ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾರ್ಥ ನಾಪತ್ತೆ: ಕಾಫಿ ಡೇ ಷೇರು ಶೇ 20ರಷ್ಟು ಕುಸಿತ

Last Updated 30 ಜುಲೈ 2019, 9:46 IST
ಅಕ್ಷರ ಗಾತ್ರ

ಮುಂಬೈ: ಉದ್ಯಮಿ ಸಿದ್ದಾರ್ಥ ಅವರು ನಿಗೂಢವಾಗಿ ಕಾಣೆಯಾಗಿರುವ ಹಿನ್ನೆಲೆಯಲ್ಲಿ ಅವರ ಮಾಲೀಕತ್ವದ ಕಾಫಿ ಡೇ ಮತ್ತು ಎಸ್‌ಐಸಿಎಎಲ್‌ ಲಾಜಿಸ್ಟಿಕ್‌ ಸಂಸ್ಥೆಗಳ ಷೇರುಗಳು ಇಂದು ಮಾರುಕಟ್ಟೆಯಲ್ಲಿ ಶೇ20ರಷ್ಟು ಕುಸಿದಿವೆ.

ಮುಂಬೈ ಷೇರುಪೇಟೆಯ ಮಂಗಳವಾರದ ವಹಿವಾಟಿನಲ್ಲಿಕಾಫಿ ಡೇ ಕಂಪನಿಯಷೇರು ಶೇ 20ರಷ್ಟು ಕುಸಿದಿದೆ. ₹38.35 ಕುಸಿಯುವುದರೊಂದಿಗೆ₹153.40 ಮೊತ್ತದಲ್ಲಿ ವಹಿವಾಟು ನಡೆಯುತ್ತಿದೆ. ಎಸ್ಐಸಿಎಎಲ್‌ನ ಷೇರು ದರ ಇಂದು ₹72.35 ಇದೆ. ಒಂದೇ ದಿನ ₹18.05 (ಶೇ 19.97) ಕುಸಿದಿದೆ.ಕಾಫಿ ಡೇಯ ಸಂಸ್ಥಾಪಕರೂ ಆಗಿರುವ ಸಿದ್ದಾರ್ಥ ಕಾಫಿ ಡೇ ಕಂಪನಿಯಲ್ಲಿ ಶೇ32.75ರಷ್ಟು ಷೇರು ಹೊಂದಿದ್ದಾರೆ.

ಕಾಫಿ ಡೇ ಸಂಸ್ಥೆ ಮಾಲೀಕ ಸಿದ್ದಾರ್ಥ ಅವರು ಕಾಣೆಯಾಗಿರುವ ಕುರಿತು ಸಂಸ್ಥೆಯ ಆಡಳಿತ ಮಂಡಳಿ ರಾಷ್ಟ್ರೀಯ ಷೇರು ವಿನಿಮಯ ಸಂಸ್ಥೆಗೆ ತಿಳಿಸಿದೆ. ಸಿದ್ದಾರ್ಥ ಪತ್ತೆಗೆ ಸರ್ಕಾರದ ನೆರವು ಕೋರಿರುವುದಾಗಿ ಮಾಹಿತಿ ನೀಡಿದೆ. ಅಲ್ಲದೆ, ‘ಕಂಪನಿಯು ವೃತ್ತಿಪರತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಸಮರ್ಥವಾಗಿ ನಡೆಯುತ್ತಿದೆ. ಸಂಸ್ಥೆಯು ಎಂದಿನಂತೆ ತನ್ನ ವ್ಯವಹಾರ ಮುಂದುವರಿಸಲಿದೆ,’ ಎಂದು ಹೇಳಿಕೊಂಡಿದೆ.

ಸಿದ್ದಾರ್ಥ​ ಸಾಲದ ವಿವರ

ಒಟ್ಟು ಸಾಲ 5200 ಕೋಟಿ. ಮಾರ್ಚ್‌ 2019ರ ವೇಳೆಗೆ ಬ್ಯಾಂಕ್‌ಗಳಿಂದ ತೆಗೆದುಕೊಂಡಿದ್ದ ಸಾಲ 3900 ಕೋಟಿ. 2018ರ ಮಾರ್ಚ್‌ನಲ್ಲಿ ಇದ್ದ ಸಾಲ 810 ಕೋಟಿ. ಸಾಲದ ಪ್ರಮಾಣ ಒಂದು ವರ್ಷದಲ್ಲಿ ಸುಮಾರು 5 ಪಟ್ಟು ಹೆಚ್ಚಾಗಿತ್ತು.

ಕಾಫಿ ಡೇ ವಹಿವಾಟು

2019ರ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 1, 2018ರಿಂದ ಮಾರ್ಚ್ 31, 2019ರವರೆಗೆ) ಕಂಪನಿಯ ವಹಿವಾಟಿನ ಒಟ್ಟು ಮೊತ್ತ ₹4,466.70 ಕೋಟಿ. ಲಾಭ 127.51 ಕೋಟಿ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT