ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಮುಂದುವರಿದ ಗೂಳಿ ಓಟ: 52,000 ಅಂಶ ದಾಟಿದ ಸೆನ್ಸೆಕ್ಸ್‌

ಸಾರ್ವಕಾಲಿಕ ದಾಖಲೆ
Last Updated 15 ಫೆಬ್ರುವರಿ 2021, 5:18 IST
ಅಕ್ಷರ ಗಾತ್ರ

ಬೆಂಗಳೂರು: ಬಹುತೇಕ ಕಂಪನಿಗಳ ಡಿಸೆಂಬರ್‌ ತ್ರೈಮಾಸಿಕ ಲಾಭಾಂಶ ಉತ್ತಮವಾಗಿರುವುದರಿಂದ ಸೋಮವಾರ ದೇಶದ ಷೇರುಪೇಟೆ ಸಾರ್ವಕಾಲಿಕ ದಾಖಲೆಗೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) ಆರಂಭಿಕ ವಹಿವಾಟಿನಲ್ಲೇ 463.71 ಅಂಶಗಳು ಏರಿಕೆಯಾಗಿದೆ.

ಸೆನ್ಸೆಕ್ಸ್‌ 463.71 ಅಂಶಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆಯಾದ 52,008.01 ಅಂಶ ಮುಟ್ಟಿದೆ. ನಿಫ್ಟಿ 126.25 ಅಂಶ ಹೆಚ್ಚಳವಾಗಿ 15,289 ಅಂಶಗಳನ್ನು ದಾಟಿದೆ.

ಹದಿನಾಲ್ಕು ವಲಯವಾರು ಸೂಚ್ಯಂಕಗಳ ಪೈಕಿ 13 ವಲಯಗಳಲ್ಲಿನ ಕಂಪನಿಗಳ ಷೇರುಗಳು ಸಕಾರಾತ್ಮಕ ವಹಿವಾಟು ಕಂಡಿವೆ. ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಹಾಗೂ ಕೊಟ್ಯಾಕ್ ಬ್ಯಾಂಕ್‌ ಸೇರಿದಂತೆ ಬ್ಯಾಂಕಿಂಗ್‌ ಷೇರುಗಳು ಹೆಚ್ಚು ಗಳಿಕೆ ದಾಖಲಿಸಿವೆ.

ಆದರೆ, ಒಎನ್‌ಜಿಸಿ, ಟೆಕ್‌ ಮಹೀಂದ್ರಾ, ಎನ್‌ಟಿಪಿಸಿ, ಸನ್‌ ಫಾರ್ಮಾ ಹಾಗೂ ಟಿಸಿಎಸ್‌ ಷೇರುಗಳ ಬೆಲೆ ಇಳಿಕೆಯಾಗಿದೆ.

ಜಗತ್ತಿನಾದ್ಯಂತ ಕೋವಿಡ್‌ ಲಸಿಕೆ ಅಭಿಯಾನ ಚುರುಕುಗೊಂಡಿರುವುದೂ ಸಹ ಏಷ್ಯಾದ ಷೇರುಪೇಟೆಗಳ ಪರಿಣಾಮ ಬೀರಿದೆ.

ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 51,544.30 ಅಂಶಗಳು, ನಿಫ್ಟಿ 15,163.30 ಅಂಶಗಳು ತಲುಪಿತ್ತು. ವಿದೇಶಿ ಹೂಡಿಕೆದಾರರು ₹37.33 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್‌ 515.40 ಅಂಶ ಏರಿಕೆಯಾಗಿ 52,059.70 ಅಂಶ ಹಾಗೂ ನಿಫ್ಟಿ 135.90 ಅಂಶ ಹೆಚ್ಚಳದೊಂದಿಗೆ 15,299.20 ಅಂಶಗಳನ್ನು ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT