ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಕಿಯಾ:ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್ ತಯಾರಿಕಾ ಸಂಸ್ಥೆ ನೋಕಿಯಾ, ಸಿಂಬಿಯನ್ ಬೆಲ್ಲೆ ಮತ್ತು  ಸಮೀಪ ಸಂವಹನ ತಂತ್ರಜ್ಞಾನ ಆಧಾರಿತ ಮೂರು ಹೊಸ ಚುರುಕಿನ ಮೊಬೈಲ್ ಸಾಧನಗಳನ್ನು  (ಸ್ಮಾರ್ಟ್‌ಫೋನ್) ಮಾರುಕಟ್ಟೆಗೆ ಪರಿಚಯಿಸಿದೆ.

ನೋಕಿಯಾ 600, ನೋಕಿಯಾ 700 ಮತ್ತು ನೋಕಿಯಾ 701 ಸಾಧನಗಳ ಬೆಲೆಗಳು ಕ್ರಮವಾಗಿ 12,999, 18,099 ಮತ್ತು 18,999 ಇದೆ.

ಸಿಂಬಿಯನ್ ಬೆಲ್ಲೆ ತಂತ್ರಜ್ಞಾನ ಆಧಾರಿತ ಈ ಹೊಸ ಸ್ಮಾರ್ಟ್‌ಫೋನ್‌ಗಳು, ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್‌ಎಫ್‌ಸಿ) ನೆರವಿನಿಂದ ಬರೀ ಪರಸ್ಪರ ಸಂಪರ್ಕಕ್ಕೆ ಬಂದರೂ ದತ್ತಾಂಶ, ಚಿತ್ರ ಮತ್ತಿತರ ಮಾಹಿತಿಗಳನ್ನು ಸ್ವಯಂಚಾಲಿತವಾಗಿ ವಿನಿಮಯ ಮಾಡಿಕೊಳ್ಳುವ ಸೌಲಭ್ಯ ಒಳಗೊಂಡಿವೆ.

ಎರಡು ಮೊಬೈಲ್‌ಗಳನ್ನು ಹತ್ತಿರ ತಂದು ಪರಸ್ಪರ  ತಟ್ಟಿದರೆ ಸಾಕು  (ಜಸ್ಟ್ ಟ್ಯಾಪ್) ಮಾಹಿತಿ ಸುಲಲಿತವಾಗಿ ವರ್ಗಾವಣೆಗೊಳ್ಳುತ್ತದೆ ಎಂದು ನೋಕಿಯಾ ಇಂಡಿಯಾದ ಪ್ರಾದೇಶಿಕ ಜನರಲ್ ಮ್ಯಾನೇಜರ್ ಟಿ. ಎಸ್. ಶ್ರೀಧರ್ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದೇ ಸ್ಥಳದಲ್ಲಿ ಇರುವ ಎರಡು ಮೊಬೈಲ್‌ಗಳು ವಯರ್‌ಲೆಸ್ ಸಂಪರ್ಕದ ಮೂಲಕ ಮಾಹಿತಿ ವಿನಿಮಯ ಇಲ್ಲಿ ನಡೆಯುತ್ತದೆ ಎಂದರು.   

ನೋಕಿಯಾ 701 ಮೊಬೈಲ್ ನೆರವಿನಿಂದ ಚಾಲಕರಹಿತ ವಾಹನವನ್ನು  ದೂರ ನಿಯಂತ್ರಣದಿಂದಲೇ ಚಲಾಯಿಸಲೂ ಸಾಧ್ಯ. ಬೆಂಗಳೂರಿನ ದಿವುಮ್ ಕಾರ್ಪೊರೇಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಿದ್ಧಪಡಿಸಿರುವ ಈ ತಂತ್ರಜ್ಞಾನದ ಕಾರ್ಯನಿರ್ವಹಣೆ ಬಗ್ಗೆ  ಸುದ್ದಿಗೋಷ್ಠಿಯಲ್ಲಿ ಪ್ರಾತ್ಯಕ್ಷಿಕೆ ನೀಡಲಾಯಿತು.

ಸಿಂಬಿಯನ್ ಬೆಲ್ಲೆ ಸಾಧನದ ನೆರವಿನಿಂದ ಕಾರ್ಯನಿರ್ವಹಿಸುವ ಈ ಸೌಲಭ್ಯವು ವಿಶ್ವದ ಯಾವುದೇ ಭಾಗದಿಂದ ಇಂಟರ್‌ನೆಟ್ ಸಂಪರ್ಕ ಹೊಂದಿರುವ ವಾಹನವನ್ನು ಚಲಾಯಿಸುವ ಮತ್ತು ನಿಯಂತ್ರಿಸುವ ಅನುಕೂಲತೆ ಒದಗಿಸಲಿದೆ.
ವಾಹನಕ್ಕೆ ಅಳವಡಿಸಿರುವ ಕ್ಯಾಮೆರಾ, ರಸ್ತೆ ಮೇಲಿನ ದೃಶ್ಯಗಳನ್ನು ನೇರವಾಗಿ ನೋಕಿಯಾ ಮೊಬೈಲ್‌ಗೆ ರವಾನಿಸುತ್ತದೆ. ಮೊಬೈಲ್ ಅನ್ನು ಎಡಬಲ ಬಾಗಿಸುವುದರ ಮೂಲಕವೇ ಇಲ್ಲಿ ವಾಹನ ನಿಯಂತ್ರಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT