ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

531 ಅಂಶ ಕುಸಿದ ಸೆನ್ಸೆಕ್ಸ್

Last Updated 25 ಜನವರಿ 2021, 15:57 IST
ಅಕ್ಷರ ಗಾತ್ರ

ಮುಂಬೈ: ಸೋಮವಾರ ಒಟ್ಟು 531 ಅಂಶ ಕುಸಿತ ಕಂಡ ಸೆನ್ಸೆಕ್ಸ್, 48,347 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಇಂಧನ ಮತ್ತು ಐ.ಟಿ. ವಲಯದ ಷೇರುಗಳ ಮಾರಾಟ ಹೆಚ್ಚಿದ್ದ ಕಾರಣದಿಂದಾಗಿ ಸೆನ್ಸೆಕ್ಸ್ ಇಳಿಕೆ ಕಾಣುವಂತಾಯಿತು ಎಂದು ವರ್ತಕರು ಹೇಳಿದ್ದಾರೆ.

133 ಅಂಶ ಕುಸಿತ ಕಂಡ ನಿಫ್ಟಿ, 14,238 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಕಳೆದ ಒಂಬತ್ತು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 1,444 ಅಂಶ ಕುಸಿದಿದೆ, ನಿಫ್ಟಿ 405 ಅಂಶ ಇಳಿಕೆ ಕಂಡಿದೆ.

‘ದೇಶಿ ಷೇರು ಮಾರುಕಟ್ಟೆಗಳು ಸೋಮವಾರದ ವಹಿವಾಟಿನಲ್ಲಿ ಸ್ಥಿರ ವಹಿವಾಟು ಕಾಣಲಿಲ್ಲ. ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಷೇರುಗಳ ಮಾರಾಟಕ್ಕೆ ಹೆಚ್ಚು ಗಮನ ನೀಡಿದರು’ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ವಿನೋದ್ ಮೋದಿ ಹೇಳಿದರು.

ಭಾರತ ಮತ್ತು ಚೀನಾ ಗಡಿಯಲ್ಲಿ ಬಿಗುವಿನ ಪರಿಸ್ಥಿತಿ ಇದೆ ಎಂಬ ವರದಿಗಳು ಕೂಡ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದವು ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದರು. ಬಜೆಟ್‌ ಮಂಡನೆ ಆಗುವವರೆಗೂ ಮಾರುಕಟ್ಟೆಯಲ್ಲಿ ಚಂಚಲ ವಹಿವಾಟು ಇರುವ ಸಾಧ್ಯತೆ ಇದೆ ಎಂದು ನಾಯರ್ ಹೇಳಿದರು.

ಎಕ್ಸಿಸ್ ಬ್ಯಾಂಕ್, ಸನ್‌ ಫಾರ್ಮಾ, ಬಜಾಜ್ ಆಟೊ, ಬಜಾಜ್‌ ಫಿನ್‌ಸರ್ವ್‌, ಎಚ್‌ಡಿಎಫ್‌ಸಿ ಬ್ಯಾಂಕ್, ಡಾ ರೆಡ್ಡೀಸ್ ಷೇರುಗಳು ಗಳಿಕೆ ಕಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT