ಬುಧವಾರ, ಜನವರಿ 29, 2020
29 °C

ಸಾರ್ವಕಾಲಿಕ ಗರಿಷ್ಠ ಮಟ್ಟದ ವಹಿವಾಟು

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ : ದೇಶಿ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ಷೇರುಪೇಟೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿವೆ. ತಂತ್ರಜ್ಞಾನ, ಬ್ಯಾಂಕಿಂಗ್‌ ಮತ್ತು ಲೋಹ ವಲಯದ ಷೇರುಗಳು ಉತ್ತಮ ಗಳಿಕೆ ಕಂಡುಕೊಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ದಿನದ 260 ಅಂಶ ಏರಿಕೆ ಕಂಡು 41,860 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 1.08 ಲಕ್ಷ ಕೋಟಿ ಹೆಚ್ಚಾಗಿದ್ದು, ಷೇರುಪೇಟೆಯ ಬಂಡವಾಳ ಮೌಲ್ಯ ₹ 158.75 ಲಕ್ಷ ಕೋಟಿಗಳಿಗೆ ತಲುಪಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 73 ಅಂಶ ಹೆಚ್ಚಾಗಿ 12,329 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಗರಿಷ್ಠ ಗಳಿಕೆ: ಇಂಡಸ್‌ಇಂಡ್‌ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಎಚ್‌ಯುಎಲ್‌, ಮಹೀಂದ್ರಾ, ಟಾಟಾ ಸ್ಟೀಲ್‌, ಪವರ್‌ ಗ್ರಿಡ್‌ ಮತ್ತು ಟೆಕ್ ಮಹೀಂದ್ರಾ ಷೇರುಗಳು ಶೇ 3.34ರವರೆಗೂ ಏರಿಕೆ ಕಂಡುಕೊಂಡಿವೆ.

ರೂಪಾಯಿ ಗಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 8 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 70.86 ರಂತೆ ವಿನಿಮಯಗೊಂಡಿತು. ಐದು ದಿನಗಳ ವಹಿವಾಟಿನಲ್ಲಿ 106 ಪೈಸೆಗಳಷ್ಟು ಏರಿಕೆಯಾಗಿದೆ.

ಸಕಾರಾತ್ಮಕ ಅಂಶಗಳು

ಇನ್ಫೊಸಿಸ್‌ ಷೇರು ಗಳಿಕೆ

ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಮೂರು ತಿಂಗಳ ಬಳಿಕ ಶೇ 1.8ಕ್ಕೆ ಏರಿಕೆ

ಇದೇ ವಾರ ಅಮೆರಿಕ–ಚೀನಾ ವಾಣಿಜ್ಯ ಒಪ್ಪಂದ ಏರ್ಪಡುವ ನಿರೀಕ್ಷೆ

ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳ ತೆರಿಗೆ ಪಾವತಿ ನಂತರದ ಗಳಿಕೆಯು ಉತ್ತಮವಾಗಿರುವ ಸಾಧ್ಯತೆ 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು