ನವದೆಹಲಿ(ಪಿಟಿಐ): ದಕ್ಷಿಣ ಭಾರತದ ಲ್ಲಿನ ಕಳಪೆ ಸಾಧನೆಯಿಂದಾಗಿ ಜನವರಿ ಯಲ್ಲಿ ದೇಶದಲ್ಲಿನ ಒಟ್ಟಾರೆ ಚಹಾ ಉತ್ಪಾದನೆ ಶೇ 6ರಷ್ಟು ಕುಸಿತ ಕಂಡಿದೆ. 206.30 ಲಕ್ಷ ಕೆ.ಜಿಗಳಷ್ಟು ಮಾತ್ರವೇ ಚಹಾ ಉತ್ಪಾದನೆ ಆಗಿದೆ. 2013ರ ಜನವರಿಯಲ್ಲಿ 219.20 ಲಕ್ಷ ಕೆ.ಜಿ ಉತ್ಪಾದನೆ ಆಗಿತ್ತು ಎಂದು ಚಹಾ ಮಂಡಳಿ ಅಂಕಿ ಅಂಶಗಳು ತಿಳಿಸಿವೆ.

ಕರ್ನಾಟಕ, ತಮಿಳುನಾಡು, ಕೇರಳ ದಲ್ಲಿ ಜನವರಿಯಲ್ಲಿ ಒಟ್ಟು 167.90 ಲಕ್ಷ ಚಹಾ ಉತ್ಪಾದನೆ ಆಗಿದೆ. ಹಿಂದಿನ ವರ್ಷದ ಜನವರಿಯಲ್ಲಿ 192.10 ಲಕ್ಷ ಕೆ.ಜಿಯಷ್ಟಿತ್ತು. ಅಸ್ಸಾನಲ್ಲಿ ಮಾತ್ರ 30 ಸಾವಿರ ಕೆ.ಜಿಗಳಷ್ಟು ಉತ್ಪಾದನೆ ಹೆಚ್ಚಿದೆ.

ಚಹಾ ರಫ್ತು ಕುಸಿತ
ಇನ್ನೊಂದೆಡೆ ಚಹಾ ರಫ್ತು ಚಟುವಟಿ ಕೆಯೂ ಹಿನ್ನಡೆ ಕಂಡಿದೆ. ಪ್ರಸಕ್ತ ಹಣ ಕಾಸು ವರ್ಷದ ಏಪ್ರಿಲ್, ಫೆಬ್ರುವರಿ ಅವಧಿಯಲ್ಲಿ ಚಹಾ ರಫ್ತು ಶೇ 13.24 ರಷ್ಟು ಕುಸಿತ ಕಂಡಿದೆ. ಕೇವಲ 69.56 ಕೋಟಿ ಡಾಲರ್ (₨4313 ಕೋಟಿ) ಮೌಲ್ಯದ ಚಹಾ ರಫ್ತಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 80.18 ಕೋಟಿ ಡಾಲರ್ (₨5212 ಕೋಟಿ) ಬೆಲೆಯ ಚಹಾಪುಡಿ ವಿವಿಧ ದೇಶಗಳಿಗೆ ರವಾನೆ ಆಗಿತ್ತು ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಮಂದ ಗತಿ ವಹಿವಾಟು ಕಂಡುಬಂದಿದ್ದರಿಂದಲೇ ಭಾರತದ ಚಹಾ ರಫ್ತು ಇಳಿಮುಖವಾ ಗಿದೆ ಎಂದು ವಿಶ್ಲೇಷಿಸಲಾಗಿದೆ. ಯುನೈಟೆಡ್ ಕಿಂಗ್ಡಂ, ಇರಾಕ್ ಮತ್ತು ಯುನೈಟೆಡ್ ಅರಬ್ ಎಮಿ ರೇಟ್ಸ್ ದೇಶಗಳು ಭಾರತದ ಚಹಾಕ್ಕೆ ಮುಖ್ಯ ಮಾರುಕಟ್ಟೆಗಳಾಗಿವೆ. ಈ ಮಧ್ಯೆ, ಪಾಕಿಸ್ತಾನ, ಇರಾನ್ ಮತ್ತು ರಷ್ಯಾದಿಂದಲೂ ಭಾರತದ ಚಹಾಕ್ಕೆ ಬೇಡಿಕೆ ಹೆಚ್ಚುತ್ತಿದೆ. ಪಾಕಿಸ್ತಾನದಲ್ಲಿ ವಾರ್ಷಿಕ 22 ಕೋಟಿ ಕೆ.ಜಿ ಚಹಾಪುಡಿ ಬಳಕೆಯಾಗುತ್ತಿದ್ದು, ಭಾರತದಿಂದ 2013ರಲ್ಲಿ 2.50 ಕೋಟಿ ಕೆ.ಜಿ ಆಮದು ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.