ಬುಧವಾರ, ಮೇ 27, 2020
27 °C

ಮಾರಾಟ ಒತ್ತಡ: ಮುಂಬೈ ಷೇರುಪೇಟೆ ಪಾಲಿಗೆ ಕರಾಳ ದಿನ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮೂರನೇ ಹಂತದ ದಿಗ್ಬಂಧನ ಜಾರಿಗೆ ಬಂದ ದಿನವು ಮುಂಬೈ ಷೇರುಪೇಟೆ ಪಾಲಿಗೆ ಕರಾಳ ದಿನವಾಗಿ ಪರಿಣಮಿಸಿತು.

‘ಕೋವಿಡ್‌–19’ ವಿಶ್ವದಾದ್ಯಂತ ಹಬ್ಬಲು ಚೀನಾದ ಕೊಡುಗೆ ಇರುವುದರಿಂದ ಅಮೆರಿಕವು ಆ ದೇಶದ ಸರಕುಗಳಿಗೆ ಗರಿಷ್ಠ ಮಟ್ಟದಲ್ಲಿ ಸುಂಕ ವಿಧಿಸಲು ಮುಂದಾಗಿದೆ. ಇದರಿಂದ ಎರಡೂ ದೇಶಗಳ ನಡುವಣ ವಾಣಿಜ್ಯ ಸಮರ ಮತ್ತೆ ಮುನ್ನೆಲೆಗೆ ಬಂದಿದೆ.

ಇದು ವಿಶ್ವದಾದ್ಯಂತ ಹೂಡಿಕೆದಾರರ ಖರೀದಿ ಉತ್ಸಾಹವನ್ನು ಕುಗ್ಗಿಸಿದೆ. ಏಷ್ಯಾದ ಪ್ರಮುಖ ಷೇರುಪೇಟೆಗಳಲ್ಲಿಯೂ ಇದು ಪ್ರತಿಫಲಿಸಿತು. ಸಂವೇದಿ ಸೂಚ್ಯಂಕ 2,002.27 ಅಂಶಗಳನ್ನು ಕಳೆದುಕೊಂಡು 31,715.35 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು