ಬುಧವಾರ, ಫೆಬ್ರವರಿ 26, 2020
19 °C

ಷೇರುಪೇಟೆ ಚೇತರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ : ದೇಶದ ಷೇರುಪೇಟೆಗಳು ಸತತ ಎರಡನೇ ವಹಿವಾಟು ಅವಧಿಯಲ್ಲಿಯೂ ಏರಿಕೆ ದಾಖಲಿಸಿವೆ.

ಸೆಪ್ಟೆಂಬರ್‌ ತಿಂಗಳ ಚಿಲ್ಲರೆ ಮತ್ತು ಸಗಟು ಹಣದುಬ್ಬರಗಳು ಏರಿಕೆ ಕಂಡಿವೆ. ವಿದೇಶಿ ಬಂಡವಾಳ ಹೊರಹರಿವು ಮುಂದುವರಿದಿದೆ. ಈ ಎಲ್ಲಾ ಬೆಳವಣಿಗೆಗಳ ಹೊರತಾಗಿಯೂ, ದೇಶಿ ಸಾಂಸ್ಥಿಕ ಹೂಡಿಕೆದಾರರ ಸಕ್ರಿಯ ಭಾಗವಹಿಸುವಿಕೆಯು ಸಕಾರಾತ್ಮಕ ಚಟುವಟಿಕೆ ನಡೆಯುವಂತೆ ಮಾಡಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 132 ಅಂಶ ಏರಿಕೆ ಕಂಡು 34,865 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 40 ಅಂಶ ಹೆಚ್ಚಾಗಿ 10,512 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ಕಚ್ಚಾ ತೈಲ ದರ ಶೇ 0.98ರಷ್ಟು ಹೆಚ್ಚಾಗಿ, ಒಂದು ಬ್ಯಾರೆಲ್‌ಗೆ 81.79 ಡಾಲರ್‌ನಂತೆ ಮಾರಾಟವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)