ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಬೆಳವಣಿಗೆ: ಮತ್ತೆ ಕರಡಿ ಹಿಡಿತಕ್ಕೆ ಷೇರುಪೇಟೆ

ವಾಹನ, ಬ್ಯಾಂಕಿಂಗ್‌ ವಲಯದ ಷೇರುಗಳ ಮೌಲ್ಯದಲ್ಲಿ ಇಳಿಕೆ
Last Updated 25 ಸೆಪ್ಟೆಂಬರ್ 2019, 10:57 IST
ಅಕ್ಷರ ಗಾತ್ರ

ಮುಂಬೈ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿರುದ್ಧ ಅಲ್ಲಿನ ಡೆಮಾಕ್ರೆಟಿಕ್‌ ಪಕ್ಷವು ಔಪಚಾರಿಕವಾಗಿ ವಾಗ್ದಂಡನೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದು ಭಾರತವನ್ನೂ ಒಳಗೊಂಡು ಜಾಗತಿಕ ಷೇರುಪೇಟೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು.

ಎರಡು ದಿನಗಳ ಗೂಳಿ ಓಟಕ್ಕೆ ತಡೆಯೊಡ್ಡುವ ಮೂಲಕ ಷೇರುಪೇಟೆಯ ವಹಿವಾಟಿನ ಮೇಲೆ ಕರಡಿ ಮತ್ತೆ ತನ್ನ ಹಿಡಿತ ಸಾಧಿಸಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 503 ಅಂಶ ಇಳಿಕೆ ಕಂಡು 38,593 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 148 ಅಂಶ ಇಳಿಕೆಯಾಗಿ 11,440 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಎಸ್‌ಬಿಐ, ಟಾಟಾ ಮೋಟರ್ಸ್‌, ಮಾರುತಿ, ಯೆಸ್‌ ಬ್ಯಾಂಕ್‌, ಮಹೀಂದ್ರಾ, ಎಚ್‌ಡಿಎಫ್‌ಸಿ, ಐಟಿಸಿ, ವೇದಾಂತ, ಹೀರೊ ಮೋಟೊಕಾರ್ಪ್‌, ಟಾಟಾ ಸ್ಟೀಲ್‌ ಮತ್ತು ಎಲ್‌ಆ್ಯಂಡ್‌ ಟಿ ಶೇ 7.37ರವರೆಗೂ ಇಳಿಕೆ ಕಂಡಿವೆ.

ಏಷ್ಯಾ ಮತ್ತು ಯುರೋಪ್‌ ಮಾರುಕಟ್ಟೆಗಳಲ್ಲಿಯೂ ವಹಿವಾಟು ಇಳಿಮುಖವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT