ಭಾನುವಾರ, ಏಪ್ರಿಲ್ 5, 2020
19 °C

ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ಸೆನ್ಸೆಕ್ಸ್; ನಿಫ್ಟಿ 8,500ಕ್ಕಿಂತ ಕಡಿಮೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಷೇರುಪೇಟೆಯಲ್ಲಿ ಮಾರಾಟದ ಒತ್ತಡ

ಬೆಂಗಳೂರು: ದೇಶದ ಷೇರುಪೇಟೆಗಳು ಕೊರೊನಾ ವೈರಸ್‌ ಸೋಂಕಿನ ಆತಂಕದಲ್ಲಿ ಮಾರಾಟದ ಒತ್ತಡಕ್ಕೆ ಸಿಲುಕಿ 3 ವರ್ಷಗಳ ಹಿಂದಿನ ಮಟ್ಟ ತಲುಪಿವೆ. ಬುಧವಾರ ಆರಂಭದಲ್ಲಿ ಸಕಾರಾತ್ಮ ವಹಿವಾಟಿನ ಮೂಲಕ ಚೇತರಿಕೆ ಕಂಡಿದ್ದ ಸೆನ್ಸೆಕ್ಸ್‌, ದಿನದ ವಹಿವಾಟು ಅಂತ್ಯಕ್ಕೆ 29,000 ಅಂಶಗಳಿಗಿಂತ ಕುಸಿಯಿತು.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ, 498.25 ಅಂಶ (ಶೇ 5.56) ಇಳಿಕೆಯಾಗಿ 8,468.80 ಅಂಶ ತಲುಪಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 2,488.72 ಗಳಿಕೆ–ಇಳಿಕೆಯಲ್ಲಿ ವಹಿವಾಟು ಅಂತ್ಯಕ್ಕೆ 1,709.58 ಅಂಶ (ಶೇ 5.59) ಕುಸಿದು, 28,869.51 ಅಂಶ ಮುಟ್ಟಿದೆ.

2017ರ ಜನವರಿಯಿಂದ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್‌ 29,000 ಅಂಶಗಳಿಗಿಂತ ಕಡಿಮೆಯಾಗಿದೆ. ಐಟಿಸಿ, ಒಎನ್‌ಜಿಸಿ ಹೊರತು ಪಡಿಸಿ ಮುಂಬೈ ಷೇರುಪೇಟೆ ಎಲ್ಲ ಷೇರುಗಳು ನಷ್ಟ ಅನುಭವಿಸಿದವು. 

ಇಂಡಸ್‌ಇಂಡ್‌ ಬ್ಯಾಂಕ್‌ ಶೇ 23.90ರಷ್ಟು ಕಡಿಮೆಯಾಗಿ ಅತ್ಯಧಿಕ ಕುಸಿತ ಕಂಡಿತು. ಪವರ್‌ಗ್ರಿಡ್‌ ಶೇ 11.29, ಕೊಟ್ಯಾಕ್‌ ಬ್ಯಾಂಕ್‌ ಶೇ 11.23, ಬಜಾಜ್‌ ಫೈನಾನ್ಸ್‌ ಶೇ 11.11, ಎಚ್‌ಡಿಎಫ್‌ಸಿ ಬ್ಯಾಂಕ್‌ ಶೇ 9.92 ಹಾಗೂ ಎನ್‌ಟಿಪಿಸಿ ಶೇ 8.08ರಷ್ಟು ಕುಸಿದಿದೆ. 

ಬ್ಯಾಂಕಿಂಗ್‌ ಮತ್ತು ಟೆಲಿಕಾಂ ವಲಯದ ಷೇರುಗಳು ತೀವ್ರ ಮಾರಾಟ ಒತ್ತಡಕ್ಕೆ ಸಿಲುಕಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು