ಮ್ಯೂಚುವಲ್‌ ಫಂಡ್‌ ಹೂಡಿಕೆ ಹೆಚ್ಚಳ

7
ಚಿಲ್ಲರೆ ಹೂಡಿಕೆದಾರರ ಸಕ್ರಿಯ ಭಾಗವಹಿಸುವಿಕೆ

ಮ್ಯೂಚುವಲ್‌ ಫಂಡ್‌ ಹೂಡಿಕೆ ಹೆಚ್ಚಳ

Published:
Updated:

ನವದೆಹಲಿ: ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚುತ್ತಿದೆ. ಇದರಿಂದ ಉದ್ಯಮವು ಉತ್ತಮ ಬೆಳವಣಿಗೆ ಸಾಧಿಸುತ್ತಿದೆ ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಮ್ಯೂಚುವಲ್‌ ಫಂಡ್‌ ಉದ್ಯಮದಲ್ಲಿ ₹ 1.33 ಲಕ್ಷ ಕೋಟಿ ಹೂಡಿಕೆಯಾಗಿದೆ. 2017–18ರ ಇದೇ ಅವಧಿಯಲ್ಲಿ ₹ 93,400 ಕೋಟಿ ಹೂಡಿಕೆಯಾಗಿತ್ತು. ಇದಕ್ಕೆ ಹೋಲಿಸಿದರೆ ಹೂಡಿಕೆ ಪ್ರಮಾಣದಲ್ಲಿ ಶೇ 43 ರಷ್ಟು ಎರಿಕೆಯಾಗಿದೆ.

ಈ ಅವಧಿಯಲ್ಲಿ ಉದ್ಯಮದ ನಿರ್ವಹಣೆಯಲ್ಲಿ ಇರುವ ಸಂಪತ್ತು ಮೌಲ್ಯ ಶೇ 20 ರಷ್ಟು ಹೆಚ್ಚಾಗಿದೆ.

ಸಣ್ಣ ನಗರಗಳಲ್ಲಿ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ. ಇದರಿಂದ ಹೂಡಿಕೆ ಪ್ರಮಾಣದಲ್ಲಿಯೂ ಏರಿಕೆ ಕಂಡುಬರುತ್ತಿದೆ ಎಂದು ಹೇಳಿದೆ.

‘ಉದ್ಯಮ ಕೈಗೊಳ್ಳುತ್ತಿರುವ ಜಾಗೃತಿ ಕಾರ್ಯಕ್ರಮಗಳಿಂದಾಗಿ ಮ್ಯೂಚುವಲ್ ಫಂಡ್‌ ಪ್ರಮುಖ ಹೂಡಿಕೆ ಆಯ್ಕೆಯಾಗಿದೆ’ ಎಂದು ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್‌.ಎಸ್‌. ವೆಂಕಟೇಶ್‌ ಹೇಳಿದ್ದಾರೆ.

‘ಇತ್ತೀಚಿನ ಹೂಡಿಕೆ ಏರಿಳಿತದ ಹೊರತಾಗಿಯೂ ಉತ್ತಮ ಬಂಡವಾಳ ಹರಿದುಬರುವ ವಿಶ್ವಾಸವಿದೆ. ಸಣ್ಣ ನಗರಗಳು ಮತ್ತು ಚಿಲ್ಲರೆ ಹೂಡಿಕೆದಾರರಿಂದ ವ್ಯವಸ್ಥಿತ ಹೂಡಿಕೆ ಯೋಜನೆಯ (ಸಿಪ್‌) ಮೂಲಕ ಹೆಚ್ಚು ಬಂಡವಾಳ ಹರಿದುಬರಲಿದೆ’ ಎಂದೂ ಹೇಳಿದ್ದಾರೆ.

ಷೇರು ಸಂಬಂಧಿತ ಮ್ಯೂಚುವಲ್‌ ಫಂಡ್‌: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಷೇರು ಸಂಬಂಧಿತ ಮ್ಯೂಚುವಲ್ ಫಂಡ್‌ಗಳಲ್ಲಿ ₹ 33 ಸಾವಿರ ಕೋಟಿಗೆ ಹೂಡಿಕೆಯಾಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 28,332 ಕೋಟಿ ಹೂಡಿಕೆಯಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಹೂಡಿಕೆ ಪ್ರಮಾಣ ಶೇ 15 ರಷ್ಟು ಹೆಚ್ಚಾಗಿದೆ ಎಂದು ಒಕ್ಕೂಟ  ಮಾಹಿತಿ ನೀಡಿದೆ.

ಉದ್ಯಮದ ವಿವರ

* 42 ದೇಶಲ್ಲಿರುವ ಮ್ಯೂಚುವಲ್ ಫಂಡ್ ಸಂಸ್ಥೆಗಳ ಸಂಖ್ಯೆ

* ₹ 23.40 ಲಕ್ಷ ಕೋಟಿ 2018–19ರ ಮೊದಲ ತ್ರೈಮಾಸಿಕದಲ್ಲಿ ಉದ್ಯಮದ ನಿರ್ವಹಣೆಯಲ್ಲಿರುವ ಸಂಪತ್ತು ಮೌಲ್ಯ

* ₹ 20.40 ಲಕ್ಷ ಕೋಟಿ 2017–18ರ ಮೊದಲ ತ್ರೈಮಾಸಿಕದಲ್ಲಿ ಉದ್ಯಮದ ನಿರ್ವಹಣೆಯಲ್ಲಿದ್ದ ಸಂಪತ್ತು ಮೌಲ್ಯ

 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !