ಸೆನ್ಸೆಕ್ಸ್, ನಿಫ್ಟಿ ಶೇ 1ರಷ್ಟು ಇಳಿಕೆ

ಮುಂಬೈ (ಪಿಟಿಐ): ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಬ್ಯಾಂಕಿಂಗ್ ವಲಯದ ಷೇರುಗಳ ಮಾರಾಟ ಹೆಚ್ಚಿದ್ದ ಪರಿಣಾಮವಾಗಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಮಂಗಳವಾರದ ವಹಿವಾಟಿನಲ್ಲಿ ಶೇಕಡ 1ರಷ್ಟು ಕುಸಿತ ಕಂಡವು.
ವಿದೇಶಿ ಹೂಡಿಕೆಯ ಹೊರಹರಿವು ಕೂಡ ದೇಶಿ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಿತು. ಸೆನ್ಸೆಕ್ಸ್ 631 ಅಂಶ ಹಾಗೂ ನಿಫ್ಟಿ 187 ಅಂಶ ಇಳಿಕೆ ಕಂಡವು. ‘ಸ್ಥಳೀಯ ಹೂಡಿಕೆದಾರರು ವಿದೇಶದ ಮಾರುಕಟ್ಟೆಗಳಲ್ಲಿನ ವಿದ್ಯಮಾನಗಳನ್ನು ಗಮನಿಸುತ್ತಿದ್ದಾರೆ. ಯುರೋಪ್ ಹಾಗೂ ಅಮೆರಿಕದ ಮಾರುಕಟ್ಟೆಗಳಲ್ಲಿನ ಕುಸಿತವು ದೇಶದ ಮಾರುಕಟ್ಟೆಗಳ ಮೇಲೆಯೂ ಆಯಿತು. ಬಾಹ್ಯ ಪ್ರಭಾವದಿಂದಾಗಿ ಹೂಡಿಕೆದಾರರು ಕಾಲಕಾಲಕ್ಕೆ ಲಾಭ ನಗದೀಕರಿಸಿಕೊಳ್ಳುತ್ತಿದ್ದಾರೆ’ ಎಂದು ಕೋಟಕ್ ಸೆಕ್ಯುರಿಟೀಸ್‌ನ ಈಕ್ವಿಟಿ ಸಂಶೋಧನಾ ಮುಖ್ಯಸ್ಥ ಶ್ರೀಕಾಂತ್ ಚೌಹಾಣ್ ಹೇಳಿದ್ದಾರೆ.
ಸೋಲ್ ಮತ್ತು ಟೋಕಿಯೊ ಷೇರುಪೇಟೆಗಳು ಏರಿಕೆ ದಾಖಲಿಸಿವೆ. ಶಾಂಘೈ ಮತ್ತು ಹಾಂಗ್‌ಕಾಂಗ್ ಮಾರುಕಟ್ಟೆಗಳು ಇಳಿಕೆ ಕಂಡಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇಕಡ 0.46ರಷ್ಟು ಕಡಿಮೆ ಆಗಿದ್ದು ಪ್ರತಿ ಬ್ಯಾರೆಲ್‌ಗೆ 79.28 ಡಾಲರ್‌ಗೆ ತಲುಪಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.