ಬೆಂಗಳೂರು: ಇಂಡಿಯಾ ಇನ್‌ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್, ದೀರ್ಘಾವಧಿ ಮೂಲ ಸೌಕರ್ಯ ಬಾಂಡ್‌ಗಳ ಮೂಲಕ ರೂ. 1,200 ಕೋಟಿಗಳನ್ನು ಸಂಗ್ರಹಿಸಲು ಉದ್ದೇಶಿಸಿದೆ.

ಈ ತೆರಿಗೆ ಉಳಿತಾಯ ಬಾಂಡ್‌ಗಳ ಸಾರ್ವಜನಿಕ ನೀಡಿಕೆಯು ಈಗಾಗಲೇ (ಫೆಬ್ರುವರಿ 4ರಿಂದ) ಆರಂಭಗೊಂಡಿದ್ದು ಮಾರ್ಚ್ 4ರವರೆಗೆ ನಡೆಯಲಿದೆ. ಸಂಸ್ಥೆಯ ಮೂಲ ಸೌಕರ್ಯ ಯೋಜನೆಗಳಿಗೆ ಹಣ ಸಂಗ್ರಹಿಸುವ ಉದ್ದೇಶದ ಈ ಬಾಂಡ್‌ಗಳು ವಿಭಿನ್ನ ಬಡ್ಡಿ ಮರು ಪಾವತಿ ಮತ್ತು ಮರು ಖರೀದಿ ಆಯ್ಕೆಯೊಂದಿಗೆ ನಾಲ್ಕು ಶ್ರೇಣಿಗಳಲ್ಲಿ ಖರೀದಿಗೆ ಲಭ್ಯ ಇವೆ ಎಂದು ‘ಐಐಎಫ್‌ಸಿಎಲ್’ನ ವ್ಯವಸ್ಥಾಪಕ ನಿರ್ದೇಶಕ ಎಸ್. ಕೆ. ಗೋಯಲ್, ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರತಿ ಬ್ರಾಂಡ್‌ನ ಮುಖ ಬೆಲೆ ರೂ. 1000 ಆಗಿದ್ದು, ಕನಿಷ್ಠ ಹೂಡಿಕೆಯು ರೂ. 5000 ಇದೆ. 2010-11ನೇ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆಗೆ ಒಳಪಡುವ ಮೊತ್ತದಲ್ಲಿ ರೂ. 20 ಸಾವಿರದವರೆಗೆ ವಿನಾಯ್ತಿ ಇದೆ. ಬಡ್ಡಿ ದರವು ಶೇ 8.15ರಿಂದ ಶೇ 8.30ರವರೆಗೆ ಇರಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.