಲ್ಲೇ ತೀವ್ರ ಕುಸಿತಕ್ಕೆ ಒಳಗಾಗಿದ್ದ ಷೇರುಪೇಟೆ ಸೂಚ್ಯಂಕಗಳು ಗುರುವಾರ ಚೇತರಿಕೆ ಕಂಡಿವೆ. ಇನ್ಫೊಸಿಸ್ ಷೇರು ಖರೀದಿಯಲ್ಲಿ ಹೆಚ್ಚಳ ಹಾಗೂ ಅಮೆರಿಕದ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿರುವ ಪರಿಣಾಮ ದೇಶದ ಷೇರುಪೇಟೆಯ ಮೇಲೆ ಆಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 753.17 ಅಂಶ ಹೆಚ್ಚಳವಾಗಿ 56,422.20 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 222.90 ಅಂಶ ಏರಿಕೆಯಾಗಿ 16,900.50 ಅಂಶಗಳಲ್ಲಿ ವಹಿವಾಟು ನಡೆದಿದೆ.

ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್, ಇನ್ಫೊಸಿಸ್, ಎಸ್‌ಬಿಐ, ಕೋಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಷೇರುಗಳು ಶೇಕಡ 2ರಿಂದ 3.5ರಷ್ಟು ಗಳಿಕೆ ದಾಖಲಿಸಿವೆ.

ಟೈಟಾನ್, ನೆಸ್ಟ್ಲೇ ಷೇರು ಬೆಲೆ ಇಳಿಮುಖವಾಗಿದೆ.

ಇದನ್ನೂ ಓದಿ–ರೆಪೊ ದರ ಏರಿಕೆ: ಉಳಿತಾಯ ಮಾಡುವವರಿಗೆ ಸಿಹಿ

ಅಮೆರಿಕನ್ ಡಾಲರ್ ಎದುರು ರೂಪಾಯಿಯ ಮೌಲ್ಯ 29 ಪೈಸೆ ಚೇತರಿಕೆಯಾಗಿ ಪ್ರತಿ ಡಾಲರ್‌ಗೆ ₹76.11ರಲ್ಲಿ ವಹಿವಾಟು ನಡೆದಿದೆ. ಬ್ರೆಂಟ್ ಕಚ್ಚಾ ತೈಲವು ಶೇಕಡ 0.48ರಷ್ಟು ಹೆಚ್ಚಳವಾಗಿದ್ದು, ಪ್ರತಿ ಬ್ಯಾರೆಲ್‌ಗೆ 110.67 ಡಾಲರ್ ಆಗಿದೆ.

ಬುಧವಾರ ಹೆಚ್ಚಿನ ಮಾರಾಟದ ಒತ್ತಡಕ್ಕೆ ಒಳಗಾದ ಸೆನ್ಸೆಕ್ಸ್ 1,307 ಅಂಶ ಕುಸಿತ ಕಂಡಿತು. ಎರಡು ತಿಂಗಳ ಕನಿಷ್ಠ ಮಟ್ಟವಾದ 55,669 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ನಿಫ್ಟಿ 391 ಅಂಶ ಕುಸಿತ ಕಂಡು 16,678 ಅಂಶಗಳಿಗೆ ತಲುಪಿತು.

ಇದನ್ನೂ ಓದಿ–ಆರ್‌ಬಿಐ: ರೆಪೊ ದರ ಏರಿಕೆ, ಸಾಲ ತುಟ್ಟಿ, ಬದಲಿಲ್ಲ ರಿವರ್ಸ್ ರೆಪೊ ದರ

ಮುಂಬೈ ಷೇರುಪೇಟೆಯಲ್ಲಿ ನಡೆದ ನಕಾರಾತ್ಮಕ ವಹಿವಾಟಿನಿಂದಾಗಿ ಷೇರುಪೇಟೆಯಲ್ಲಿ ನೋಂದಾಯಿತ ಹೂಡಿಕೆದಾರರ ಸಂಪತ್ತು ಮೌಲ್ಯದಲ್ಲಿ ₹ 6.27 ಲಕ್ಷ ಕೋಟಿಯಷ್ಟು ನಷ್ಟವಾಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹3,288.18 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.

ಇನ್ನು ನಿನ್ನೆಯಿಂದ ಸಣ್ಣ ಹೂಡಿಕೆದಾರರಿಗೆ ಎಲ್ಐಸಿ ಐಪಿಒ ಬಿಡ್ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಮೇ 9ರವರೆಗೆ ಬಿಡ್ ಸಲ್ಲಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.