ದೇಶದ ಷೇರು ಮಾರುಕಟ್ಟೆಗಳಲ್ಲಿ ಸರಿಸುಮಾರು ಆರು ತಿಂಗಳವರೆಗೆ ತೀವ್ರ ಪ್ರಮಾಣದ ಕುಸಿತ ಕಂಡುಬಂತು. ಇದಾದ ನಂತರದಲ್ಲಿ, ಈ ವರ್ಷದ ಏಪ್ರಿಲ್ನಿಂದ ಈಚೆಗೆ ಷೇರುಪೇಟೆಗಳು ಚೇತರಿಕೆ ಕಂಡಿವೆ.

ಆದರೆ ಅಮೆರಿಕದ ಜೊತೆಗಿನ ವ್ಯಾಪಾರದ ವಿಚಾರದಲ್ಲಿನ ಅನಿಶ್ಚಿತತೆ, ಅಮೆರಿಕದಲ್ಲಿ ಬಡ್ಡಿ ದರವನ್ನು ಇಳಿಸುವ ವಿಚಾರದಲ್ಲಿ ಅಲ್ಲಿನ ಕೇಂದ್ರೀಯ ಬ್ಯಾಂಕ್ ತ್ವರಿತಗತಿಯಲ್ಲಿ ತೀರ್ಮಾನ ತೆಗೆದುಕೊಳ್ಳದೆ ಇರುವುದು ಹಾಗೂ ಇತರ ಕೆಲವು ಅಂಶಗಳು ಸೂಚ್ಯಂಕಗಳ ಚಲನೆಯನ್ನು ಅನಿಶ್ಚಿತಗೊಳಿಸಿವೆ.

ಹೂಡಿಕೆದಾರರು ತಮ್ಮ ಹಣವನ್ನು ಲೋಹದಂತಹ ಸರಕುಗಳ ಮೇಲೆ ತೊಡಗಿಸುವುದರಿಂದ ಷೇರುಪೇಟೆಯ ಚಂಚಲ ಸ್ಥಿತಿಯನ್ನು ನಿಭಾಯಿಸುವುದು ಸುಲಭವಾಗುತ್ತದೆ. ಲೋಹದ ಮೇಲಿನ ಹೂಡಿಕೆಯ ಪ್ರಸ್ತಾಪ ಬಂದಾಗಲೆಲ್ಲ ಬಂಗಾರದ ನೆನಪು ಆಗುತ್ತದೆಯಾದರೂ, ಈಗ ಬೆಳ್ಳಿಯ ಮೇಲೆ ಹೂಡಿಕೆ ಮಾಡುವ ಬಗ್ಗೆಯೂ ಪರಿಶೀಲಿಸಬೇಕಿದೆ. ಹೂಡಿಕೆದಾರರು ಬೆಳ್ಳಿಯನ್ನು ತಮ್ಮ ಹೂಡಿಕೆಗಳ ಪಟ್ಟಿಗೆ ಸೇರಿಸಿಕೊಳ್ಳುವುದಕ್ಕೆ ಇದು ಸರಿಯಾದ ಕಾಲ. ಹೀಗೆ ಹೇಳುವುದಕ್ಕೆ ಹಲವು ಕಾರಣಗಳಿವೆ.

ಬೆಳ್ಳಿಯು ಹೂಡಿಕೆದಾರರಿಗೆ ಹಣದುಬ್ಬರದ ಪ್ರಭಾವದಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೆ, ಬೆಳ್ಳಿಗೆ ಇರುವ ಬೇಡಿಕೆ ಹಾಗೂ ಬೆಳ್ಳಿಯ ಪೂರೈಕೆಯಲ್ಲಿನ ವ್ಯತ್ಯಾಸವು ಯಾವತ್ತಿನಿಂದಲೂ ಉಳಿದುಬಂದಿರುವ ಕಾರಣಕ್ಕೆ ಬೆಲೆಯಲ್ಲಿ ಸ್ಥಿರತೆ ಇರುತ್ತದೆ. ಸಾಂಪ್ರದಾಯಿಕ ಹಾಗೂ ಹೊಸದಾಗಿ ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವ ಹಲವು ಕೈಗಾರಿಕೆಗಳಿಗೆ ಬೆಳ್ಳಿಯ ಅಗತ್ಯ ಇರುವ ಕಾರಣಕ್ಕೆ, ಈ ಲೋಹಕ್ಕೆ ಯಾವಾಗಲೂ ಬೇಡಿಕೆಯು ಇರುವ ಸಾಧ್ಯತೆ ಹೆಚ್ಚು. ಈಚಿನ ವರ್ಷಗಳಲ್ಲಿ ಬೆಳ್ಳಿಯು ಒಳ್ಳೆಯ ಪ್ರಮಾಣದಲ್ಲಿ ಲಾಭ ತಂದುಕೊಟ್ಟಿದೆ. ಕೆಲವು ಸಾಲಪತ್ರಗಳಿಗಿಂತ ಹೆಚ್ಚಿನ ಲಾಭವನ್ನು ಬೆಳ್ಳಿ ನೀಡಿದೆ.

ಚಿನ್ನ–ಬೆಳ್ಳಿ ಅನುಪಾತದ ದೃಷ್ಟಿಯಿಂದ ಗಮನಿಸಿದಾಗ ಬೆಳ್ಳಿಯ ಬೆಲೆಯು ಅಗ್ಗವಾಗಿರುವಂತೆ ಕಾಣುತ್ತದೆ. ಈ ವರ್ಷದಲ್ಲಿ ಮುಂದಿನ ದಿನಗಳಲ್ಲಿ ಎರಡು ಬಾರಿ ಬಡ್ಡಿ ದರ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಅಮೆರಿಕದ ಫೆಡರಲ್ ರಿಸರ್ವ್ ಸೂಚ್ಯವಾಗಿ ಹೇಳಿರುವುದು ಕೂಡ ಬೆಳ್ಳಿಯ ಪಾಲಿಗೆ ಧನಾತ್ಮಕವಾದ ಅಂಶ. ಹೂಡಿಕೆದಾರರು ಬೆಳ್ಳಿಯ ಮೇಲೆ ಹಣ ತೊಡಗಿಸಲು ಇಟಿಎಫ್ಗಳನ್ನು ಆಶ್ರಯಿಸುವುದು ಸೂಕ್ತ.

ಬೆಳ್ಳಿಯ ಈಗ ಆಕರ್ಷಕವಾಗಿ ಕಾಣುವುದಕ್ಕೆ ಹಲವು ಅಂಶಗಳು ಕಾರಣವಾಗಿವೆ.

ಬೇಡಿಕೆ–ಪೂರೈಕೆ ಅಂತರ: ಬೆಳ್ಳಿಯನ್ನು ಹೆಚ್ಚಾಗಿ ಉತ್ಪಾದಿಸುವುದು ಗಣಿಗಾರಿಕೆ ಮೂಲಕ. ಇದರ ಉತ್ಪಾದನೆಯ ಇನ್ನೊಂದು ಮೂಲ ಇರುವುದು ಪುನರ್ಬಳಕೆಯಲ್ಲಿ. ಆದರೆ 2021ರ ನಂತರದಲ್ಲಿ ಜಾಗತಿಕ ಮಟ್ಟದಲ್ಲಿ ಬೆಳ್ಳಿಯ ಉತ್ಪಾದನೆಯು ಅದಕ್ಕೆ ಇರುವ ಬೇಡಿಕೆಗೆ ಅನುಗುಣವಾಗಿ ಇಲ್ಲ. ಉತ್ಪಾದನೆಯು ಬೇಡಿಕೆಗಿಂತ ಕಡಿಮೆ ಇದೆ. 2025ರಲ್ಲಿ ಸಿಲ್ವರ್ ಇನ್ಸ್ಟಿಟ್ಯೂಟ್ ಬಿಡುಗಡೆ ಮಾಡಿರುವ ವರದಿಯೊಂದರ ಪ್ರಕಾರ 2024ರಲ್ಲಿ ಬೆಳ್ಳಿಯ ಬೇಡಿಕೆಯು 116.4 ಕೋಟಿ ಔನ್ಸ್ನಷ್ಟು ಇತ್ತು. ಆದರೆ ಪೂರೈಕೆ ಇದ್ದಿದ್ದು 101.51 ಕೋಟಿ ಔನ್ಸ್ ಮಾತ್ರ.

2025ರಲ್ಲಿ ಬೆಳ್ಳಿಗೆ ಬೇಡಿಕೆಯು 114.8 ಕೋಟಿ ಔನ್ಸ್ನಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಆದರೆ ಪೂರೈಕೆಯು 103.06 ಕೋಟಿ ಔನ್ಸ್ ಮಾತ್ರವೇ ಇರಲಿದೆ ಎನ್ನಲಾಗಿದೆ. ಪೂರೈಕೆಯು ಬೇಡಿಕೆಗಿಂತ ಕಡಿಮೆ ಇರುವ ಕಾರಣಕ್ಕೆ ಸದ್ಯದಲ್ಲಿ ಹಾಗೂ ಭವಿಷ್ಯದಲ್ಲಿ ಬೆಳ್ಳಿಯ ಬೆಲೆಯು ಹೆಚ್ಚಳ ಕಾಣುತ್ತಲೇ ಇರುವ ಸಾಧ್ಯತೆ ಹೆಚ್ಚಿದೆ.

ಆಕರ್ಷಕ ಬೆಲೆ: ಒಂದು ಗ್ರಾಂ ಚಿನ್ನವನ್ನು ಖರೀದಿಸಲು ಎಷ್ಟು ಗ್ರಾಂ ಬೆಳ್ಳಿಯ ಅಗತ್ಯ ಇದೆ ಎಂಬುದನ್ನು ಚಿನ್ನ ಮತ್ತು ಬೆಳ್ಳಿ ಅನುಪಾತವು ಹೇಳುತ್ತದೆ. ಈ ಅನುಪಾತ ಹೆಚ್ಚಿದ್ದಂತೆಲ್ಲ, ಬೆಳ್ಳಿಯ ಬೆಲೆ ಕಡಿಮೆ ಎಂದು ಅರ್ಥ. ಅಂದರೆ ಅದಕ್ಕೆ ಇರಬೇಕಾದ ಬೆಲೆಗಿಂತ ಅದು ಕಡಿಮೆಗೆ ಸಿಗುತ್ತಿದೆ ಎಂದು ಅರ್ಥ. ಈ ಅನುಪಾತದ ಆಧಾರದಲ್ಲಿ ಹೇಳುವುದಾದರೆ ಬೆಳ್ಳಿಯು ಈಗ ಹೆಚ್ಚು ಆಕರ್ಷಕವಾದ ಬೆಲೆಗೆ ಸಿಗುತ್ತಿದೆ.

ಈಕ್ವಿಟಿ, ಹಣದುಬ್ಬರ: 2010ರಿಂದ 2024ರವರೆಗಿನ ದತ್ತಾಂಶಗಳ ಪ್ರಕಾರ, ಬೆಳ್ಳಿಯು ಈ ಅವಧಿಯ ಏಳು ವರ್ಷಗಳಲ್ಲಿ ನಿಫ್ಟಿ–50 ಟಿಆರ್ಐ ಸೂಚ್ಯಂಕಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಾಭ ತಂದುಕೊಟ್ಟಿದೆ. ಈಕ್ವಿಟಿಗೂ ಬೆಳ್ಳಿಗೂ ನೇರ ಸಂಬಂಧ ಇಲ್ಲವಾಗಿರುವ ಕಾರಣಕ್ಕೆ, ಜಾಗತಿಕ ಅನಿಶ್ಚಿತತೆಗಳ ಸಂದರ್ಭಗಳಲ್ಲಿ ಬೆಳ್ಳಿಯು ಈಕ್ವಿಟಿಗಿಂತ ಹೆಚ್ಚು ಲಾಭ ತಂದುಕೊಟ್ಟಿದೆ. ಈ ಮೂಲಕ ಅದು ಹೂಡಿಕೆದಾರರ ಪೋರ್ಟ್ಫೋಲಿಯೊ ಹೆಚ್ಚು ಆರೋಗ್ಯಕರವಾಗಿರುವಂತೆ ನೋಡಿಕೊಂಡಿದೆ.

ಅಲ್ಲದೆ, ಈ ಲೋಹವು ಕಳೆದ ಆರು ವರ್ಷಗಳ ಪೈಕಿ ನಾಲ್ಕು ವರ್ಷಗಳಲ್ಲಿ ಹಣದುಬ್ಬರದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗಳಿಕೆ ತಂದುಕೊಟ್ಟಿದೆ.

ಕೈಗಾರಿಕಾ ಬಳಕೆ: ಜಗತ್ತಿನ ಎಲ್ಲೆಡೆ ಬಳಕೆಯಲ್ಲಿ ಇರುವ ವಿದ್ಯುತ್ ಚಾಲಿತ ವಾಹನಗಳು, ಪರಿಸರ ಪೂರಕವಾದ ಇಂಧನ ಉತ್ಪಾದನೆ, 5ಜಿ ದೂರಸಂಪರ್ಕ ಜಾಲ, ವೈದ್ಯಕೀಯ ವಲಯದ ಕೆಲವು ವಿಭಾಗಗಳು, ವಿದ್ಯುತ್ ಉತ್ಪಾದನೆಯ ವಲಯವು ಬೆಳ್ಳಿಯ ಪ್ರಮುಖ ಬಳಕೆದಾರರಾಗಿ ಬೆಳೆದಿವೆ. ಅಲ್ಲದೆ, ಸಾಂಪ್ರದಾಯಿಕ ಉದ್ಯಮಗಳಾದ ಕನ್ನಡಿ ತಯಾರಿಕೆ, ಸೌರಫಲಕಗಳ ತಯಾರಿಕೆ, ವಾಹನ ತಯಾರಿಕೆ, ಕೈಗಾರಿಕೆಗಳಲ್ಲಿ ಬಳಸುವ ಬ್ಯಾಟರಿಗಳು, ತಯಾರಿಕೆ ಹಾಗೂ ಜವಳಿ ಉದ್ಯಮದಲ್ಲಿ ಕೂಡ ಈ ಲೋಹದ ಬಳಕೆ ಇದೆ.

ಆರ್ಥಿಕ ಅನಿಶ್ಚಿತತೆ, ಬಡ್ಡಿ ದರ ಇಳಿಕೆ: ಅಮೆರಿಕದ ಫೆಡರಲ್ ರಿಸರ್ವ್ ಕಳೆದ ವರ್ಷದಲ್ಲಿ ಬಡ್ಡಿ ದರ ಇಳಿಸಲು ಆರಂಭಿಸಿದೆ. ಆದರೆ ಅಮೆರಿಕದ ವಾಣಿಜ್ಯ ಸುಂಕ ಕ್ರಮಗಳು ಅಭಿವೃದ್ಧಿ ಹೊಂದಿರುವ ಹಲವು ದೇಶಗಳಿಗೆ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಪ್ರಮುಖ ಸವಾಲಾಗಿ ಎದುರಾಗಿವೆ. ಹೀಗಾಗಿ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಇಳಿಸುವ ಪ್ರಕ್ರಿಯೆಯನ್ನು ನಿಧಾನವಾಗಿಸಿದೆ. ವರ್ಷದ ಅವಧಿಯಲ್ಲಿ ಇನ್ನೂ ಎರಡು ಬಾರಿ ಅದು ಬಡ್ಡಿ ದರವನ್ನು ಇಳಿಸುವ ಸಾಧ್ಯತೆ ಇದೆ.

ಆದರೆ ಜಾಗತಿಕ ಮಟ್ಟದಲ್ಲಿನ ಕೆಲವು ಅನಿಶ್ಚಿತತೆಗಳು ಆರ್ಥಿಕವಾಗಿಯೂ ಒಂದಿಷ್ಟು ಅನಿಶ್ಚಿತತೆಗಳನ್ನು ಸೃಷ್ಟಿಸುತ್ತವೆ. ಜಾಗತಿಕ ಮಾರುಕಟ್ಟೆಯಲ್ಲಿನ ಈ ಚಂಚಲ ಸ್ಥಿತಿಯ ಸಂದರ್ಭದಲ್ಲಿ ಚಿನ್ನದಂತೆಯೇ ಬೆಳ್ಳಿಯೂ ಒಂದಿಷ್ಟು ಬೆಲೆ ಹೆಚ್ಚಿಸಿಕೊಳ್ಳಬಹುದು.

ಭಾರತವು ಬಡ್ಡಿ ದರವನ್ನು ಇನ್ನಷ್ಟು ತಗ್ಗಿಸುವ ನಿರೀಕ್ಷೆ ಇದೆ, ಅಮೆರಿಕ ಕೂಡ ಮುಂದೆ ಬಡ್ಡಿ ದರವನ್ನು ತಗ್ಗಿಸಲಿದೆ ಎಂಬ ಆಶಾಭಾವನೆ ಇದೆ. ಹೀಗಾಗಿ ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ಗಳು, ವಿದ್ಯುತ್ ಚಾಲಿತ ವಾಹನಗಳು ಸೇರಿದಂತೆ ಹಲವು ಕೈಗಾರಿಕಾ ವಲಯಗಳ ಬೆಳವಣಿಗೆ ಹೆಚ್ಚುವ ಅಂದಾಜು ಇದೆ. ಈ ವಲಯಗಳು ಬೆಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತವೆ.

ಹೂಡಿಕೆಗೆ ಇಟಿಎಫ್ ಮಾರ್ಗ: ಸಣ್ಣ ಹೂಡಿಕೆದಾರರ ಪಾಲಿಗೆ ಇಟಿಎಫ್ ಮೂಲಕ ಬೆಳ್ಳಿಯಲ್ಲಿ ಹಣ ತೊಡಗಿಸುವುದು ಸರಿಯಾದ ಆಯ್ಕೆಯಾಗುತ್ತದೆ. ಇಟಿಎಫ್ ಯೂನಿಟ್ಗಳು ಷೇರುಪೇಟೆಯಲ್ಲಿ ಖರೀದಿಗೆ ಮತ್ತು ಮಾರಾಟಕ್ಕೆ ಲಭ್ಯವಿರುತ್ತವೆ. ಅಲ್ಲದೆ ಇವುಗಳನ್ನು ಮಾರಾಟ ಮಾಡಿ ನಗದೀಕರಿಸಿಕೊಳ್ಳುವುದು ಬಹಳ ಸುಲಭ. ₹500 ಬಳಸಿಯೂ ಬೆಳ್ಳಿಯಲ್ಲಿ ಹೂಡಿಕೆ ಮಾಡಬಹುದು. ಬೆಳ್ಳಿಯನ್ನು ಭೌತಿಕ ರೂಪದಲ್ಲಿ ಕೊಂಡರೆ ಅದನ್ನು ಇರಿಸಿಕೊಳ್ಳಲು ಒಂದಿಷ್ಟು ಜಾಗ ಬೇಕಾಗುತ್ತದೆ, ಇಟಿಎಫ್ ಮೂಲಕ ಹೂಡಿಕೆ ಮಾಡಿದರೆ ಆ ಚಿಂತೆಯೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.