ಕಲಬುರ್ಗಿ: ನಗರದ ಸೂಪರ್ ಮಾರುಕಟ್ಟೆಯಲ್ಲಿ ಈ ವಾರ ತರಕಾರಿ ದರದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಬಹುತೇಕ ತರಕಾರಿಗಳ ಬೆಲೆ ₹30ರಿಂದ ₹60ರ ಆಸುಪಾಸಿನಲ್ಲಿಯೇ ಇದೆ. ಇದರಿಂದಾಗಿ ಗ್ರಾಹಕರಿಗೆ ಈ ವಾರ ತರಕಾರಿ ದರ ದುಬಾರಿ ಎನಿಸಿಲ್ಲ.

ಕಳೆದ ವಾರಕ್ಕೆ ಹೋಲಿಸಿದರೆ ಟೊಮೆಟೊ, ಈರುಳ್ಳಿ, ಬೆಂಡೆಕಾಯಿ, ಹಸಿಮೆಣಸಿನಕಾಯಿ, ಹಾಗಲಕಾಯಿ, ಹೀರೇಕಾಯಿ, ಆಲೂಗಡ್ಡೆ, ಡಬ್ಬುಮೆಣಸಿನಕಾಯಿ, ಅವರೆಕಾಯಿ ತರಕಾರಿಗಳು ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿವೆ. ಬದನೆಕಾಯಿ ಹಾಗೂ ಸವತೆಕಾಯಿ ಕಳೆದ ವಾರಕ್ಕಿಂತ ಈ ವಾರ ₹20 ದರ ಹೆಚ್ಚಿಸಿಕೊಂಡು ಕೆ.ಜಿ.ಗೆ ₹60 ರಂತೆ ಮಾರಾಟ ಆಗುತ್ತಿವೆ.

ಹೂಕೋಸು ಹಾಗೂ ಎಲೆಕೋಸುಗಳನ್ನು ₹20ಕ್ಕೆ ಒಂದರಂತೆ ಮಾರಲಾಗುತ್ತಿದೆ. ನುಗ್ಗೆಕಾಯಿ ಕೆ.ಜಿ.ಗೆ ₹120 ದರ ಇದೆ. ಶುಂಠಿ ₹60ಕ್ಕೆ ಕೆ.ಜಿ., ಬೆಳ್ಳುಳ್ಳಿ ₹120ಕ್ಕೆ ಕೆ.ಜಿ. ಮಾರಾಟ ಆಗುತ್ತಿದೆ. ₹60ಕ್ಕೆ 100 ಅಂಬಾಳಿ ಎಲೆ ಮಾರಲಾಗುತ್ತಿದೆ.

ಸೊಪ್ಪುಗಳ ದರ

ಕೊತ್ತಂಬರಿ ಹಾಗೂ ಕರಿಬೇವು ₹5ಕ್ಕೆ 1 ಸಿವುಡು, ಪುದೀನಾ ₹20ಕ್ಕೆ 1 ಸಿವುಡು ಮಾರಾಟ ಆಗುತ್ತಿವೆ. ಮೆಂತ್ಯೆ, ಸಬ್ಬಸಗಿ, ಪಾಲಕ್, ಮೂಲಂಗಿ, ಹುಣಸೆಕಾಯಿ ಪಲ್ಯ ₹20ಕ್ಕೆ 4 ಸಿವುಡು ಖರೀದಿ ಆಗುತ್ತಿವೆ.

ಹೂವುಗಳ ಬೆಲೆ: ಗುಲಾಬಿ ಹೂವು ₹20ಕ್ಕೆ 50 ಗ್ರಾಂ, ಕನಕಾಂಬರ ಹಾಗೂ ಮಲ್ಲಿಗೆ ₹10ಕ್ಕೆ ಮೊಳ, ಸೇವಂತಿಗೆ ₹20ಕ್ಕೆ ಮೊಳ ಮಾರಾಟ ಆಗುತ್ತಿವೆ. ಹೂವಿನ ದರ ಹಾಗೂ ಖರೀದಿಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ ಎಂದು ಹೂವಿನ ವ್ಯಾಪಾರಿಗಳು ತಿಳಿಸಿದರು.

ಹಣ್ಣುಗಳ ದರ

ಹಣ್ಣುಗಳ ದರದಲ್ಲೂ ಈ ವಾರ ಸ್ಥಿರತೆ ಇದೆ. ಸೇಬು ₹180ಕ್ಕೆ ಕೆ.ಜಿ., ದ್ರಾಕ್ಷಿ ₹150, ಮೂಸಂಬಿ ಹಾಗೂ ಕಿತ್ತಳೆ ₹100, ಪೇರು ₹40, ಬಾಳೆ ₹80, ಸಪೋಟ ₹80ಕ್ಕೆ ಕೆ.ಜಿ. ಖರೀದಿಸಲಾಗುತ್ತಿದೆ. ದಾಳಿಂಬೆ ₹50ಕ್ಕೆ 1ರಂತೆ ಮಾರಲಾಗುತ್ತಿದೆ.

ಸಂಜೆ ಜನದಟ್ಟಣೆ

ಸೂಪರ್ ಮಾರುಕಟ್ಟೆಯಲ್ಲಿ ಸಂಜೆ ವೇಳೆ ತರಕಾರಿ ಖರೀದಿ ಜೋರಾಗಿ ನಡೆಯುತ್ತಿದೆ. ಮಧ್ಯಾಹ್ನ ಬಿಸಿಲು ಇರುವುದರಿಂದ ಸಂಜೆ ವೇಳೆ ಆಗಮಿಸುವವರೇ ಹೆಚ್ಚು. ಸಂಜೆ 4ರಿಂದ ರಾತ್ರಿ 9 ಗಂಟೆವರೆಗೂ ಹೆಚ್ಚು ಜನದಟ್ಟಣೆ ಇರುತ್ತೆ. ಬಿಸಿಲು ಹೆಚ್ಚಾದಂತೆ ಬೆಳಿಗ್ಗೆ ಹಾಗೂ ಸಂಜೆ ಮಾರುಕಟ್ಟೆಗೆ ಬರುವವರ ಸಂಖ್ಯೆಯೂ ಹೆಚ್ಚುತ್ತದೆ ಎನ್ನುತ್ತಾರೆ ಎಫ್‌ಕೆಪಿ ತರಕಾರಿ ಅಂಗಡಿಯ ಮಾಲೀಕ ಸಿರಾಜುದ್ದೀನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.