ಬೆಂಗಳೂರು: ಬಜಾಜ್ ಅಲೈಯನ್ಸ್ ಲೈಫ್ ಇನ್ಶುರೆನ್ಸ್, ಎರಡು ಬಗೆಯ ಸುರಕ್ಷತಾ ಯೋಜನೆಗಳನ್ನು ಆರಂಭಿಸಿದೆ. ಎಲ್ಲ ಬಗೆಯ ಸಾಲದ ಹೊಣೆಗಳಿಗೆ ಭದ್ರತೆ ನೀಡುವ `ಐ-ಸೆಕ್ಯೂರ್ ಲೋನ್~ ಮತ್ತು ಪ್ರತಿ ವರ್ಷ ಪ್ರೀಮಿಯಂ ಮೊತ್ತ ಕಡಿಮೆಯಾಗಿ ಹೆಚ್ಚು ಭದ್ರತೆ ನೀಡುವ `ಐ- ಸೆಕ್ಯೂರ್ ಮೋರ್~ ಯೋಜನೆಗಳನ್ನು ಪರಿಚಯಿಸಿದೆ.
ಸಾಲದ ಹೊಣೆಗಾರಿಕೆ ತಗ್ಗಿಸಲು ಕಡಿಮೆ ವೆಚ್ಚದ ವಿಮೆ, ಹಣಕ್ಕೆ ಹೆಚ್ಚಿನ ಮೌಲ್ಯ, ಜಂಟಿ ವಿಮೆ ಸೌಲಭ್ಯ, ಮುಂಗಡ ಪ್ರೀಮಿಯಂ ಪಾವತಿಸಿ ರಿಯಾಯ್ತಿ ಪಡೆಯುವ ಅವಕಾಶ ಮತ್ತಿತರ ಸೌಲಭ್ಯಗಳು ಇಲ್ಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.