ಮುಂಬೈ (ಪಿಟಿಐ): ಅಮೆರಿಕದ ಗೃಹ ಮಾರುಕಟ್ಟೆಗೆ ಸಂಬಂಧಿಸಿದ ವರದಿ ಮಂಗಳವಾರ ಪ್ರಕಟಗೊಳ್ಳಲಿರುವುದು ಮತ್ತು ಆ ದಿನವೇ ಅಲ್ಲಿನ ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿ (ಎಫ್‌ಒಎಂಸಿ) ಸಭೆ ಸೇರಲಿರುವುದು, ಈ ವಾರ ಜಾಗತಿಕ ಷೇರುಪೇಟೆಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳು ಇವೆ ಎಂದು ಹೂಡಿಕೆ ಸಂಸ್ಥೆ ಇಂಡಿಯಾ ಇನ್ಫೋಲೈನ್ ಹೇಳಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಲ್ಪಾವಧಿ ಬಡ್ಡಿ ದರಗಳನ್ನು ಮತ್ತೊಮ್ಮೆ ಶೇ 0.25ರಷ್ಟು ಹೆಚ್ಚಿಸಿರುವುದು ಕೂಡ ಮುಂಬೈ ಷೇರುಪೇಟೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಮುಂಬರುವ ದಿನಗಳಲ್ಲಿ ಇದರ ಪ್ರತಿಫಲನಗಳು ವಹಿವಾಟಿನ ಮೇಲೂ ಕಾಣಿಸಿಕೊಳ್ಳಬಹುದು.

ಜಾಗತಿಕ ಆರ್ಥಿಕ ಅಸ್ಥಿರತೆಯ ನಡುವೆಯೂ ಕಳೆದ ವಾರಾಂತ್ಯದಲ್ಲಿ ಸೂಚ್ಯಂಕ 66 ಅಂಶಗಳಷ್ಟು ಚೇತರಿಕೆ ಕಂಡಿದ್ದು, 16,933ಅಂಶಗಳಿಗೆ ವಹಿವಾಟು ಕೊನೆಗೊಳಿಸಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಿರುವುದು ಕೂಡ ಈ ವಾರ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾದ ಇತರ ಸಂಗತಿಗಳು.

ಹಣದುಬ್ಬರ ದರವು ಹಿತಕರ ಮಟ್ಟಕ್ಕೆ ಇಳಿಕೆ ಕಾಣದಿರುವುದು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದಾಜಿಸಲಾಗಿರುವ `ಜಿಡಿಪಿ~ ಗುರಿಯ ಬಗ್ಗೆ ಸಂಶಯ ವ್ಯಕ್ತಪಡಿಸಿರುವುದು ಹೂಡಿಕೆದಾರರಲ್ಲಿ ತಳಮಳ ಹೆಚ್ಚುವಂತೆ ಮಾಡಿದೆ.

ಹೂಡಿಕೆದಾರರ ಆತ್ಮವಿಶ್ವಾಸ ಮರಳುವಂತೆ ಮಾಡುವ ಬೆಳವಣಿಗೆಗಳನ್ನು ಪೇಟೆ ನಿರೀಕ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್22 ರಂದು ವಾಷಿಂಗ್ಟನ್‌ನಲ್ಲಿ ನಡೆಯಲಿರುವ `ಬ್ರಿಕ್~ ದೇಶಗಳ ವಾಣಿಜ್ಯ ಸಚಿವರುಗಳ ಸಭೆ ಮಹತ್ವ ಪಡೆದುಕೊಂಡಿದೆ.

ಸಭೆಯಲ್ಲಿ ಜಾಗತಿಕ ಆರ್ಥಿಕ ಅಸ್ಥಿರತೆಗೆ ಸಂಬಂಧಿಸಿದಂತೆ `ಬ್ರಿಕ್~ ದೇಶಗಳು ಕೈಗೊಳ್ಳಬೇಕಿರುವ ಜಾಗತಿಕ ನೀತಿಯೊಂದರ ಕುರಿತು ಚರ್ಚೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.